ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುತಾಲಿಕ್‌ ಮೇಲಿನ ಪ್ರಕರಣ ಹಿಂಪಡೆಯಲು ಒತ್ತಾಯ

Last Updated 3 ಮಾರ್ಚ್ 2017, 6:56 IST
ಅಕ್ಷರ ಗಾತ್ರ

ವಿಜಯಪುರ:  ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್‌ ಮೇಲೆ ತಾಲ್ಲೂಕಿನ ಬಬಲೇಶ್ವರ ಪೊಲೀಸ್‌ ಠಾಣೆಯ ಪಿಎಸ್‌ಐ ದೂರು ದಾಖಲಿಸಿರುವದನ್ನು ಖಂಡಿಸಿ,  ಸೇನೆಯ ಕಾರ್ಯಕರ್ತರು  ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಎದುರು ಪ್ರತಿಭಟನೆ ನಡೆಸಿದರು.

ಸೇನೆಯ ರಾಜ್ಯ ಕಾರ್ಯದರ್ಶಿ ನೀಲಕಂಠ ಕಂದಗಲ್‌ ಮಾತನಾಡಿ, ಮುತಾಲಿಕ್ ಅವರನ್ನು ತುಳಿಯಲು ಹಲವಾರು ರಾಜಕೀಯ ವ್ಯಕ್ತಿಗಳು ಮತ್ತು ಪಕ್ಷಗಳು ಸತತ ಪ್ರಯತ್ನ ಮಾಡುತ್ತಿವೆ. ಪ್ರಾಮಾಣಿಕ ಹೋರಾಟಗಾರ ಮುತಾಲಿಕ್‌ ಹಿಂದುತ್ವಕ್ಕಾಗಿ ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿ ಹಿಂದು ಸಮಾಜದ ಏಕತೆಗಾಗಿ ನಿರಂತರ ದುಡಿಯುತ್ತಿದ್ದಾರೆ ಎಂದು ಹೇಳಿದರು.

ಆದರೆ, ಇದನ್ನು ಸಹಿಸದ ಕೆಲವರು ಅವರ ವಿರುದ್ಧ ಅನಗತ್ಯವಾಗಿ ಸುಳ್ಳು ಮೊಕದ್ದಮೆಗಳನ್ನು ದಾಖಲಿಸಿರುವದು ಖಂಡನೀಯ. ಕೂಡಲೇ ಈ ದೂರು ವಾಪಸ್‌ ಪಡೆಯಬೇಕು ಇಲ್ಲವಾದರೆ ಎಂದು  ಆಗ್ರಹಿಸಿದರು.

ಸೇನೆಯ ಜಿಲ್ಲಾ ಸಂಚಾಲಕ ರಾಕೇಶ ಮಠ, ಪ್ರಧಾನ ಕಾರ್ಯದರ್ಶಿ ಆನಂದ ಕುಲಕರ್ಣಿ, ಸತೀಶ ಪಾಟೀಲ, ಕಿರಣ ಕಾಳೆ, ರಾಕೇಶ ಗದ್ದನಕೇರಿ, ಶಾಂತು ಮಲಗೊಂಡ, ಬಸು ಪಾಟೀಲ, ಮಹಾಂತೇಶ ಬೂದಿಹಾಳ, ಅಭೀಷೇಕ ಕೋಕರೆ, ಸೋಮು ವಿದಾತೆ, ರಮೇಶ ನಾಗಠಾಣ, ಹರೀಶ ಜೋಶಿ, ಸಂತೋಷ ವಿಶ್ವಕರ್ಮ, ರಾಹುಲ ಕೊಲ್ಲಾರ, ಸಂಪತ ಕುಲಕರ್ಣಿ, ಧರೇಶ ಜುಮನಾಳ  ಸೇರಿದಂತೆ ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT