ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೆಎಸ್‌ಆರ್‌ಟಿಸಿ ಲಾಭಕ್ಕಾಗಿ ಅಲ್ಲ, ಸೇವೆಗಾಗಿ’

ರಾಣೆಬೆನ್ನೂರು ಘಟಕಕ್ಕೆ ಜೆ– ನರ್ಮ್‌ ಯೋಜನೆಯಲ್ಲಿ ಪೂರೈಸಲಾದ 20 ನೂತನ ಮಿಡಿ ವಾಹನ ಲೋಕಾರ್ಪಣೆ
Last Updated 3 ಮಾರ್ಚ್ 2017, 7:17 IST
ಅಕ್ಷರ ಗಾತ್ರ

ರಾಣೆಬೆನ್ನೂರು: ಕೆಎಸ್‌ಆರ್‌ಟಿಸಿ ಉದ್ದೇಶ ಲಾಭಕ್ಕಾಗಿ ಅಲ್ಲ, ಇದೊಂದು ಸೇವಾ ಕ್ಷೇತ್ರ, ಪ್ರಯಾಣಿಕರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವ ಪ್ರಮುಖ ಉದ್ದೇಶ ಹೊಂದಿದೆ ಎಂದು ವಿಧಾನ ಸಭಾಧ್ಯಕ್ಷ ಕೆ.ಬಿ.ಕೋಳಿವಾಡ ಹೇಳಿದರು.

ನಗರದ ಬಸ್‌ ನಿಲ್ದಾಣದಲ್ಲಿ ಗುರು ವಾರ ರಾಣೆಬೆನ್ನೂರು ಘಟಕಕ್ಕೆ ಜೆ– ನರ್ಮ್‌ ಯೋಜನೆಯಡಿಯಲ್ಲಿ ಪೂರೈಸ ಲಾದ 20 ನೂತನ ಮಿಡಿ ವಾಹನಗಳನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

ನಗರದ ಜನಸಂಖ್ಯೆ ಹೆಚ್ಚಾಗುತ್ತಿದ್ದು, ನಗರವು ದಿನದಿಂದ ದಿನಕ್ಕೆ ಜಿಲ್ಲೆಯ ಲ್ಲಿಯೇ ಅತಿ ವೇಗವಾಗಿ ಬೆಳೆಯುತ್ತಿದೆ. ಪ್ರಸ್ತುತ ನಗರದ ಬಸ್‌ ನಿಲ್ದಾಣವು ಚಿಕ್ಕದಾಗಿದ್ದು, ಸುಸಜ್ಜಿತವಾದ ಹಾಗೂ ವಿಶಾಲವಾದ ಬಸ್‌ ನಿಲ್ದಾಣ ನಿರ್ಮಿಸಲು ನಿವೇಶನವನ್ನು ಒದಗಿಸಲು ಇಷ್ಟರ ಲ್ಲಿಯೇ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಕೋಳಿವಾಡ ತಿಳಿಸಿದರು.

ನಗರದ ಮೆಡ್ಲೇರಿ ರಸ್ತೆಯಲ್ಲಿರುವ 11 ಎಕರೆ 20 ಗುಂಟೆ ಖಾಲಿ ನಿವೇಶನ ದಲ್ಲಿ ಚಾಲಕರ ತರಬೇತಿ ಕೇಂದ್ರ ನಿರ್ಮಿ ಸುವ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದರು.

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ಸದಾನಂದ ವಿ. ಡಂಗನವರ ಮಾತನಾಡಿ, ಕೆಎಸ್‌ಆರ್‌ಟಿಸಿ ₹ 80 ಲಕ್ಷಗಳಿಗೂ ಹೆಚ್ಚು ನಷ್ಟದಲ್ಲಿದ್ದರೂ ಅಧಿಕಾರಿ ವರ್ಗ ಮತ್ತು ಕಾರ್ಮಿರ ಸಹಕಾರದಿಂದ ಮುನ್ನಡೆಸಿಕೊಂಡು ಹೋಗುತ್ತಿದ್ದೇವೆ. ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಗ್ರಾಮೀಣ ಪ್ರದೇಶ ರೈತರು, ವಯೋವೃದ್ಧರು, 55 ಸಾವಿರ ವಿದ್ಯಾರ್ಥಿಗಳು, 9 ಸಾವಿರ ಅಂಗವಿಕಲರು ರಿಯಾಯತಿ ಪಾಸ್‌ ಬಳಸಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಸುತ್ತಿದ್ದಾರೆ ಎಂದರು.

ಕೇಂದ್ರ ಸರ್ಕಾರ ನಾಲ್ಕು ಬಾರಿ ಡಿಸೇಲ್‌ ದರ ಹೆಚ್ಚಿಸಿದೆ. ನಾವು  ಟಿಕೆಟ್‌ ದರ ಹೆಚ್ಚಿಸಲ್ಲ. ತುಮ್ಮಿನಕಟ್ಟಿ ಎರಡು ಮಿಡಿ ಬಸ್‌ಗಳನ್ನು ಬಿಡಲಾಗಿದ್ದು, ಪ್ರಯಾಣ ದರವನ್ನು ₹ 25 ದಿಂದ 20 ಕಡಿಮೆಗೊಳಿಸಿದ್ದೇವೆ ಎಂದರು.

ಖಾಸಗಿ ವಾಹನಗಳು ಬಸ್‌ನಿಲ್ದಾಣದಿಂದ 500 ಮೀಟರ್‌ ದೂರು ನಿಲ್ಲಿಸಬೇಕೆಂದು ಆಯಾ ಜಿಲ್ಲೆಗಳ ಆರ್‌ಟಿಓ, ಜಿಲ್ಲಾ ವರಿಷ್ಠಾಧಿಕಾರಿಗಳಿಗೆ ದಾಖಲೆ ಸಮೇತ, ಸಿಡಿ, ಫೋಟೊ, ಸಿಸಿ ಕ್ಯಾಮೆರಾದಲ್ಲಿನ ಚಿತ್ರವನ್ನು ನೀಡಿ ದೂರು ಸಲ್ಲಿಸಿದ್ದೇವೆ. ಆದರೂ ಏನೂ ಪ್ರಯೋಜನವಾಗಿಲ್ಲ ಈ ಬಗ್ಗೆ ಸರ್ಕಾರದ ಗಮನಕ್ಕೆ ತಂದು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಡಂಗನವರ ತಿಳಿಸಿದರು.

ಎಲ್ಲ ಬಸ್‌ ನಿಲ್ದಾಣಗಳಲ್ಲಿ ಮಹಿಳೆ ಯರಿಗೆ ಮೂತ್ರ ವಿಸರ್ಜನೆಗೆ ಹಣ ವಸೂಲಿ ಮಾಡುತ್ತಾರೆ ಎಂದು ಸಾರ್ವಜನಿಕರು ಪ್ರಶ್ನಿಸಿದಾಗ ಅವರು ಇಂದಿನಿಂದಲೇ ಉಚಿತ ಎಂದು ನಾಮಫಲಕ ಹಾಕಿ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು. 

ವಿಭಾಗೀಯ ಸಾರಿಗೆ ನಿಯಂತ್ರಣಾಧಿಕಾರಿ ಜಗದೀಶ ವಿಭಾಗೀಯ ಸಾರಿಗೆ ಅಧಿಕಾರಿ ರಾಮನಗೌಡ್ರ, ಕೃಷ್ಣಪ್ಪ ಕಂಬಳಿ, ಪ್ರಕಾಶ ಜೈನ, ವಾಸಣ್ಣ ಕುಸಗೂರ, ಬಸವರಾಜ ಹುಚಗೊಂಡರ, ಇಕ್ಬಾಲ್‌ಸಾಬ್‌ ರಾಣೆಬೆನ್ನೂರು ಮತ್ತಿತರರು ಇದ್ದರು.

ಬಸ್ಸಿನಲ್ಲಿ ಉಚಿತ ವೈಫೈ, ಸಿ.ಸಿ. ಟಿ.ವಿ.ಕ್ಯಾಮೆರಾ
ಎಲ್ಲ ಬಸ್‌ ನಿಲ್ದಾಣಗಳಲ್ಲಿ ಮತ್ತು ಬಸ್ಸಿನಲ್ಲಿ ಉಚಿತ ವೈಫೈ ಮತ್ತು ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಸಾರ್ವಜನಿಕರ ಕುಂದು ಕೊರತೆಗಳ ಬಗ್ಗೆ ಸ್ಮಾರ್ಟ್‌ ಫೋನ್‌ ಮೂಲಕ ದೂರು ನೀಡಲು ವ್ಯಾಟ್ಸ್‌ ಆ್ಯಪ್‌ ನಂಬರ್‌ ನೀಡಲಾಗಿದೆ ಎಂದರು.

ರಾಣೆಬೆನ್ನೂರು ತಾಲ್ಲೂಕಿನ ಸಾರ್ವಜನಿಕರ ಬೇಡಿಕೆ ಅನುಗುಣವಾಗಿ ಕಾರ್ಯಾಚರಣೆ ಕ್ಷಮತೆಯನ್ನು ಹೆಚ್ಚಿಸಿ 533 ವಾಹನಗಳ ಬಲದಿಂದ 511 ಅನುಸೂಚಿ ಕಾರ್ಯಾಚರಣೆಯೊಂದಿಗೆ 1.86 ಲಕ್ಷ ಕಿ.ಮೀ ಕ್ರಮಿಸಿ ಪ್ರತಿ ದಿನ ₹ 48 ಲಕ್ಷ ಆದಾಯ ಗಳಿಸುತ್ತಿದೆ. ನಿಲ್ದಾಣದಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು.

ಸಿ.ಸಿ. ಕ್ಯಾಮೆರಾ, ದ್ವಿ ಚಕ್ರವಾಹನ ನಿಲುಗಡೆಗೆ ಕ್ರಮ ಕೈಗೊಳ್ಳಲಾಗಿದ್ದು, ಗಣಕೀಕೃತ ಆಡಿಯೊ ಮೂಲಕ ಸಾರಿಗೆ ನಿರ್ಗಮನಗಳ ಮಾಹಿತಿಯನ್ನು ಪ್ರಯಾಣಿಕರಿಗೆ ನೀಡಲಾಗುತ್ತಿದೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ಸದಾನಂದ ವಿ. ಡಂಗನವರ ಮಾಹಿತಿ ನೀಡಿದರು.

*
ಸಾರ್ವಜನಿಕರ ಕುಂದುಕೊರತೆ ನೀಗಿಸಲು, ಹಾವೇರಿ ಡಿವಿಜ ನ್‌ಗೆ ಬೇಕಾದ ಅಗತ್ಯ ಸೌಲಭ್ಯ ಒದಗಿ ಸಲು ಕ್ರಮಕೈಗೊಳ್ಳಲು ಹಾವೇರಿಯಲ್ಲಿ ಲೋಕ ಅದಾಲತ್‌ ನಡೆಸಲಾಗುವುದು.
-ಸದಾನಂದ ಡಂಗನವರ,
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT