ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪ್ಪಿನ ಕರಾಮತ್ತು

Last Updated 2 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ರುಚಿಯ ವಿಷಯದಲ್ಲಿ ಉಪ್ಪಿನದ್ದು ಪ್ರಧಾನ ಪಾತ್ರ. ವಾಸ್ತುವಿನಲ್ಲಿಯೂ ಉಪ್ಪಿಗೆ ಮಹತ್ವದ ಸ್ಥಾನ ಇದೆ. ವಾಸ್ತು ದೋಷಗಳನ್ನೂ ನಿವಾರಿಸುವ ಶಕ್ತಿ ಉಪ್ಪಿಗಿದೆ ಎಂಬ ನಂಬಿಕೆ ಬಹು ಹಳೆಯದು.

ಕಲ್ಲುಪ್ಪನ್ನು ಮನೆಯಲ್ಲಿಟ್ಟರೆ ಅದೃಷ್ಟ ಒಲಿಯುತ್ತದೆ ಎಂಬುದು ಹಲವರ ನಂಬಿಕೆ. ಒಂದು ಬಟ್ಟಲು ತುಂಬುವಷ್ಟು ಉಪ್ಪನ್ನು ಮನೆಯ ಮೂಲೆಗಳಲ್ಲಿ ಇಡಬೇಕು. ಈ ಉಪ್ಪು ಮನೆಯಲ್ಲಿನ ನಕಾರಾತ್ಮಕ ಅಂಶಗಳನ್ನು ಹೀರಿಕೊಂಡು  ಸಕಾರಾತ್ಮಕ ಕಂಪನಗಳನ್ನು ಹರಡುತ್ತವೆ.

ಮದುವೆ ಸೇರಿದಂತೆ ಅನೇಕ ಸಂಭ್ರಮಾಚರಣೆ ಸಂದರ್ಭದಲ್ಲಿ  ಕಲ್ಲುಪ್ಪನ್ನು ಮಂಗಳಕರ ಎಂದು ಭಾವಿಸಲಾಗುತ್ತದೆ. ವಾಸ್ತುಶಾಸ್ತ್ರದ ಪ್ರಕಾರ ಹರಳುಪ್ಪು ಸಕಾರಾತ್ಮಕ  (ಕಾಸ್ಮಿಕ್‌ ಎನರ್ಜಿ) ಶಕ್ತಿಗಳನ್ನು ಹೀರಿಕೊಂಡು ಮನೆಯಲ್ಲಿರುವ ನಕಾರಾತ್ಮಕ ಶಕ್ತಿಗಳನ್ನು ನಿರ್ಮೂಲನೆ ಮಾಡುತ್ತದೆ. ಹೀಗಾಗಿ ನೆಲ ಒರೆಸುವಾಗ ನೀರಿಗೆ ಸ್ವಲ್ಪ ಉಪ್ಪು ಹಾಕಿ ಆ ನೀರಿನಲ್ಲಿ ನೆಲ ಒರೆಸುವ ಪದ್ಧತಿಯೂ ಇದೆ.

ಈ ಹರಳುಪ್ಪನ್ನು ಶುಕ್ರವಾರ ಮನೆಗೆ ತಂದು ಅದೇ ದಿನ ಡಬ್ಬದಲ್ಲಿ ಶೇಖರಿಸಿಟ್ಟರೆ ಶ್ರೇಷ್ಠ ಎನ್ನಲಾಗುತ್ತದೆ. ಮನೆಯ ಮೂಲೆಗಳಲ್ಲಿ ಹರಳುಪ್ಪು ಇಟ್ಟು ಅವುಗಳು ಚೆಲ್ಲದಂತೆ ಕಾಳಜಿ ವಹಿಸುವುದು ಮುಖ್ಯ.
(ವಿವಿಧ ಮೂಲಗಳಿಂದ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT