ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓದಿನಲ್ಲಿ ಪ್ರಾಮಾಣಿಕತೆ ಇದ್ದರೆ ಯಶಸ್ಸು ಸಾಧ್ಯ

‘ಜ್ಞಾನದ ಹಬ್ಬ’ದಲ್ಲಿ ಮಕ್ಕಳ ಪ್ರತಿಭೆ ಅನಾವರಣ
Last Updated 2 ಮಾರ್ಚ್ 2017, 9:20 IST
ಅಕ್ಷರ ಗಾತ್ರ

ಮಂಡ್ಯ: ಪ್ರಾಮಾಣಿಕತೆಯಿಂದ ಓದಿನಲ್ಲಿ ತೊಡಗಿದರೆ ಅದರಿಂದ ಫಲ ಸಿಗುತ್ತದೆ. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ನಿರತರಾಗ ಬೇಕು ಎಂದು ಸಾಹಿತಿ ಲಿಂಗಣ್ಣ ಬಮಧೂಕಾರ್‌ ಸಲಹೆ ನೀಡಿದರು. ನಗರದ ಸದ್ವಿದ್ಯಾ ಚಿಲ್ಡ್ರನ್ಸ್ ಸ್ಕೂಲ್‌ ನಲ್ಲಿ ಮಂಗಳವಾರ ನಡೆದ ‘ಜ್ಞಾನದ ಹಬ್ಬ’ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿ ಜೀವನ ಮತ್ತೆ ಬರುವುದಿಲ್ಲ, ಭವಿಷ್ಯದಲ್ಲಿ ಏನಾಗಬೇಕು ಎಂಬ ದೊಡ್ಡ ಕನಸು ಕಾಣಬೇಕು. ಹಿರಿಯರು ಹಾಗೂ ಗುರುಗಳನ್ನು ಗೌರವಿಸುವ ಮನೋಭಾವ ಬೆಳೆಸಿಕೊಳ್ಳ ಬೇಕು. ಅವರ ಆದರ್ಶ ಮೈಗೂಡಿಸಿಕೊ ಳ್ಳಬೇಕು ಎಂದು ಸಲಹೆ ನೀಡಿದರು.

ವಿದ್ಯಾರ್ಥಿಗಳು ಸಾಧನೆಯಲ್ಲಿ ತೊಡಗಬೇಕು. ಇದರಿಂದ ಅಸಾಧಾರಣ ಸಾಧನೆ ಮಾಡಬಹುದು. ಆಯಾ ವಿಷಯಕ್ಕೆ ಸಂಬಂಧಿಸಿದಂತೆ ಅನೇಕ ಪ್ರದರ್ಶನ ಮಾಡಲಾಗುತ್ತದೆ. ಆದರೆ, ಫಲ ಬರುವುದು ಕೆಲವೇ ವಿಷಯಗಳಿಗೆ ಮಾತ್ರ. ಒಟ್ಟಿನಲ್ಲಿ ಸಂಶೋಧನೆಗಳಲ್ಲಿ ಸದಾ ತೊಡಗಬೇಕು ಎಂದು ತಿಳಿಸಿದರು.

ಪ್ರಾಮಾಣಿಕತೆ ಎಂಬುದು ಒಂದು ಶಕ್ತಿ ಇದ್ದಂತೆ, ಅದಕ್ಕೆ ಬೆಲೆ ಇದೆ. ಆ ಶಕ್ತಿ ಇದ್ದರೆ ಅನ್ವೇಷಣೆ ತಾನಾಗಿಯೇ  ಬರುತ್ತದೆ. ಹುಡುಕಾಟ ಎಲ್ಲಿರುತ್ತದೆ ಅಲ್ಲಿ ಫಲ ದೊರಕುತ್ತದೆ. ವಿದ್ಯಾರ್ಥಿಗಳು ಹುಡುಕಾಟದಲ್ಲಿ ನಿರತರಾಗಬೇಕು. ಆ ಮೂಲಕ ಹೊಸತನ್ನು ಸಮಾಜಕ್ಕೆ ಕೊಡಬೇಕು ಎಂದು ಹೇಳಿದರು.

ವಿಶ್ವಮಾನವ ಪದವಿಪೂರ್ವ ಕಾಲೇಜಿನ ಶಿವರಾಜ್‌ ಮಾತನಾಡಿ, ಜ್ಞಾನ ಎಂಬುದು ಅಂಗಡಿಯಲ್ಲಿ ಸಿಗುವ ವಸ್ತುವಲ್ಲ. ವಿದ್ಯೆ ಒಂದು ತಪಸ್ಸಿದ್ದಂತೆ ಅದನ್ನು ಪರಿಶ್ರಮದಿಂದ ಪಡೆದರೆ ಉತ್ತಮ ವ್ಯಕ್ತಿಯಾಗಿ ರೂಪುಗೊಳ್ಳಬ ಹುದು ಎಂದು ಸಲಹೆ ಮಾಡಿದರು.

ಸದ್ವಿದ್ಯಾ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಎಂ.ಕೆ.ಹರೀಶ್‌ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ರತ್ನಶ್ರೀ, ಟ್ರಸ್ಟಿ ಫಣಿಮಾಲಾ ಸುನೀಲ್ ಇತರರು ಇದ್ದರು.
ಮಕ್ಕಳು ಕನಕದಾಸ, ಟಿಪ್ಪು, ಕಲಾಂ, ಕುವೆಂಪು ಇತರೆ ಮಹನೀಯರ ವೇಷ ಧರಿಸಿ ಸ್ಫರ್ಧೆಯಲ್ಲಿ ಭಾಗವಹಿಸಿದ್ದರು. ಕನ್ನಡ, ಸಮಾಜವಿಜ್ಞಾನ, ಗಣಿತ, ಇಂಗ್ಲಿಷ್, ಹಿಂದಿ, ಕಂಪ್ಯೂಟರ್, ವಿವಿಧ ವಿಭಾಗಗಳ ಚಿತ್ರಕಲಾ ಪ್ರದರ್ಶನ ಆಯೋಜಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT