ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾರತೀಯ ನಟ ಓಂಪುರಿಗೆ ಗೌರವ

Last Updated 27 ಫೆಬ್ರುವರಿ 2017, 13:38 IST
ಅಕ್ಷರ ಗಾತ್ರ
ಲಾಸ್‌ ಎಂಜಲೀಸ್‌: ತಮ್ಮ ನೈಜ ನಟನೆಯ ಮೂಲಕ ಜನಪ್ರಿಯರಾಗಿದ್ದ ಭಾರತೀಯ ನಟ ಓಂಪುರಿ ಅವರನ್ನು ಆಸ್ಕರ್‌ 2017 ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸ್ಮರಿಸಲಾಯಿತು.
 
ಮುಂಬೈನಲ್ಲಿ ಇದೇ ವರ್ಷ ಜನವರಿಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದ ಓಂ ಪುರಿ ಅವರಿಗೆ ಗ್ರಾಮಿ ಪ್ರಶಸ್ತಿಗೆ ನಾಮಾಂಕಿತರಾಗಿದ್ದ ಗಾಯಕ ಹಾಗೂ ಗೀತೆ ರಚನೆಕಾರ ಸಾರಾ ಬ್ಯಾರಿಯೆಲ್ಸ್‌ ಅವರು ಸಂಗೀತ ಕಾರ್ಯಕ್ರಮದ ಮೂಲಕ ಈ ವಿಶೇಷ ಗೌರವ ಸಲ್ಲಿಸಿದ್ದಾರೆ.
 
ಡಾಲ್ಬಿ ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಜಾನಿ ಮೈಕೆಲ್‌ ಅವರ ‘Both side now’ ಎಂಬ ಗೀತೆಗೆ ಸಾರಾ ವಿಶೇಷ ಪ್ರದರ್ಶನ ನೀಡುವ ಮೂಲಕ ಭಾವನಾತ್ಮಕ ಸನ್ನಿವೇಶ ಸೃಷ್ಟಿಸಿ, ಓಂ ಪುರಿ ಸೇರಿದಂತೆ ಅಗಲಿದ ಹಲವು ಕಲಾವಿದರಿಗೆ ಗೌರವ ಸಲ್ಲಿಸಿದರು.
 
ಅಂತರರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯರಾಗಿದ್ದ ರಿಚಾರ್ಡ್ ಆಟಿನಬರೋ ಅವರ ‘ಗಾಂಧಿ’ ಚಿತ್ರದಲ್ಲಿ ನಟಿಸುವ ಮೂಲಕ ಓಂ ಪುರಿ ಅವರು ಅಂತರರಾಷ್ಟ್ರೀಯ ನಟನಾ ವೃತ್ತಿ ಆರಂಭಿಸಿದ್ದರು.
 
ವಿಶೇಷ ಆಂಗಿಕ ಭಾಷೆ, ಗಡುಸು ಮುಖ ಹಾಗೂ ನೈಜ ನಟನೆಯಿಂದ ಸಿನಿಪ್ರಿಯರನ್ನು ರಂಜಿಸಿದ್ದ ಇವರು, ‘ಈಸ್ಟ್‌ ಇಸ್‌ ಈಸ್ಟ್‌’, ‘ಸಿಟಿ ಆಫ್‌ ಜಾಯ್‌’, ‘ವೋಲ್ಫ್‌’, ‘ದಿ ಘೋಸ್ಟ್‌ ಅಂಡ್‌ ದಿ ಡಾರ್ಕ್‌ನೆಸ್‌’,  ‘ದಿ ಪರಲೋ ಆಫಿಸರ್‌’ ಮುಂತಾದ ಹಾಲಿವುಡ್‌ ಚಿತ್ರಗಳಲ್ಲಿ ನಟಿಸಿದ್ದರು.
 
ರಾಷ್ಟ್ರ ಪ್ರಶಸ್ತಿ, ಪದ್ಮ ಶ್ರೀ ಪ್ರಶಸ್ತಿ ಪುರಸ್ಕೃತ ನಟ ಓಂಪುರಿ ಅವರಿಗೆ ಬ್ರಿಟಿಷ್ ಸಿನಿಮಾಕ್ಕೆ ನೀಡಿದ ಕೊಡುಗೆಗಳಿಗಾಗಿ ಬ್ರಿಟನ್ ಸರ್ಕಾರದ ‘ಆರ್ಡರ್‌ ಆಫ್‌ ಬ್ರಿಟೀಷ್ ಎಂಪೈರ್‌’ ಗೌರವ ನೀಡಿ ಸನ್ಮಾನಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT