ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡ್ರಾ ಪಂದ್ಯದಲ್ಲಿ ಬಿಎಫ್‌ಸಿ

ಬಿಡಿಎಫ್‌ಎ ಸೂಪರ್‌ ಡಿವಿಷನ್‌ ಫುಟ್‌ಬಾಲ್
Last Updated 27 ಫೆಬ್ರುವರಿ 2017, 19:15 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಎಫ್‌ಸಿ ಹಾಗೂ ಓಜೋನ್ ಎಫ್‌ಸಿ ತಂಡಗಳ ನಡುವಿನ ಬಿಡಿಎಫ್‌ಎ ವತಿಯ ಸೂಪರ್ ಡಿವಿಷನ್ ಫುಟ್‌ಬಾಲ್ ಚಾಂಪಿಯನ್‌ ಷಿಪ್‌ನ ಪಂದ್ಯ ಡ್ರಾ ಕಂಡಿದೆ.

ಸೋಮವಾರ ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬಿಎಫ್‌ಸಿ 1–1 ಗೋಲಿನಲ್ಲಿ ಓಜೋನ್ ತಂಡದ ಎದುರು ಡ್ರಾ ಮಾಡಿಕೊಂಡಿದೆ. ಪಂದ್ಯದ 19ನೇ ನಿಮಿಷದಲ್ಲಿ ವಿವೇಕಾನಂದ ಓಜೋನ್ ತಂಡಕ್ಕೆ ಆರಂಭಿಕ ಮುನ್ನಡೆ ತಂದುಕೊಟ್ಟರು. ಬಿಎಫ್‌ಸಿ ತಂಡದ ಅನುಭವಿ ಆಟಗಾರ ಡೇನಿಯಲ್ ಲಾಲ್‌ ಪೂನಿಯಾ 39ನೇ ನಿಮಿಷದಲ್ಲಿ ಚೆಂಡನ್ನು ಗುರಿ ತಲುಪಿಸಿ ಸಮಬಲಕ್ಕೆ ಕಾರಣರಾದರು.

ದ್ವಿತೀಯಾರ್ಧದಲ್ಲಿ ಎರಡೂ ತಂಡಗಳು ಗೋಲು ಗಳಿಸಲು ವಿಫಲ ಯತ್ನ ನಡೆಸಿದವು. ಲಾಲ್‌ಪೂನಿಯಾ ಪಂದ್ಯದ ಅಂತಿಮ ಹಂತದಲ್ಲಿ ನಡೆಸಿದ ಯತ್ನವನ್ನು ಓಜೋನ್ ತಂಡ ಯಶಸ್ವಿ ಯಾಗಿ ತಡೆಯಿತು.

ಜವಾಹರ್ ತಂಡಕ್ಕೆ ಜಯ:  ಜೋನಾ ಥನ್ ತಂದಿತ್ತ ಎರಡು ಗೋಲುಗಳ ಬಲದಿಂದ ಜವಾಹರ್ ಯೂನಿಯನ್ ತಂಡ ‘ಎ’ ಡಿವಿಷನ್‌ ಪಂದ್ಯದಲ್ಲಿ 4–0 ಗೋಲುಗಳಿಂದ ಎಡಿಇ ಎದುರು ಗೆಲುವು ಸಾಧಿಸಿತು. ಜೋನಾಥನ್ 10 ಮತ್ತು 56ನೇ ನಿಮಿಷಗಳಲ್ಲಿ ಗೋಲು ಗಳಿಸಿದರೆ, ನಿಹಾಲ್ 44ನೇ ನಿಮಿಷ ಹಾಗೂ ಕ್ರಿಸ್ತೋಫರ್ 52ನೇ ನಿಮಿಷಗಳಲ್ಲಿ ಚೆಂಡನ್ನು ಗುರಿ ಸೇರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT