ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬತ್ತಿ ಹೋದ 27 ಕೊಳವೆಬಾವಿ, 8 ಕೆರೆ..!

ಶನಿವಾರಸಂತೆ ಹೋಬಳಿ: ಬತ್ತಿದ ಕಾಜೂರು ಹೊಳೆ
Last Updated 1 ಮಾರ್ಚ್ 2017, 8:00 IST
ಅಕ್ಷರ ಗಾತ್ರ

ಶನಿವಾರಸಂತೆ: ಹೋಬಳಿಯಾದ್ಯಂತ ಹೊಳೆ, ಕೆರೆಗಳಲ್ಲಿ ನೀರು ಬತ್ತಿಹೋಗು ತ್ತಿದೆ. ಜನ ಕುಡಿಯುವ ನೀರಿಗೆ ಪರದಾ ಡುವಂತಾಗಿದ್ದು ಪಶುಪಕ್ಷಿಗಳೂ ನೀರಿ ರುವ ತಾಣ ಅರಸಿ ಅಲೆದಾಡುವಂತಹ ಪರಿಸ್ಥಿತಿ ಗೋಚರಿಸುತ್ತಿದೆ. ಬೇಸಿಗೆಯ ಆರಂಭದೊಂದಿಗೆ ನೀರಿನ ಸಮಸ್ಯೆಯೂ ಆರಂಭವಾಗಿದೆ.

ಶನಿವಾರಸಂತೆ, ದುಂಡಳ್ಳಿ, ಆಲೂರು ಸಿದ್ದಾಪುರ, ನಿಡ್ತ, ಗೌಡಳ್ಳಿ ಹಾಗೂ ದೊಡ್ಡಮಳ್ತೆ ಒಟ್ಟು 6 ಗ್ರಾಮ ಪಂಚಾಯಿತಿಗಳನ್ನು ಒಳಗೊಂಡಿರುವ ಶನಿವಾರಸಂತೆ ಹೋಬಳಿಯಲ್ಲಿ ಕಳೆದ ವರ್ಷ 1,127.6 ಮಿ.ಮೀ. ಮಳೆಯಾಗಿತ್ತು. ಹೋಬಳಿಯಾದ್ಯಂತ ಇರುವ ಕೃಷಿ ಭೂಮಿ 7,162.21ಎಕರೆ. ಮಳೆ ಪ್ರಮಾಣ ಕಡಿಮೆಯಾದ ಕಾರಣ ವ್ಯವಸಾಯದಲ್ಲೂ ಹಿನ್ನಡೆಯಾಗಿತ್ತು. ಇದೀಗ ಕುಡಿಯುವ ನೀರಿಗೂ ಬರ ಬರುವ ಸ್ಥಿತಿ ನಿರ್ಮಾಣವಾಗಿದೆ ಎಂಬ ಅಭಿಪ್ರಾಯ ಕಂದಾಯ ಇಲಾಖೆಯದು.

ಹೋಬಳಿಯ ಕಾಜೂರು ಹೊಳೆ, ಹೆಮ್ಮನೆ ಹೊಳೆ, ದೊಡ್ಡ ಕೆರೆಗಳಾದ ಹೊನ್ನಮ್ಮನಕೆರೆ, ಮುಳ್ಳೂರುಕೆರೆ, ದೊಡ್ಡಕಣಗಲುಕೆರೆ, ಮಾಲಂಬಿಕೆರೆ ಇತ್ಯಾದಿ 8 ಕೆರೆಗಳು ಬತ್ತಿ ಹೋಗುತ್ತಿದ್ದು, ಆತಂಕ ಮೂಡಿಸಿವೆ.

6 ಗ್ರಾಮ ಪಂಚಾಯಿತಿಗಳೂ ಮಳೆಯಿಲ್ಲದೇ ಕೃಷಿಯಲ್ಲಿ ನಷ್ಟ ಅನುಭವಿಸುತ್ತಿದ್ದರೂ ವಾಣಿಜ್ಯ ಭೂಮಿ ಇಲ್ಲದೇ ಕೇವಲ ಮಳೆಯಾಧಾರಿತ ವಾಗಿದ್ದು ಕೃಷಿಯಲ್ಲಿ ನಷ್ಟ ಅನುಭವಿಸುತ್ತಿ ರುವ ಗ್ರಾಮ ಪಂಚಾಯಿತಿಯೆಂದರೆ ‘ದುಂಡಳ್ಳಿ ಗ್ರಾಮ ಪಂಚಾಯಿತಿ’!

7 ಮುಖ್ಯ ಗ್ರಾಮಗಳು, 14 ಉಪ ಗ್ರಾಮಗಳನ್ನು ಹೊಂದಿರುವ ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತುಂಬಿ ಹರಿಯುತ್ತಿದ್ದ ಕಾಜೂರು ಹೊಳೆ ಮಳೆ ಅಭಾವದಿಂದ ಇಂದು ಸಣ್ಣ ಝರಿಯಾಗಿ ಹರಿಯುತ್ತಿದೆ.

ಕೆಲವಾರು ಗ್ರಾಮಗಳ ವ್ಯವಸಾಯಕ್ಕೆ ನೀರುಣಿಸುತ್ತಿದ್ದ, ಮರಳುಗಳ್ಳರಿಗೆ ಯಥೇಚ್ಛವಾಗಿ ಮರಳೊದಗಿಸುತ್ತಿದ್ದ ಈ ಹೊಳೆ ಬರಿದಾಗಿದೆ. ಕಳೆದ ಸಾಲಿನಲ್ಲಿ ಕೇವಲ 32 ಇಂಚು ಮಳೆಯಾಗಿದ್ದು ಪಂಚಾಯಿತಿಯ 20 ಸರ್ಕಾರಿ ಕೆರೆ ಗಳು, ಕೃಷಿ ಹೊಂಡಗಳು ನೀರಿಲ್ಲದೇ ಒಣಗುತ್ತಿವೆ.

ಪಂಚಾ ಯಿತಿಯ ಭೌಗೋಳಿಕಾ ವಿಸ್ತೀರ್ಣ 2,888.18. ಕೃಷಿ ಭೂಮಿ 2000 ಹೆಕ್ಟೇರ್. ಜನಸಂಖ್ಯೆ 8,868 ಆಗಿದ್ದು ಅವರಲ್ಲಿ 1,782 ಕೂಲಿ ಕಾರ್ಮಿಕ ರಾಗಿದ್ದಾರೆ.

ಗ್ರಾಮ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರವೆದ್ದಿದೆ. ಪಂಚಾಯಿತಿಯಿಂದ ವಾರಕ್ಕೆ 2 ದಿನ ಮಾತ್ರ ನೀಡಲಾಗುತ್ತಿದೆ. ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ 67 ಕೊಳವೆ ಬಾವಿಗಳಿದ್ದು 40ರಲ್ಲಿ ನೀರು ಬರುತ್ತಿದೆ. ಉಳಿದ 27 ಕೊಳವೆ ಬಾವಿಗಳು ನೀರಿಲ್ಲದೇ ಬತ್ತಿಹೋಗಿವೆ. ಮುಂದಿನ ಬೇಸಿಗೆ ದಿನಗಳಲ್ಲಿ 10 ಕೊಳವೆ ಬಾವಿಗಳು ಸಂಪೂರ್ಣ ಬತ್ತಿಹೋಗ ಬಹುದು ಎನ್ನುತ್ತಾರೆ ಪಂಚಾಯಿತಿ ಅಧ್ಯಕ್ಷ ಸಿ.ಜೆ.ಗಿರೀಶ, ಸದಸ್ಯರಾದ ಎನ್.ಕೆ.ಸುಮತಿ, ಬಿಂದಮ್ಮ

ಪಂಚಾಯಿತಿಯನ್ನು ಬರಪೀಡಿತ ಪ್ರದೇಶ ಎಂದು ಘೋಷಿಸುವಂತೆ ಮನವಿ ಸಲ್ಲಿಸಲಾಗಿದೆ. ಸೋಮವಾರ ಪೇಟೆ ತಾಲ್ಲೂಕನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಿದ್ದರೂ ಈವರೆಗೂ ಯಾವುದೇ ಅನುದಾನ ಬಂದಿಲ್ಲ. ಜಲಾನಯನ ಯೋಜನೆ ಇಲ್ಲದ ಕಾರಣ ವಿಶೇಷ ಅನುದಾನವೂ ಇಲ್ಲ.

ಪಂಚಾಯಿತಿಯಿಂದ ಕ್ರಮ ಕೈಗೊಳ್ಳಲು ಅನುದಾನದ ಕೊರತೆ ಹಾಗೂ ಆದಾಯದ ಮೂಲವೂ ಕಡಿಮೆಯಾ ಗಿದ್ದು ವಿಶೇಷ ಅನುದಾನಕ್ಕಾಗಿ ದುಂಡಳ್ಳಿ ಗ್ರಾಮ ಪಂಚಾಯಿತಿ ಸರ್ಕಾರಕ್ಕೆ ಮೊರೆಯಿಡುತ್ತಿದೆ.
-ಶ.ಗ. ನಯನತಾರಾ

ಕೃಷಿಯಲ್ಲೂಅಪಾರ ನಷ್ಟ
ಇಲ್ಲಿನ ಬಹುತೇಕ ಕೃಷಿಕರು ವ್ಯವಸಾಯಕ್ಕೆ ಮಳೆಯನ್ನೇ ನಂಬಿದ್ದು 70–80 ಇಂಚು ಮಳೆಯಾ ದರೆ  ಕೃಷಿಕರ ಬದುಕು ಹಸನಾಗು ತ್ತದೆ. ಆದರೆ, ಕಳೆದ ವರ್ಷ ಮಳೆಯಾಗದೇ ಶೇ 50ರಷ್ಟು ಗದ್ದೆಗಳಲ್ಲಿ ಭತ್ತ  ನಾಟಿ ಮಾಡದೆ, ಗದ್ದೆಗಳನ್ನು ಹಾಳು ಬಿಡಲಾಗಿದೆ. 

ಕಾಫಿ ಶೇ 60 ನಷ್ಟವಾಗಿದೆ. ಗದ್ದೆಗಳಲ್ಲಿ ನೀರಿಲ್ಲದೇ ಶೇ 60ರಷ್ಟು ಭತ್ತ ಬಿಸಿಲಿಗೆ ಸುಟ್ಟು ಹೋಗಿದೆ. ಕಾಳು ಮೆಣಸು ಶೇ 80ರಷ್ಟು ನಷ್ಟವಾಗಿದ್ದರೇ ಉಪ ಕೃಷಿಯಾದ ಶುಂಠಿ, ಹಸಿರು ಮೆಣಸಿನಕಾಯಿ, ಕಿತ್ತಳೆ ನೀರಿಲ್ಲದೆ ಬಾಡಿ ಹೋಗಿವೆ.

*
ಈ ಭಾಗದ ಜನತೆ ತೀವ್ರ ಬರಗಾಲ ಎದುರಿಸುತ್ತಿದ್ದಾರೆ.  ಸರ್ಕಾರ ವಿಶೇಷ ಅನುದಾನ ಒದಗಿಸಿ ಅನುಕೂಲ ಕಲ್ಪಿಸಬೇಕು. ರೈತರ ಬೆಳೆ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು.
-ಸಿ.ಜೆ. ಗಿರೀಶ್,
ಅಧ್ಯಕ್ಷ, ದುಂಡಳ್ಳಿ ಗ್ರಾಮ ಪಂಚಾಯಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT