ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಮ್ಯೂನಿಸ್ಟರ ಕ್ರೌರ್ಯ ಕೊನೆಗಾಣಿಸಲು ಸಂಕಲ್ಪ

ಪ್ರಜಾತಂತ್ರ ಉಳಿಸಿ ವೇದಿಕೆ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಸಂಸದ ಅನಂತಕುಮಾರ ಹೆಗಡೆ ಅಭಿಮತ
Last Updated 2 ಮಾರ್ಚ್ 2017, 5:37 IST
ಅಕ್ಷರ ಗಾತ್ರ

ಶಿರಸಿ: ಕೇರಳದಲ್ಲಿ ರಾಜಕೀಯ ಪಕ್ಷಗಳ ಸೈದ್ಧಾಂತಿಕ ಸಂಘರ್ಷ ಮರೆಯಾಗಿ ಸ್ವ ಹಿತಾಸಕ್ತಿಯ ಸಂಘರ್ಷ ಕೆಲಸ ಮಾಡು ತ್ತಿದೆ. ಕಮ್ಯೂನಿಸ್ಟರ ಇಂತಹ ಕ್ರೌರ್ಯಕ್ಕೆ ಕಡಿವಾಣ ಹಾಕಲು ಹಿಂದೂ ಪರಿವಾರ ಸಂಘಟನೆಗಳು ನಾಯಕತ್ವ ಮತ್ತು ಸಿದ್ಧಾಂತದ ಚೌಕಟ್ಟಿನಿಂದ ಹೊರಬರ ಬೇಕಾದ ಅಗತ್ಯವಿದೆ ಎಂದು ಸಂಸದ ಅನಂತಕುಮಾರ ಹೆಗಡೆ ಹೇಳಿದರು.

ಪ್ರಜಾತಂತ್ರ ಉಳಿಸಿ ವೇದಿಕೆ ನೇತೃತ್ವ ದಲ್ಲಿ ವಿವಿಧ ಹಿಂದೂ ಸಂಘಟನೆಗಳು ಕೇರಳದಲ್ಲಿ ಹಿಂದೂಗಳ ಹತ್ಯೆ ಖಂಡಿಸಿ ಇಲ್ಲಿನ ಉಪವಿಭಾಗಾಧಿಕಾರಿ ಕಚೇರಿ ಎದುರು ಬುಧವಾರ ನಡೆಸಿದ್ದ ಪ್ರತಿಭಟ ನೆಯಲ್ಲಿ ಅವರು ಮಾತನಾಡಿದರು.

ಕೇರಳದ ಕಣ್ಣೂರು ಜಿಲ್ಲೆಯಲ್ಲಿ ಕಮ್ಯೂನಿಸ್ಟರಿಂದ ಸಂಘ ಪರಿವಾರದ ಕಾರ್ಯಕರ್ತರ ಮೇಲೆ ಹಿಂಸೆ ನಡೆಯು ತ್ತಿದೆ. ಕೇರಳದಲ್ಲಿ ಮುಖ್ಯಮಂತ್ರಿ ಪಿಣ ರಾಯಿ ವಿಜಯನ್‌ ಕಾಲದಲ್ಲಿ ಹಿಂಸಾ ಕಾಂಡ ಆರಂಭವಾಗಿದೆ. ಮನುಷ್ಯ ನೋಡಲಾಗದ ಕ್ರೌರ್ಯದ ಪರಮಾವಧಿ ಕೇರಳದಲ್ಲಿ ವಿಜೃಂಭಿಸುತ್ತಿದೆ. ಐಎಸ್ ಐಎಸ್ ಹಿಂಸಾ ಮಾದರಿಯಲ್ಲಿಯೇ ಇಂದು ಕೇರಳದ ಕಣ್ಣೂರಲ್ಲಿ ಕಮ್ಯೂನಿಸ್ಟ ರಿಂದ ಕೊಲೆಗಳು ನಡೆಯುತ್ತಿವೆ.

ಸಿಪಿಎಂ ಬಿಟ್ಟು ಸಂಘ ಪರಿವಾರದವರ ಜೊತೆ ಗುರುತಿಸಿಕೊಂಡವರನ್ನು ಗುರಿಯಾಗಿಸಿ ಹಿಂಸೆ ನೀಡಲಾಗುತ್ತಿದೆ. ಇದು ರಾಜ ಕೀಯ ಪಕ್ಷಗಳ ನಡುವಿನ ಸೈದ್ಧಾಂತಿಕ ಸಂಘರ್ಷವಾಗದೇ ವೈಯಕ್ತಿಕ ಹಿತಾಸಕ್ತಿಗಳ ನಡುವಿನ ಸಂಘರ್ಷವಾಗಿ ಮಾರ್ಪಟ್ಟಿದೆ. ಇಂತಹ ಹಿಂಸೆ ತಡೆಯಲು ಸಂಘ ಪರಿವಾರಗಳು ಒಂದಾಗಬೇಕು ಎಂದರು.

ದೇಶ ವಿರೋಧಿ ನೀತಿಯನ್ನು ಜನರೆ ದುರು ಇಡಲು ಉತ್ತರ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಗಳಿಗೆ ₹ 50 ಕೋಟಿ ಹಣ ಡಾಲರ್‌ ರೂಪದಲ್ಲಿ ಬಂದಿದೆ. ಇದರಿಂದ ದೇಶದ್ರೋಹಿ ಚಿಂತನೆಗಳನ್ನು ಬಿತ್ತುವ ಹಾಗೂ ಶಾಂತಿ ಕದಡುವ ಕೆಲಸ ಆರಂಭವಾಗಿದೆ ಎಂದರು.

ಆರ್‌ಎಸ್‌ಎಸ್ ಪ್ರಮುಖ ಸೀತಾರಾಮ ಭಟ್ಟ ಕೆರೇಕೈ ಮಾತನಾಡಿ, ದೇಶ ವಿರೋಧಿ ಕಮ್ಯುನಿಸ್ಟರು ನಡೆಸಿದ ಹತ್ಯಾಕಾಂಡದ ವಿರುದ್ಧ ಸಿಡಿದೇಳಬೇಕು ಎಂದರು.

ಎಂ.ಎಂ.ಭಟ್ಟ ಕಾರೇಕೊಪ್ಪ ಮಾತ ನಾಡಿ, ಭಾರತೀಯತೆಯ ಸಂಸ್ಕಾರ ಪ್ರತಿಯೊಬ್ಬರು ಪಡೆಯಬೇಕು. ರಾಷ್ಟ್ರ ದೆಡೆ ಪ್ರೀತಿ ಬೆಳೆಸುವ ಮೂಲಕ ಕ್ರೌರ್ಯ ಕಡಿಮೆ ಮಾಡುವ ಕಾರ್ಯ ಎಲ್ಲರಿಂದಲೂ ಆಗಬೇಕು ಎಂದರು.

ಉಪವಿಭಾಗಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು. ಪ್ರಮುಖರಾದ ವಿ.ಆರ್.ಹೆಗಡೆ ಹೊನ್ನೆ ಗದ್ದೆ, ಕಾಶೀನಾಥ ಮೂಡಿ, ಗಣಪತಿ ನಾಯ್ಕ, ಆರ್.ಡಿ.ಹೆಗಡೆ, ರಮಾಕಾಂತ ಭಟ್ಟ, ಶೋಭಾ ನಾಯ್ಕ, ಸದಾನಂದ ಭಟ್ಟ, ಅನಂತ ಅಶೀಸರ, ಚಂದ್ರಶೇಖರ ಶೆಟ್ಟಿ ಇದ್ದರು.

‘ಹತ್ಯೆಗೆ ತಡೆಗೆ ಕ್ರಮ ಕೈಗೊಳ್ಳಿ’
ಕಾರವಾರ:
ಕೇರಳದಲ್ಲಿ ಆಗುತ್ತಿರುವ ಆರ್.ಎಸ್.ಎಸ್ ಹಾಗೂ ಬಿಜೆಪಿ ಮುಖಂಡರುಗಳ ಹತ್ಯೆಯನ್ನು ಖಂಡಿಸಿ ಹಾಗೂ  ಹತ್ಯೆಗೈದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಸಂಘ ಪರಿವಾರದ ಕಾರ್ಯಕರ್ತರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಆರ್‌ಎಸ್‌ಎಸ್‌ ಮುಖಂಡ ಸು.ರಾಮಣ್ಣ, ‘ಕೇರಳದಲ್ಲಿ ಹಿಂದೂ ಮುಖಂಡರ ಹತ್ಯೆ ದಿನೇ ದಿನೇ ಹೆಚ್ಚುತ್ತಿದ್ದು, ಕಮ್ಯುನಿಷ್ಟರ ಕ್ರೌರ್ಯ ಎಲ್ಲೆ ಮೀರುತ್ತಿದೆ. ಮಹಿಳೆ ಯರು, ಪುರುಷರು ಎನ್ನುವ ವ್ಯತ್ಯಾಸ ಇಲ್ಲದೇ ಕಮ್ಯುನಿಸ್ಟರು ಹಿಂದೂ ಮುಖಂಡರನ್ನು ಹತ್ಯೆ ಮಾಡುತ್ತಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎಲ್.ಡಿ.ಎಫ್ ಸರ್ಕಾರ ಅಲ್ಲಿ ಆಡಳಿತಕ್ಕೆ ಬಂದಾಗಿನಿಂದ ಹತ್ಯೆ ಇನ್ನೂ ದುಪ್ಪ ಟ್ಟಾಗಿದೆ. ಸಂಘ ಪರಿವಾರದ ಕಾರ್ಯ ಕರ್ತರ ಮನೆಗೆ ಬೆಂಕಿ ಹಚ್ಚಿ ಹಾಗೂ ಅವರನ್ನು ಮಚ್ಚುಗಳಿಂದ ಕೊಚ್ಚಿ ಕೊಲೆ ಮಾಡಿ ಕ್ರೂರತೆ ಮೆರೆಯುತ್ತಿದ್ದಾರೆ’ ಎಂದು ಅವರು ಆಪಾದಿಸಿದರು.

‘ಪೊಲೀಸರ ತಾರತಮ್ಯದಿಂದಾಗಿ ಕಳೆದ 8 ತಿಂಗಳಲ್ಲಿ ಮಹಿಳೆಯರು ಸೇರಿ 10 ಆರ್.ಎಸ್.ಎಸ್ ಮತ್ತು ಬಿಜೆಪಿ ಕಾರ್ಯಕರ್ತರನ್ನು ಬರ್ಬರ ಹತ್ಯೆ ಮಾಡ ಲಾಗಿದೆ. ಇಂಥವುಗಳನ್ನು ಖಂಡಿಸಿ ಠಾಣೆಗೆ ದೂರು ನೀಡಲು ತೆರಳಿದ್ದ ಸಂಘ ಪರಿವಾರದ ಕಾರ್ಯಕರ್ತರನ್ನು ಬಂಧಿಸಿ ಅವರ ಮೇಲೆ ಸುಳ್ಳು ಮೊಕದ್ದಮೆ ದಾಖಲಿಸಿ ಹಿಂಸೆ ನೀಡಿದ್ದಾರೆ ಎಂದರು.

ದುರ್ಗಾ ವಾಹಿನಿ ಜಿಲ್ಲಾ ಘಟಕದ ಅಧ್ಯಕ್ಷೆ ನಯನಾ ಲೀಲಾವರ ಮಾತ ನಾಡಿ, ರಾಜ್ಯದ ಜನತೆಗೆ ರಕ್ಷಣೆ ನೀಡು ವುದು ಆಯಾ ರಾಜ್ಯ ಸರ್ಕಾರದ ಆದ್ಯ ಕರ್ತವ್ಯ. ಆದರೆ ಕೇರಳದಲ್ಲಿ ಅಲ್ಲಿನ ಸರ್ಕಾರ ಮತ್ತು ಪೊಲೀಸ್ ಇಲಾಖೆ ಅದನ್ನು ಮರೆತಂತಿದೆ. ಇಂತಹ ರಾಜ ಕೀಯ ಪ್ರೇರಿತವಾದ ಘಟನೆಗಳನ್ನು ಮರುಕಳಿಸಿದಂತೆ ಹಾಗೂ ಈವರೆಗೆ ಹತ್ಯೆಯಾದವರ ಕುಟುಂಬಕ್ಕೆ ಕೇರಳ ಸರ್ಕಾರ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಬಳಿಕ ಮಾತನಾಡಿದ ಜಿಲ್ಲಾ ಆರ್.ಎಸ್.ಎಸ್ ಪ್ರಮುಖ ಹನುಮಂತ ಶಾನಭಾಗ, ಕೇರಳದಲ್ಲಿ ಕಮ್ಯುನಿಸ್ಟರ ಸರ್ಕಾರ ರಾಜಕೀಯ ಪ್ರೇರಿತ ದ್ವೇಷ ದಿಂದ ಹತ್ಯೆಗಳನ್ನು ಮಾಡುತ್ತಿದೆ. ದೇಶಕ್ಕಾಗಿ ದುಡಿಯುತ್ತಿರುವ ಸಂಘ ಪರಿ ವಾರದ ಕಾರ್ಯಕರ್ತರನ್ನು ಕೊಲೆಗೈದು, ದಿವ್ಯ ಮೌನ ತಾಳುತ್ತಿದ್ದಾರೆ ಎಂದರು.

ಮನವಿ ಸಲ್ಲಿಕೆ: ಕೇರಳದಲ್ಲಿ ಕೊಲೆಯಾದ ಹಿಂದೂ ಕಾರ್ಯಕರ್ತರ ಕುಟುಂಬಗಳಿಗೆ ಪುನರ್ವಸತಿ ಹಾಗೂ ಇನ್ನಿತರ ನೆರವು ನೀಡಬೇಕು. ಅಲ್ಲಿ ಮುಂದೆ ಯಾವುದೇ ಹಿಂದೂ ಕಾರ್ಯಕರ್ತನ ಹತ್ಯೆಯಾಗ ದಂತೆ ಕೇರಳ ಸರ್ಕಾರ ಮುತುವರ್ಜಿ ವಹಿಸಬೇಕು. ಒಂದು ವೇಳೆ ಈ ರೀತಿಯ ಘಟನೆಗಳು ಮತ್ತೆ ಮರುಕಳಿಸಿದರೆ ದೇಶ ವ್ಯಾಪಿ ಬೃಹತ್ ಪ್ರತಿಭಟನೆ ನಡೆಯಲಿದೆ ಎಂದು ಎಚ್ಚರಿಸಿದ ಅವರು, ಸ್ಥಳಕ್ಕೆ ಬಂದ ಹೆಚ್ಚುವರಿ ಜಿಲ್ಲಾಧಿಕಾರಿ ಎಚ್. ಪ್ರಸನ್ನ ಅವರಿಗೆ ಮನವಿ ಸಲ್ಲಿಸಿದರು.

ಪ್ರಮುಖರಾದ ರಾಮಚಂದ್ರ ನಾಯ್ಕ, ಬಿ.ಜಿ.ಮೋಹನ, ಗೋವಿಂದ ನಾಯ್ಕ, ರೂಪಾಲಿ ನಾಯ್ಕ, ನಾಗರಾಜ ನಾಯಕ, ಗಂಗಾಧರ ಭಟ್, ಭಾಸ್ಕರ ನಾರ್ವೇಕರ, ಗಣಪತಿ ಉಳ್ವೇಕರ, ಉದಯ ನಾಯ್ಕ, ಶ್ರೀನಿವಾಸ ನಾಯ್ಕ ಹಾಜರಿದ್ದರು.

*
ಕೇರಳದಲ್ಲಿ ಕಮ್ಯೂನಿಸ್ಟರು 300ಕ್ಕೂ ಅಧಿಕ ಜನರನ್ನು ಹತ್ಯೆ ಮಾಡಿದ್ದಾರೆ. ಸದೃಢ ಸಮಾಜ ನಿರ್ಮಾ ಣಕ್ಕಾಗಿ ಕೆಲಸ ಮಾಡಿದವರನ್ನು ಕೊಂದಿ ದ್ದಾರೆ. ಇವರ ಬಲಿದಾನ ವ್ಯರ್ಥವಾಗದು.
-ಸೀತಾರಾಮ ಭಟ್ಟ ಕೆರೇಕೈ,
ಆರ್ಎಸ್ಎಸ್ ಪ್ರಮುಖ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT