ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈವಾರ ತೆರೆಗೆ

Last Updated 2 ಮಾರ್ಚ್ 2017, 19:30 IST
ಅಕ್ಷರ ಗಾತ್ರ
ಎರಡನೇ ಸಲ
ಗುರುಪ್ರಸಾದ್ ನಿರ್ದೇಶನ ಮತ್ತು ಧನಂಜಯ ಮುಖ್ಯಭೂಮಿಕೆಯಲ್ಲಿರುವ ಈ ಚಿತ್ರವನ್ನು ಯೋಗೇಶ್ ನಾರಾಯಣ್ ನಿರ್ಮಿಸಿದ್ದಾರೆ. ಸಂಗೀತಾ ಭಟ್ ಚಿತ್ರದ ನಾಯಕಿ. ಹಿರಿಯ ನಟಿ ಲಕ್ಷ್ಮಿ ತಾಯಿಯ ಪಾತ್ರದಲ್ಲಿ ನಟಿಸಿದ್ದಾರೆ. ಅನೂಪ್ ಸೀಳಿನ್ ಸಂಗೀತ, ಸಾಮ್ರಾಟ್ ಛಾಯಾಗ್ರಹಣ, ಕೆಂಪರಾಜ್ ಸಂಕಲನ ಹಾಗೂ ಡಿಫರೆಂಟ್ ಡ್ಯಾನಿ ಸಾಹಸ ಚಿತ್ರಕ್ಕಿದೆ.
 
**
ಜಿಲೇಬಿ
ಪೂಜಾ ಗಾಂಧಿ ನಟನೆಯ ಈ ಚಿತ್ರವನ್ನು ಲಕ್ಕಿ ಶಂಕರ್ ನಿರ್ದೇಶಿಸಿದ್ದಾರೆ. ಎಂ.ಆರ್. ಸೀನು ಛಾಯಾಗ್ರಾಹಣ, ಜೇಮ್ಸ್ ಆರ್ಕಿಟೆಕ್ಟ್ ಸಂಗೀತ ನಿರ್ದೇಶನ, ರವಿ ಸಂಕಲನವಿರುವ ಈ ಚಿತ್ರದಲ್ಲಿ ಯಶಸ್ ಸೂರ್ಯ, ನಾಗೇಂದ್ರ ಹಾಗೂ ವಿಜಯ್ ಚೆಂಡೂರ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಶಿವ ಕಬ್ಬಿನ್ ಅವರ ಜೊತೆ ಲಕ್ಕಿ ಶಂಕರ್ ನಿರ್ಮಾಣದಲ್ಲೂ ಕೈ ಜೋಡಿಸಿದ್ದಾರೆ.
 
**
1/4 ಕೇಜಿ ಪ್ರೀತಿ
ಸತ್ಯ ಶೌರ್ಯ ಸಾಗರ್‌ ನಿರ್ದೇಶನದ ಈ ಸಿನಿಮಾದಲ್ಲಿ ವಿಹಾನ್‌ ಮತ್ತು ಹಿತಾ ಚಂದ್ರು ಮುಖ್ಯಭೂಮಿಕೆಯಲ್ಲಿದ್ದಾರೆ. ಎ.ಬಿ. ರಾಜೀವ್‌ ನಿರ್ಮಾಣ ಮಾಡಿದ್ದಾರೆ. ಆರ್‌.ಕೆ. ಶಿವಕುಮಾರ್‌ ಛಾಯಾಗ್ರಹಣ, ಅರ್ಜುನ್‌ ಸಂಕಲನ ಇದೆ. ಚೇತನ್‌ ಸೋಸ್ಕ ನಿರ್ದೇಶಿಸಿರುವ ಸಂಗೀತಕ್ಕೆ ಯೋಗರಾಜ್‌ ಭಟ್‌ ಮತ್ತು ಜಯಂತ ಕಾಯ್ಕಿಣಿ ಹಾಡುಗಳನ್ನು ಬರೆದಿದ್ದಾರೆ.  
 
**
ರೂಪ
ನೆಲ್ಸನ್ ರಾಜನ್ ಸ್ವತಃ ಕಥೆ ಬರೆದು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಆಂಟೋನಿ ಕಮಲ್ ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಪವನ್ ಕುಮಾರ್ ಛಾಯಾಗ್ರಹಣ, ಮ್ಯಾಥ್ಯೂ ಸಂಗೀತ,  ಗೋಪಿನಾಥ್ ಸಂಕಲನ ಚಿತ್ರಕ್ಕಿದೆ. ಶೋಭರಾಜ್, ರೇಖಾ ವಿ. ಕುಮಾರ್, ಮಮತಾ ರಾಹುತ್, ಆಂಟೋನಿ ಕಮಲ್ ಮುಂತಾದವರು ಚಿತ್ರದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT