ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧರಣಿಗೆ ಸ್ಪಂದನೆಯಿಲ್ಲ: ಆಕ್ರೋಶ

Last Updated 4 ಮಾರ್ಚ್ 2017, 6:42 IST
ಅಕ್ಷರ ಗಾತ್ರ

ಸವಣೂರ: ಸ್ಥಳೀಯ ಕೆಸಿಸಿ ಬ್ಯಾಂಕ್ ಎದುರು ರೈತ ಸಮುದಾಯ ಕೈಗೊಂಡ ಅಹೋರಾತ್ರಿ ಧರಣಿಗೆ ಜಿಲ್ಲಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಸ್ಪಂದನೆ ತೋರದಿರುವುದು ರೈತ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದೆ.

ಜಿಲ್ಲಾಧಿಕಾರಿ ಹಾಗೂ ಸಚಿವ ರುದ್ರಪ್ಪ ಲಮಾಣಿಯವರಿಗೆ ರೈತ ಪರ ಕಾಳಜಿ ಇಲ್ಲದಾಗಿದೆ. ರೈತರು ಕಳೆದ ಹಲವಾರು ದಿನಗಳಿಂದ ಅವಿರತ ಧರಣಿ ಕೈಗೊಂಡರು ಸಹ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ ಎಂದು ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಪ್ರಕಾಶ ಬಾರ್ಕಿ ಹೇಳಿದರು.

ಶನಿವಾರ ಚಕ್ಕಡಿ ರ್‍ಯಾಲಿ ಮುಖಾಂತರ ಕಂದಾಯ ಇಲಾಖೆಗೆ ತೆರಳಿ ತಹಶೀಲ್ದಾರ ಸಜ್ಜನ ಅವರಿಗೆ ಮನವಿ ಸಲ್ಲಿಸಿ 2 ದಿನಗಳೊಳಗಾಗಿ  ಬೇಡಿಕೆ ಈಡೇರಿಸದೆ ಹೋದಲ್ಲಿ ಉಗ್ರ ಹೋರಾಟ ಕೈಗೊಳಲು ಸಿದ್ದರಾಗುತ್ತೇವೆ ಎಂದರು.

ಜಿಲ್ಲಾ ಉಪ ಕೃಷಿ ನಿರ್ದೇಶಕ ಡಾ.ಎಚ್.ಹುಲಿರಾಜ ಸ್ಥಳಕ್ಕೆ ಭೇಟಿ ನೀಡಿ ಬೆಳೆವಿಮೆ ವಿತರಣೆಗೆ ಅನುಮೋದನೆ ನೀಡಿದ್ದಾರೆ. ಎರಡು ದಿನಗಳಲ್ಲಿ ರೈತರ ಖಾತೆಗೆ ಜಮಾ ಆಗುತ್ತದೆ. ಈ ಪ್ರತಿಭಟನೆಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ಯಾವುದೇ ಕಾರಣಕೂ ಪ್ರತಿಭಟನೆಯನ್ನು ಹಿಂಪಡೆ ಯುವದಿಲ್ಲ ಎಂದು ಪ್ರತಿಭಟನಾಕಾರರು ಹೇಳಿದರು. ರಾಜು ಗುಂಜಳ, ಆರ್.ಕೆ. ದೇಶಪಾಂಡೆ, ಎಸ್.ಸಿ.ಪಾಟೀಲ,  ನಿಂಗಪ್ಪ ಗೊಡ್ಡೆಮ್ಮಿ, ಉಮೇಶ ಉಪ ನಾಳ, ಸುರೇಶ ದುಡ್ಮನಿ, ಬಸಪ್ಪ ದುಡ್ಮನಿ, ಮುದಕಣ್ಣ ಜಕ್ಕಣ್ಣರ ಎಸ್.ಎಫ್.ಹುಲಗೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT