ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರ: ರೈತರು ಭಯ ಪಡಬೇಕಿಲ್ಲ

ಡಂಬಳದಲ್ಲಿ ಗೋಶಾಲೆ ಉದ್ಘಾಟನೆ: ಶಾಸಕ ರಾಮಕೃಷ್ಣ ದೊಡ್ಡಮನಿ ಭರವಸೆ
Last Updated 2 ಮಾರ್ಚ್ 2017, 5:12 IST
ಅಕ್ಷರ ಗಾತ್ರ

ಡಂಬಳ: ಬರಗಾಲವನ್ನು ಎದುರಿಸಲು ಸರ್ಕಾರ  ಎಲ್ಲ ಸಿದ್ಧತೆ ಮಾಡಿಕೊಂಡಿದ್ದು  ಜಾನುವಾರಗಳಿಗೆ ಅಗತ್ಯವಿರುವ ಮೇವು, ಕುಡಿಯುವ ನೀರು ಸೇರಿ ಅಗತ್ಯ ಮೂಲ ಸೌಕರ್ಯ ಒದಗಿಸಲು ಕ್ರಮ ಕೈಗೊಳ್ಳಲಾ ಗಿದೆ. ಈಗಾಗಲೇ 12 ಟನ್ ಮೇವು ಸಂಗ್ರಹಿಸಿದ್ದು ರೈತರು ಭಯ ಪಡ ಬಾರದು ಎಂದು ಶಿರಹಟ್ಟಿ ಕ್ಷೇತ್ರದ ಶಾಸಕ ರಾಮಕೃಷ್ಣ ದೊಡ್ಡಮನಿ ಹೇಳಿದರು.

ಡಂಬಳ ಗ್ರಾಮದಲ್ಲಿ  ಬುಧವಾರ ಗೋಶಾಲೆ ಉದ್ಘಾಟಿಸಿ  ಮಾತನಾಡಿದ ಅವರು  ಕೊಪ್ಪಳ,  ಗಂಗಾವತಿ, ಕಂಪ್ಲಿ ಸೇರಿ ವಿವಿಧ  ತಾಲ್ಲೂಕುಗಳಿಂದ ಒಟ್ಟು 12 ಟನ್ ಮೇವು, ಬತ್ತದ ಹುಲ್ಲು, ಜೋಳದ ಮೇವು ಖರೀದಿಸಿ, ಸಂಗ್ರಹಿಸ ಲಾಗಿದೆ. ಸರ್ಕಾರದ ನಿಯಮದಂತೆ ರೈತರಿಗೆ ಅನುಕೂಲವಾಗಲಿ ಎಂದು  ರಿಯಾಯಿತಿ ದರದಲ್ಲಿ ಮೇವು ಮಾರಾಟ ಮಾಡಲಾಗುತ್ತದೆ. ಅಗತ್ಯ ಬಿದ್ದರೆ ಇನ್ನೂ ಹೆಚ್ಚು ಮೇವು ಸಂಗ್ರಹ ಮಾಡಲಾಗು ವುದು. ಸ್ಥಳೀಯ ರೈತರಿಂದಲೂ ಮೇವು ಖರೀದಿಸಲಾಗುವುದು. ಮೇವು ದರ ವನ್ನು ಜಿಲ್ಲಾಧಿಕಾರಿ ನಿಗದಿಪಡಿಸುತ್ತಾರೆ ಎಂದು ಹೇಳಿದರು.

ತೋಂಟದಾರ್ಯ ಮಠದ ಬಳಿ ಗೋಶಾಲೆಗಾಗಿ ವ್ಯವಸ್ಥಿತ ರೀತಿಯಲ್ಲಿ ಶೆಡ್‌ಗಳ ನಿರ್ಮಾಣ ಮಾಡಿದ್ದು, ಬರ ಗಾಲದ ಕಾರಣ ರೈತರು ಗೋಶಾಲೆಯ   ಸದುಪಯೋಗ ಪಡೆಯಬೇಕು ಎಂದು ಸಲಹೆ ನೀಡಿದರು.

ಗ್ರಾಮ ಪಂಚಾಯ್ತಿ ಅಧ್ಯಕ್ಷ ಬಸವ ರಾಜ ಗಂಗಾವತಿ ಮತನಾಡಿ, ಜಾನುವಾರು ಗಳ ಆರೋಗ್ಯ ಕಾಪಾಡಲು ಗೋಶಾಲೆ ಹಾಗೂ ಈಗಾಗಲೇ ಇರುವ ಪಶು ಆಸ್ಪತ್ರೆ ಗಳಲ್ಲಿ ವೈದ್ಯಾಧಿಕಾರಿಗಳ ನೇಮಕ ಮಾಡ ಬೇಕು ಎಂದು ಹೇಳಿದರು.

ಜಿಲ್ಲಾ ಪಂಚಾಯ್ತಿ  ಸದಸ್ಯ ಈರಣ್ಣ ನಾಡಗೌಡ್ರ, ತಹಶೀಲ್ದಾರ್ ಭ್ರಮರಾಂಬಾ ಗುಬ್ಬಿಶೆಟ್ಟಿ,  ಯುವ ಕಾಂಗ್ರೆಸ್ ಮುಖಂಡ ಮಿಥುನಗೌಡ ಪಾಟೀಲ, ಜಿ.ಪಂ. ಎಂಜಿ ನಿಯರ್ ಎಂ.ಡಿ.ತೋಗುಣಿಸಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT