ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಒಎಲ್‌ಎಕ್ಸ್‌’ ನೀಡಿತು ಕಳ್ಳನ ಸುಳಿವು!

Last Updated 2 ಮಾರ್ಚ್ 2017, 19:56 IST
ಅಕ್ಷರ ಗಾತ್ರ
ಬೆಂಗಳೂರು: ಕಂಪ್ಯೂಟರ್ ಕೋರ್ಸ್‌ ತರಬೇತಿಗೆಂದು ಕಾರ್ಗಿಲ್‌ನಿಂದ ನಗರಕ್ಕೆ ಬಂದಿದ್ದ ಜಾಕೀರ್ ಹುಸೇನ್ (28) ಎಂಬಾತ, ಲ್ಯಾಪ್‌ಟಾಪ್‌ಗಳನ್ನು ಕದ್ದು ‘ಒಎಲ್‌ಎಕ್ಸ್‌’ನಲ್ಲಿ ಮಾರುತ್ತಿದ್ದ. ಇದೀಗ ಮಾರಾಟಕ್ಕೆ ಆಯ್ದುಗೊಂಡ ಮಾರ್ಗವೇ ಆತನಿಗೆ ಜೈಲಿನ ದಾರಿ ತೋರಿಸಿದೆ. 
 
ಕಾರ್ಗಿಲ್‌ನಲ್ಲಿ ಎಂಜಿನಿಯರಿಂಗ್ ಪದವಿ ಪಡೆದ ಜಾಕೀರ್, 2015ರಲ್ಲಿ ನಗರಕ್ಕೆ ಬಂದು ಯಶವಂತಪುರದ ‘ರೋಮನ್‌ ಟೆಕ್ನಾಲಜೀಸ್’ ಕಂಪೆನಿಯಲ್ಲಿ ಕಂಪ್ಯೂಟರ್ ಕೋರ್ಸ್‌ ತರಬೇತಿ ಪಡೆದಿದ್ದ. ಆ ನಂತರ ರೆಸಿಡೆನ್ಸಿ ರಸ್ತೆಯ ಪ್ರತಿಷ್ಠಿತ ಕಂಪೆನಿಯೊಂದರಲ್ಲಿ ಒಂದೂವರೆ ವರ್ಷ ಕೆಲಸ ಮಾಡಿದ್ದ. ಅಲ್ಲಿ ಉದ್ಯೋಗ ಬಿಟ್ಟ ಬಳಿಕ ಕಳ್ಳತನ ಪ್ರಾರಂಭಿಸಿದ್ದ. 
 
ಮನೆಗಳಿಗೆ ನುಗ್ಗಿ ಲ್ಯಾಪ್‌ಟಾಪ್‌ಗಳನ್ನು ಕದಿಯುತ್ತಿದ್ದ ಈತ, ಅವುಗಳ ಫೋಟೊ ತೆಗೆದು ‘ಒಎಲ್‌ಎಕ್ಸ್‌’ಗೆ ಹಾಕುತ್ತಿದ್ದ. ಇದೇ ರೀತಿಯಾಗಿ ಆರು ತಿಂಗಳ ಅವಧಿಯಲ್ಲಿ ಪ್ರತಿಷ್ಠಿತ ಕಂಪೆನಿಗಳ 20ಕ್ಕೂ ಲ್ಯಾಪ್‌ಟಾಪ್‌ಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿದ್ದ ಎಂದು ಪೊಲೀಸರು ಹೇಳಿದ್ದಾರೆ.
 
ಜಾಕೀರ್ ವಿರುದ್ಧ ಮಡಿವಾಳ, ಎಚ್ಎಸ್‌ಆರ್‌ ಲೇಔಟ್‌ ಹಾಗೂ ಆಡುಗೋಡಿ ಠಾಣೆಗಳಲ್ಲಿ 13 ಪ್ರಕರಣಗಳು ದಾಖಲಾಗಿದ್ದವು. ಸಾಮಾನ್ಯವಾಗಿ ಒಎಲ್‌ಎಕ್ಸ್‌ನಲ್ಲಿ ಮಾರಾಟವಾಗುವ ವಸ್ತುಗಳ ಮೇಲೆ  ಸಿಬ್ಬಂದಿ ನಿರಂತರ ನಿಗಾ ಇಟ್ಟಿರುತ್ತಾರೆ. ಈ ನಡುವೆ ನಾಜೀರ್ ಎಂಬಾತ ಪದೇ ಪದೇ ಲ್ಯಾಪ್‌ಟಾಪ್‌ಗಳನ್ನು ಮಾರಾಟ ಮಾಡುತ್ತಿರುವುದು ಗಮನಕ್ಕೆ ಬಂತು. ಅನುಮಾನದ ಮೇಲೆ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಕಳವು ಪ್ರಕರಣಗಳು ಬಯಲಾದವು ಎಂದರು.  
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT