ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಬಲ್‌ ಟ್ರ್ಯಾಪ್‌ನಲ್ಲಿ ಅಂಕುರ್‌ಗೆ ಬೆಳ್ಳಿ

ಶೂಟಿಂಗ್: ಮಿಶ್ರ ತಂಡ ವಿಭಾಗದಲ್ಲಿ ಚಿನ್ನ ಗೆದ್ದ ಜಿತು
Last Updated 27 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಪದಕದ ಬರ ಎದುರಿಸಿದ್ದ ಭಾರತದ ಶೂಟರ್‌ಗಳಿಗೆ ಸೋಮವಾರ ಸಂಭ್ರಮ ಲಭಿಸಿತು. ಐಎಸ್‌ಎಸ್‌ಎಫ್‌ ವಿಶ್ವಕಪ್‌ ಶೂಟಿಂಗ್ ಚಾಂಪಿಯನ್‌ ಷಿಪ್‌ನಲ್ಲಿ ಆತಿಥೇಯರು ಮಿಶ್ರ ತಂಡ ವಿಭಾಗ ಮತ್ತು  ಡಬಲ್‌ ಟ್ರ್ಯಾಪ್‌ನಲ್ಲಿ ಪದಕಗಳನ್ನು ಗೆದ್ದುಕೊಂಡರು.

ಕರ್ಣಿ ಸಿಂಗ್ ಶೂಟಿಂಗ್ ರೇಂಜ್‌ ನಲ್ಲಿ ನಡೆಯತ್ತಿರುವ ಟೂರ್ನಿಯಲ್ಲಿ ಪುರುಷರ ಡಬಲ್‌ ಟ್ರ್ಯಾಪ್‌ನಲ್ಲಿ ಅಂಕುರ್ ಮಿತ್ತಲ್‌ ಬೆಳ್ಳಿಯ ಸಾಧನೆ ಮಾಡಿದರು. ದೆಹಲಿಯ 24 ವರ್ಷದ ಅಂಕುರ್‌ 2014ರ ಕಾಮನ್‌ವೆಲ್ತ್‌ ಕ್ರೀಡಾಕೂಟ ದಲ್ಲಿ ಪಾಲ್ಗೊಂಡಿದ್ದರು.  ಸೋಮವಾರ ನಡೆದ ಸ್ಪರ್ಧೆಯಲ್ಲಿ ಅವರು 74 ಪಾಯಿಂಟ್ಸ್ ಕಲೆ ಹಾಕಿ ಪದಕ ಪಡೆದರು.

ಚಿನ್ನದ ಪದಕಕ್ಕಾಗಿ ಆಸ್ಟ್ರೇಲಿಯಾದ ಜೇಮ್ಸ್‌ ವಾಲ್ಲಿಟ್‌ ಮತ್ತು ಅಂಕುರ್ ನಡುವೆ ಚುರುಕಿನ ಪೈಪೋಟಿ ಏರ್ಪ ಟ್ಟಿತ್ತು. ಒಂದು ಪಾಯಿಂಟ್‌ ಅಂತರ ದಿಂದ ಭಾರತದ ಶೂಟರ್‌ ಚಿನ್ನ ಜಯಿ ಸುವ ಅವಕಾಶ ಕಳೆದುಕೊಂಡರು. ಇಂಗ್ಲೆಂಡ್‌ನ ಜೇಮ್ಸ್‌ ಡೆಡ್ಮನ್‌ (56 ಪಾಯಿಂಟ್ಸ್)  ಕಂಚು ಗೆದ್ದುಕೊಂಡರು.

ಚಿನ್ನ: 10 ಮೀಟರ್ಸ್‌ ಏರ್‌ ರೈಫಲ್‌ನ ಮಿಶ್ರ ತಂಡ ವಿಭಾಗದಲ್ಲಿ ಜಿತು ರಾಯ್‌ ಮತ್ತು ಹೀನಾ ಸಿಧು ಚಿನ್ನ ಜಯಿಸಿದರು. ವಿಶ್ವಕಪ್‌ನಲ್ಲಿ ನಾಲ್ಕು ಬಾರಿ ಪದಕ ಜಯಿಸಿರುವ ಜಿತು ರಾಯ್ ಮತ್ತು ಏಷ್ಯನ್‌ ಶೂಟಿಂಗ್ ಚಾಂಪಿಯನ್‌ಷಿಪ್‌ ನಲ್ಲಿ ಒಂದು ಚಿನ್ನ ಹಾಗೂ ಒಂದು ಕಂಚು ಗೆದ್ದಿರುವ ಹೀನಾ ನಿಖರ ಗುರಿ ಹಿಡಿಯುವಲ್ಲಿ ಯಶಸ್ವಿಯಾದರು.

ಈ ಜೋಡಿ 5–3ರಲ್ಲಿ ಜಪಾನ್‌ನ ಯೂಕಾರಿ ಕೊನಿಷಿ ಮತ್ತು ಟೊಮು ಯುಕಿ ಮಸೂದಾ ಎದುರು ಗೆಲುವು ಪಡೆಯಿತು. ಸ್ಲೋವಾನಿಯಾ ತಂಡಕ್ಕೆ ಕಂಚು ಲಭಿಸಿತು.

ಹೊಸ ಪ್ರಯೋಗ: ಈ  ಮಾದರಿಯನ್ನು ವಿಶ್ವಕಪ್‌ನಲ್ಲಿ ಮೊದಲ ಬಾರಿಗೆ ಪರಿ ಚಯಿಸಲಾಗಿದೆ. ಆದ್ದರಿಂದ ಭಾರತದ ಪದಕ ಪಟ್ಟಿಯಲ್ಲಿ ಇದನ್ನು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ. 2020ರಲ್ಲಿ ಟೋಕಿಯೊದಲ್ಲಿ ನಡೆ ಯಲಿರುವ ಒಲಿಂಪಿಕ್ಸ್‌ಗೆ ಮಿಶ್ರ ಡಬಲ್ಸ್ ವಿಭಾಗವನ್ನು ಪರಿಚಯಿಸಲು ಅಂತರ ರಾಷ್ಟ್ರೀಯ ಒಲಿಂಪಿಕ್ಸ್‌ ಸಮಿತಿ (ಐಒಸಿ) ಯೋಚಿಸುತ್ತಿದೆ. ಆದ್ದರಿಂದ ಪ್ರಯೋಗಿಕ ವಾಗಿ ವಿಶ್ವಕಪ್‌ನಲ್ಲಿ ಬಳಕೆ ಮಾಡ ಲಾಗುತ್ತಿದೆ.
ಹೊಸ ವಿಭಾಗವನ್ನು ಅಂತರ ರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಬಳಕೆ ಮಾಡಬೇಕೆಂದು ಒಲಿಂಪಿಯನ್‌ ಅಭಿ ನವ್‌ ಬಿಂದ್ರಾ ಕೂಡ ಶಿಫಾರಸು ಮಾಡಿ ದ್ದರು. ಶೀಘ್ರದಲ್ಲಿಯೇ ಇದಕ್ಕೆ ಒಪ್ಪಿಗೆ ಲಭಿಸುವ ಸಾಧ್ಯತೆಯಿದೆ.

ಯುವೆನ್‌ಗೆ ಚಿನ್ನ: ಮಹಿಳೆಯರ 50 ಮೀಟರ್ಸ್‌ 3 ಪೋಸಿಷನ್‌ ಸ್ಪರ್ಧೆಯಲ್ಲಿ ಚೀನಾದ ಜಾಂಗ್ ಯುವೆನ್‌ ಚಿನ್ನದ ಪದಕ ಗೆದ್ದರು. ಜಾಂಗ್‌ 455.7 ಪಾಯಿಂಟ್ಸ್ ಗಳಿಸಿದರು. ಸಿಂಗಪುರದ ಜಾಸ್ಮೀನ್‌ ಕ್ಸಿಯಾಂಗ್ ವೇಯಿ ಸೆರ್‌ (453.8 ಪಾಯಿಂಟ್ಸ್) ಬೆಳ್ಳಿ ಜಯಿಸಿ ದರು. ಜರ್ಮನಿಯ ಇವಾ ರೋಸಕೆನ್‌ (443.6 ಪಾ) ಕಂಚು ಗೆದ್ದರು.

ನಿರಾಸೆ:  ಇದೇ ವಿಭಾಗದಲ್ಲಿ ಭಾರತದ ಸ್ಪರ್ಧಿಗಳು ಫೈನಲ್ ಪ್ರವೇಶಿಸಿ ನಿರಾಸೆ ಕಂಡರು. ತೇಜಸ್ವಿನಿ ಸಾವಂತ್ ಪದಕ ಸುತ್ತಿನ ಪೈಪೋಟಿಯಲ್ಲಿ 402.4 ಪಾಯಿಂಟ್ಸ್‌ ಪಡೆದು ಏಳನೇ ಸ್ಥಾನಕ್ಕೆ ಸಮಾಧಾನ ಪಟ್ಟುಕೊಂಡರು. ಡಬಲ್‌ ಟ್ರ್ಯಾಪ್‌ ಸ್ಪರ್ಧೆಯ  ಅರ್ಹತಾ ಸುತ್ತಿನಲ್ಲಿ ಅರನೇ ಸ್ಥಾನ ಪಡೆದು ಫೈನಲ್‌ ಪ್ರವೇಶಿಸಿದ್ದ ಸಾಗರಿಕಾ ಮಹತ್ವದ ಘಟ್ಟದಲ್ಲಿ 24 ಪಾಯಿಂಟ್ಸ್‌ ಗಳಿಸಲಷ್ಟೇ ಶಕ್ತರಾದರು.

ಚೊಚ್ಚಲ ಅಂತರರಾಷ್ಟ್ರೀಯ ಚಾಂಪಿಯನ್‌ಷಿಪ್‌ ಆಡಿದ 15 ವರ್ಷದ ಸಪತ್‌ ಭಾರದ್ವಾಜ್‌ ಅರ್ಹತಾ ಸುತ್ತಿನಲ್ಲಿ  ಹತ್ತನೇ ಸ್ಥಾನ ಪಡೆದರು. ಅವರು ಶಾಲಾ ವಿಶ್ವಕಪ್‌ನಲ್ಲಿ ಹಿಂದೆ ಭಾಗವಹಿಸಿದ್ದರು. ಮೊದಲ ಸಲ ಸೀನಿಯರ್ ತಂಡದಲ್ಲಿ ಕಾಣಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT