ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೃಹತ್ ಉದ್ಯೋಗ ಮೇಳ 12ರಂದು

Last Updated 4 ಮಾರ್ಚ್ 2017, 6:57 IST
ಅಕ್ಷರ ಗಾತ್ರ

ಕಾರವಾರ: ಪ್ರತಿ ವರ್ಷದಂತೆ ಈ ವರ್ಷವೂ ಸಹ ಖಾಸಗಿ ಶಿಕ್ಷಕರ ಹುದ್ದೆಗೆ ಉದ್ಯೋಗ ಮೇಳವು ಇದೇ 12ರಂದು ಧಾರವಾಡದಲ್ಲಿ ನಡೆಯಲಿದೆ ಎಂದು ಖಾಸಗಿ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿ ಸಮಿತಿಯ ರಾಜ್ಯ ಘಟಕದ ಅಧ್ಯಕ್ಷ ನಾಗರಾಜ ಎಚ್.ಎನ್.ಲಿಂಗಸೂಗೂರು ಹೇಳಿದರು. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ  ಈ ಮೇಳದ ಮಾಹಿತಿಗಳನ್ನು ನೀಡಿದರು.

ಕರ್ನಾಟಕ ರಾಜ್ಯ ಖಾಸಗಿ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿ ಸಮಿತಿ ಮತ್ತು ಧಾರವಾಡದ ಉದ್ಯೋಗ ಸಮಯ ವಾರಪತ್ರಿಕೆಗಳ ಆಯೋಜನೆ ಯಲ್ಲಿ ಇದೇ 12-ರ ಬೆಳಿಗ್ಗೆ 9- ಗಂಟೆಯಿಂದ ಸಂಜೆ 4 ರವರೆಗೆ ಧಾರವಾಡ-ದ ಪಿ.ಬಿ.ರೋಡ್ ನಲ್ಲಿರುವ ಕೆ.ಸಿ ಪಾರ್ಕ್ ಪ್ರೆಸೆಂಟೇಷನ್ ಶಾಲೆಯಲ್ಲಿ ‘ರಾಜ್ಯ ಮಟ್ಟದ ಬೃಹತ್ ಖಾಸಗಿ ಶಿಕ್ಷಕರ ಹುದ್ದೆಗೆ ಉದ್ಯೋಗ ಮೇಳ’ ಆಯೋಜಿಸಲಾಗಿದ್ದು, ಶಿಕ್ಷಕ ರಾಗಲು ಅರ್ಹರಿರುವ ಅಭ್ಯರ್ಥಿಗಳು  ಪ್ರಯೋಜನೆ ಪಡೆದು ಕೊಳ್ಳುವಂತೆ  ಸಲಹೆ ನೀಡಿದರು.

ಈ ಉದ್ಯೋಗ ಮೇಳದಲ್ಲಿ 15 ಸಾವಿರಕ್ಕೂ ಹೆಚ್ಚು ಖಾಲಿ ಹುದ್ದೆಗಳಿರುವ ಸುಮಾರು 200 ಶಿಕ್ಷಣ ಸಂಸ್ಥೆಗಳು ಮತ್ತು ಕಾರವಾರ, ಮಂಗಳೂರು, ಉಡುಪಿ, ದಾವಣಗೇರಿ, ಹಾಸನ, ಮೈಸೂರು, ಬೆಂಗಳೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಗದಗ, ಬಾಗಲಕೋಟ, ವಿಜಯಪುರ, ಹಾವೇರಿ ಮುಂತಾದ ಜಿಲ್ಲಾ ಕೇಂದ್ರಗಳಿಂದ ಸುಮಾರು 6,000 ಶಿಕ್ಷಕರು ಭಾಗವಹಿಸುವ ನಿರೀಕ್ಷೆಯಿದೆ ಎಂದು  ಅವರು ತಿಳಿಸಿದರು.

ಹೆಚ್ಚಿನ ಮಾಹಿತಿಗೆಇದೇ 10-ರ ಒಳಗೆ www.udyogasaral.com ಗೆ  ಹಾಗೂ ಮೊಬೈಲ್‌ 9513318741 ಸಂಪರ್ಕಿಸಬೇಕು. ‘ಉದ್ಯೋಗ ಸಮಯ’ ವಾರಪತ್ರಿಕೆಯ ಸಂಪಾದಕ ಜಿ.ಆರ್.ಮಾಂಡ್ರ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT