ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮರ್ಪಕ ಆಡಳಿತಕ್ಕೆ ಸಲಹೆ

ಮಹಾಲಿಂಗಪುರ ಪುರಸಭೆ: ₹ 28.39 ಲಕ್ಷ ಉಳಿತಾಯ ಬಜೆಟ್
Last Updated 2 ಮಾರ್ಚ್ 2017, 5:30 IST
ಅಕ್ಷರ ಗಾತ್ರ

ಮಹಾಲಿಂಗಪುರ:  ಸಮರ್ಪಕ ಆಡಳಿತದಿಂದ ಸರ್ಕಾರದ ಹಣ ಉಳಿತಾಯ ಮಾಡಲು ಸಾಧ್ಯ ಎಂದು ಪುರಸಭೆ ಅಧ್ಯಕ್ಷೆ ಶೋಭಾ ಪಾಟೀಲ ಹೇಳಿದರು.
ಪುರಸಭೆ ಸಭಾ ಭವನದಲ್ಲಿ ಬುದವಾರ ನಡೆದ ಸಾಮಾನ್ಯ ಸಭೆಯಲ್ಲಿ 2016-17ನೇ ವರ್ಷದ ಪರಿಷ್ಕೃತ ಆಯವ್ಯಯ ಅಂದಾಜು ಮತ್ತು 2017-–18ನೇ ಸಾಲಿನ  ಬಜೆಟ್ ವರದಿ ಸಭೆಯಲ್ಲಿ ಮಾತನಾಡಿದರು.

ಸರ್ಕಾರದ ಯೋಜನೆಗಳನ್ನು ಸರಿಯಾಗಿ ಮತ್ತು ಸಮರ್ಪಕವಾಗಿ ಉಪಯೋಗಿಸಿ  ಆಡಳಿತ ನಡೆಸಿದರೆ ಸರ್ಕಾರದ ಹಣ ಉಳಿತಾಯ ಮಾಡಲು ಸಾಧ್ಯ, ಸದಸ್ಯರು ಮತ್ತು ಸಿಬ್ಬಂದಿಯ ಅವಿರತ ಪ್ರಯತ್ನದಿಂದ ನಮ್ಮ ಪುರಸಭೆಗೆ ₹ 28.39 ಲಕ್ಷವನ್ನು ಉಳಿತಾಯ ಮಾಡಲು ಸಾಧ್ಯವಾಗಿದೆ ಎಂದರು.

2017-18 ನೇ ಸಾಲಿನ ಆಯವ್ಯಯದಲ್ಲಿ ಆಸ್ತಿ ತೆರಿಗೆ, ವಾಣಿಜ್ಯ ಸಂಕಿರ್ಣ ಬಾಡಿಗೆ, ಅಭಿವೃದ್ದಿ ಶುಲ್ಕ, ಕಟ್ಟಡ ಅನುಮತಿ ಪತ್ರ, ನೀರಿನ ಕರ, ಬಡ್ಡಿ ಮತ್ತು ದಂಡ, ವೇತನ, ಎಸ್ಎಫ್‌ಸಿ ಮುಕ್ತ ನಿಧಿ, ವಿದ್ಯುತ ಬಿಲ್, ಸ್ವಚ್ಚ ಭಾರತ ಅಭಿಯಾನಗಳಿಂದ ಪುರಸಭೆಗೆ ಬರುವ ಒಟ್ಟು ಹಣ ₹ 18.29 ಕೋಟಿಯಾಗಿದ್ದು ಇದರಲ್ಲಿ ವೇತನ, ವಾಹನ ಬಾಡಿಗೆ, ಜಾಹಿರಾತು, ನೀರು ಸರಬರಾಜು, ದಾರಿ ದೀಪ, ವಿದ್ಯುತ್ ಬಿಲ್, ಕಸ ಸಂಗ್ರಹಣೆ, ಉದ್ಯಾನವನ ನಿರ್ವಹಣೆ, ಎಸ್‌ಸಿ, ಎಸ್‌ಟಿ ಹಾಗೂ ಅಂಗವಿಕಲರ ಕಲ್ಯಾಣ ನಿಧಿ, ಸಮುದಾಯ ಭವನ ನಿರ್ಮಾಣ, ಕೊಳಚೆ ಪ್ರದೇಶ ಅಭಿವೃದ್ಧಿಗೆ ಖರ್ಚಿನ ಅಂದಾಜು ₹ 18.1 ಕೋಟಿ ಇದ್ದರೂ ಪುರಸಭೆಗೆ ₹ 28.39 ಲಕ್ಷ ಉಳಿತಾಯವಾಗುತ್ತದೆ ಎಂದು  ವಿವರ ಹೇಳಿದರು. 

ಸದಸ್ಯ ಜಾವೇದ ಭಾಗವಾನ ಮಾತನಾಡಿ ‘ಇದು ಸರ್ಕಾರದಿಂದ ಟೆಂಡರ್ ಆಗಿದ್ದು ಎಲ್ಲಿ ಎಷ್ಟು ರಸ್ತೆ ವಿಸ್ತರಣೆ ಮಾಡಬೇಕು ಎಂದು ಟೆಂಡರ್‌ಗಿಂತ ಮೊದಲು ನಿರ್ಧಾರವಾಗಿದೆ, ಇದರಲ್ಲಿ ಯಾರ ಕೈವಾಡವೂ ಇಲ್ಲ’ ಎಂದು ಉತ್ತರಿಸಿದರು.  ಸದಸ್ಯ ಶಿವಲಿಂಗಪ್ಪ ಘಂಟಿ ಹಾಗೂ ಮಾಜಿ ಅಧ್ಯಕ್ಷ ಶೇಖರ ಅಂಗಡಿ ಗ್ಯಾಸ್ ಹಂಚಿಕೆ ವಿಷಯದಲ್ಲಿ ಅನ್ಯಾಯ ನಡೆದಿದೆ ಎಂದು ಆರೋಪಿಸಿ ಸಂಬಂಧಿಸಿದ ಅಧಿಕಾರಿಯ ಅಮಾನತಿಗೆ ಎಂದು ಆಗ್ರಹಿಸಿದರು.

ಹಿರಿಯ ಸದಸ್ಯ ಯಲ್ಲನಗೌಡ ಪಾಟೀಲ ಮಾತನಾಡಿ ಮುಖ್ಯಾಧಿಕಾರಿ ಸರಿಯಾದ ಕ್ರಮ ತೆಗೆದುಕೊಳ್ಳುವಂತೆ ಸಲಹೆ ನೀಡಿದರು.  ಉಪಾದ್ಯಕ್ಷೆ ಹನಮವ್ವ ಹಂದಿಗುಂದ, ಚೇರಮನ್ ನಜೀರ ಅತ್ತಾರ, ಅರ್ಜುನಗೌಡ ಪಾಟೀಲ, ಸಂಗಪ್ಪ ಹಲ್ಲಿ, ಬಸವರಾಜ ರಾಯರ, ಸವಿತಾ ರಾಯರ, ಸವಿತಾ ದೊಡಮನಿ, ಹೊಳೆಪ್ಪಾ ಬಾಡಗಿ, ಅರುಣ ಬಂತಿ, ರವಿ ಬಿದರಿ, ಸಂತೋಷ ಹುದ್ದಾರ, ಮಂಜು ಬಕರೆ, ಪರಸು ಮೇತ್ರಿ, ಭೀಮಶಿ ಗೌಂಡಿ, ದಾದಾಫೀರ ಕರೋಶಿ, ಮಲ್ಲಪ್ಪ ಬಾವಿಕಟ್ಟಿ ಸೇರಿದಂತೆ ಹಲವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT