ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

1.9 ಕೆ.ಜಿ ತೂಕದ ಬಂಗಾರದ ಆಭರಣ ವಶ

Last Updated 4 ಮಾರ್ಚ್ 2017, 6:43 IST
ಅಕ್ಷರ ಗಾತ್ರ

ರಾಣೆಬೆನ್ನೂರು: ಬಂಗಾರದ ಆಭರಣ ಗಳನ್ನು ಖರೀದಿಸಿ ಹಣ ನೀಡದೇ ವಂಚನೆ ಮಾಡಿದ ಇಬ್ಬರು ಮಹಿಳಾ ಆರೋಪಿಗಳನ್ನು ಗುರುವಾರ ಬಂಧಿಸಿ, ಆರೋಪಿಗಳಿಂದ 1.9 ಕೆಜಿ ತೂಕದ ಬಂಗಾರದ ಆಭರಣಗಳನ್ನು ಪೊಲೀ ಸರು ವಶಪಡಿಸಿಕೊಂಡು ಆರೋಪಿ ಗಳನ್ನು ನ್ಯಾಯಾಂಗ ವಶಕ್ಕೆ ಒಳಪಡಿಸಿದ್ದಾರೆ.

ನಗರದ ಇಸ್ಕಾನ್‌ಗಲ್ಲಿಯ ನುಸ್ರತ್‌ಖಾನ್‌ ಅಯ್ಯಾತಾಕಾನ್‌ ಸೌದಾಗರ (38) ಉಮ್ಮೇಹಾನಿ ಜಾಕೀರಖಾನ್ ಹೊನ್ನಾಳಿ (36) ಇಬ್ಬರು ಬಂಧಿತ ಆರೋಪಿಗಳು.

ನಗರದ ರುಷಬ್‌ ಬಂಗಾರದ ಅಂಗಡಿಯಿಂದ  2016 ಜೂನ್‌ ತಿಂಗಳಲ್ಲಿ  ಪರಿಚಯಸ್ಥರ ಮದುವೆ ಸಮಾರಂಭ ಇದ್ದು ಮದುವೆಗೆ ಬಂಗಾರ ಆಭರಣಗಳು ಬೇಕಾಗಿದೆ. ₹ 35 ಲಕ್ಷ ಬೆಲೆ ಬಾಳುವ 1.9 ಕೆ.ಜಿ ಬಂಗಾರದ ಆಭರಣಗಳನ್ನು  ಮನೆಗೆ ತೋರಿಸಿ ಕೊಂಡು ವಾಪಸ್ಸು ಬರುತ್ತೇವೆ ಎಂದು ಹೋಗಿದ್ದರು.

ಅಂಗಡಿ ಮಾಲೀಕರು ಅವರ ಮನೆಗೆ ಹೋಗಿ ಮರುದಿನ ಆಭರಣಗಳ ಬಗ್ಗೆ ವಿಚಾರಿಸಿದಾಗ ಆಭರಣಗಳು ಒಪ್ಪಿಗೆಯಾಗಿದ್ದು ಮರುದಿನ ಬಂದು ಹಣ ನೀಡುತ್ತೇವೆ ಎಂದು ಹೇಳಿ ಕಳಿಸಿದ್ದರು.

ಪುನಃ ವಿಚಾರಿಸಿದಾಗ ಆಭರಣ ತೆಗೆದುಕೊಂಡವರು ಹಾಸನಕ್ಕೆ ಹೋಗಿದ್ದಾರೆ. ಎರಡು ಮೂರುದಿನ ಬಿಟ್ಟು ಬಂದು ಹಣ ನೀಡುತ್ತೇವೆ ಎಂದವರು ಮತ್ತೆ ನೋಟು ರದ್ದತಿ ಯಿಂದ ಸ್ವಲ್ಪ ತೊಂದರೆಯಾಗಿದೆ ಸಹ ಕಾರ ನೀಡಿ ಎಂದು ಮನವಿ ಮಾಡಿದ ವರು ತಿಂಗಳು ಗತಿಸಿದರೂ ಹಣಕ್ಕಾಗಿ ಕಾದ ಅಂಗಡಿ ಮಾಲೀಕ ಹಣ ಕೊಡು ವಂತೆ ಒತ್ತಾಯಿಸಿದಾಗ ಆರೋಪಿಗಳು ಆತ್ನಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಒಡ್ಡಿದ್ದರು.

ಬಂಗಾರದ ಅಂಗಡಿ ಮಾಲೀಕ ರಿತೀಶ ನಂದೀಶ ಜೈನ್‌ ಅವರು ನಗರ ಠಾಣೆಗೆ ಘಟನೆ ಬಗ್ಗೆ ದೂರು ಸಲ್ಲಿಸಿದ್ದರು. ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿಗಳು ಖಾಸಗಿ ಫೈನಾನ್ಸ್‌ ಕಂಪೆನಿ ಯಲ್ಲಿ ಆಭರಣಗಳನ್ನು ಅಡವಿಟ್ಟು ಸಾಲ ಪಡೆದಿದ್ದನ್ನು ವಿಚಾರಣೆ ಹಂತದಲ್ಲಿ ಒಪ್ಪಿಕೊಂಡಿದ್ದಾರೆ. ಪೊಲೀಸರು ಆರೋಪಿಗಳನ್ನು ಫೈನಾನ್ಸ್‌ ಕಂಪೆನಿಗೆ ಕರೆದುಕೊಂಡು ಹೋಗಿ ಆಭರಣಗಳನ್ನು ವಶಪಡಿಸಿಕೊಂಡು ಇಬ್ಬರು ಆರೋಪಿ ಗಳನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ಶಹರ ಠಾಣೆ ಸಬ್‌ ಇನ್‌ಸ್ಪೆಕ್ಟರ್‌ ಸಂತೋಷ ಪಾಟೀಲ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT