ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣಿತ ಡಿಜಿಟಲೀಕರಣ ಅಗತ್ಯ

ಜೆ.ಟಿ.ಕಾಲೇಜಿನಲ್ಲಿ ರಾಷ್ಟ್ರಮಟ್ಟದ ವಿಚಾರ ಸಂಕಿರಣಕ್ಕೆ ಚಾಲನೆ: ಭೂಸನೂರಮಠ ಸಲಹೆ
Last Updated 4 ಮಾರ್ಚ್ 2017, 6:43 IST
ಅಕ್ಷರ ಗಾತ್ರ

ಗದಗ: ಇಂದಿನ ಆಧುನಿಕ ಯುಗದಲ್ಲಿ ಗಣಿತಶಾಸ್ತ್ರ ವಿಷಯವನ್ನು ಡಿಜಿಟಲೀ ಕರಣಗೊಳಿಸಬೇಕು ಎಂದು ಕವಿವಿಯ ಗಣಿತ ವಿಭಾಗದ ಡಾ.ಎಸ್.ಎಸ್. ಭೂಸನೂರಮಠ ಅಭಿಪ್ರಾಯಪಟ್ಟರು.

ನಗರದ ಜೆ.ಟಿ.ಮಹಾವಿದ್ಯಾಲಯ ದಲ್ಲಿ ಶುಕ್ರವಾರ ನಡೆದ ಎರಡು ದಿನಗಳ ಸಸ್ಯಶಾಸ್ತ್ರ ಮತ್ತು ಗಣಿತ ವಿಭಾಗದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಗಣಿತ ಪ್ರಕೃತಿಯಲ್ಲಿರುವ ಒಂದು ಭಾಷೆಯಾಗಿದ್ದು, ಸಂಖ್ಯೆಗಳ ಮೂಲಕ ಕಾರ್ಯನಿರ್ವಹಿಸುತ್ತದೆ. ಈಚೆಗೆ ಕಂಪ್ಯೂ ಟರ್ ಸೇರಿದಂತೆ ಎಲ್ಲ ಎಲೆಕ್ಟ್ರಾನಿಕ್ಸ್ ವಸ್ತುಗಳು, ಇಂಟರ್ನೆಟ್ ಹಾಗೂ ಇ-ಬ್ಯಾಂಕಿಂಗ್ ಕ್ಷೇತ್ರಗಳಲ್ಲಿಯೂ ಗಣಿತ ತನ್ನದೇ ಆದ ಪ್ರಾಮುಖ್ಯತೆ ಹೊಂದಿದೆ ಎಂದು ತಿಳಿಸಿದರು.

ಕುತೂಹಲ ಸಂಶೋಧನಾ ಮನೋ ಭಾವ, ಬಾಲ್ಯಾವಸ್ಥೆಯ ತರಬೇತಿಯ ಮೂಲ ಪ್ರೇರಣೆದಾಯಕ ಗುಣಗಳು ರಿಚರ್ಡ್ ಫೇಮನ್‌ ಅವರಲ್ಲಿ ಇರುವ ಕಾರಣಕ್ಕಾಗಿ, ಅವರಿಗೆ ನೋಬೆಲ್ ಪಾರಿತೋಷಕ ಲಭಿಸಿದೆ. ಜತೆಗೆ ಗಣಿತ ತಜ್ಞ ರಾಮಾನುಜನ್‌ ಅವರನ್ನು ಸರಿ ಗಟ್ಟಲು ಯಾರಿಂದಲೂ ಆಗದು ಎಂದರು.

ಗಣಿತ ಮತ್ತು ಸಸ್ಯಶಾಸ್ತ್ರ ಎರಡು ವಿಷಯಗಳು ಪ್ರಕೃತಿಯಲ್ಲಿ ಒಂದುಗೂ ಡಿವೆ. ಸಸ್ಯಶಾಸ್ತ್ರವೂ ವಿಶಿಷ್ಟ ಪ್ರಾಮುಖ್ಯತೆ ಹೊಂದಿದೆ. ಒಳ್ಳೆಯ ಆಹಾರ, ಪ್ರಕೃತಿ ಮನುಷ್ಯನ ಎಲ್ಲ ರೋಗಗಳನ್ನು ವಾಸಿ ಮಾಡಬಲ್ಲವು. ಪ್ರಕೃತಿಯಲ್ಲಿರುವ ಎಲ್ಲ ಆಯುರ್ವೇದ ಗಿಡ ಮೂಲಿಕೆಗಳು ಇಂದು ಪುನಃ ತನ್ನ ಪ್ರಾಮುಖ ಗಳಿಸು ತ್ತಿದೆ. ಆದ್ದರಿಂದ ಪ್ರಕೃತಿಯ ಸಂಪನ್ಮೂಲ ಗಳನ್ನು ಕಾಪಾಡುವುದು ಎಲ್ಲರ ಜವಾ ಬ್ದಾರಿ ಎಂದು ತಿಳಿಸಿದರು.

ಪ್ರಕೃತಿ ಸಂಪನ್ಮೂಲಗಳನ್ನು ಕಾಪಾ ಡುವ ವಿಷಯ ಕುರಿತು ಪ್ರಾಚಾರ್ಯ ಸಿ.ಲಿಂಗಾರೆಡ್ಡಿ ಮಾತನಾಡಿದರು. ಎಂ.ಎಂ.ಹೊಳ್ಳಿಯವರ, ಸಂಪ ನ್ಮೂಲ ವ್ಯಕ್ತಿ ಡಾ.ಎ.ಮಣಿಮೇಕಲನ್, ಟಿ.ಪುಲ್ಲೈ, ಸ್ಥಾನಿಕ ಆಡಳಿತ ಮಂಡಳಿಯ ಸದಸ್ಯ ಎಸ್.ಪಿ.ಸಂಶಿಮಠ, ಅಶೋಕ ನಿಲೂಗಲ್, ವೀರೇಶ ಕೂಗು ಇದ್ದರು.
ವಿದ್ಯಾರ್ಥಿಗಳು ಪ್ರಾರ್ಥಿಸಿದರು, ಎಸ್.ಜೆ.ಹಿರೇಮಠ ಸ್ವಾಗತಿಸಿದರು, ಡಾ.ವೀಣಾ ಹೂಗಾರ ನಿರೂಪಿಸಿದರು, ಎ.ಎಂ.ಹುಯಿಲಗೋಳ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT