ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಲ ಸೌಕರ್ಯಕ್ಕೆ `14.86 ಕೋಟಿ

ಹಳಿಯಾಳ, ದಾಂಡೇಲಿ ತಾಲ್ಲೂಕಿನ ಪ್ರೌಢಶಾಲಾ ಕಟ್ಟಡಗಳು:ನೂತನ ಶಾಲಾ ಕಟ್ಟಡ ಉದ್ಘಾಟನೆ
Last Updated 4 ಮಾರ್ಚ್ 2017, 7:16 IST
ಅಕ್ಷರ ಗಾತ್ರ

ದಾಂಡೇಲಿ:  ಹಳಿಯಾಳ ಹಾಗೂ ದಾಂಡೇಲಿಯ ಪ್ರೌಢ ಶಾಲೆಗಳು ಹಾಗೂ ಪ್ರಾಥಮಿಕ ಶಾಲೆಗಳ ಕಟ್ಟಡಗಳು ಹಾಗೂ ಇತರೆ ಮೂಲ ಸೌಕರ್ಯಗಳ ಅಭಿವೃದ್ದಿಗಾಗಿ ಇಲ್ಲಿಯವರೆಗೂ ಒಟ್ಟು ` 14.86 ಕೋಟಿ ಮಂಜೂರು ಮಾಡಲಾಗಿದೆ. ತಾಲ್ಲೂಕಿನಾದ್ಯಂತ ಹಲವು ಶಾಲೆಗಳಲ್ಲಿ ಹೊಸ ಕಟ್ಟಡಗಳು ನಿರ್ಮಾಣಗೊಂಡಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ. ದೇಶಪಾಂಡೆ ನುಡಿದರು.

ಅವರು ಶುಕ್ರವಾರ ಹಳೆದಾಂಡೇಲಿಯ ಸರಕಾರಿ ಉರ್ದು ಪ್ರೌಢಶಾಲೆ ಹಾಗೂ ಕನ್ನಡ  ಪ್ರೌಢಶಾಲೆ ಗಳಿಗೆ ಆರ್.ಎಂ.ಎಸ್. ಯೋಜನೆ ಯಡಿ ಮಂಜೂರಾದ ನೂತನ ಶಾಲಾ ಕಟ್ಟಡಗಳ ಉದ್ಘಾಟನೆ ನೆರವೇರಿಸಿದ ನಂತರ ಸಯ್ಯದ್ ಕಮ್ಯುನಿಟ್ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ಹಳೆದಾಂಡೇಲಿ ಇದು ಅಲ್ಪಸಂಖ್ಯಾತರು ಹಾಗೂ ಪ.ಜಾತಿ ಪಂಗಡದವರೇ ಹೆಚ್ಚಾಗಿರುವ ಪ್ರದೇಶ. ಈ ಭಾಗದ ಅಭಿವೃದ್ಧಿಗಾಗಿ ವಿಶೇಷ ಒತ್ತು ನೀಡಲಾಗಿದೆ. ಅದರ ಭಾಗವಾಗಿ ಈ ಶಾಲಾ ಕಟ್ಟಡವೂ ನಿರ್ಮಾಣ ವಾಗಿದೆ.    
 
ಮೊದಲ ಉರ್ದು ಪ್ರೌಢಶಾಲೆ

ಈ ಉರ್ದು ಪ್ರೌಢಶಾಲೆ ಜಿಲ್ಲೆಯ  ಮೊಟ್ಟ ಮೊದಲ ಉರ್ದು ಪ್ರೌಢಶಾಲೆ ಎಂಬ ಖ್ಯಾತಿ ಹೊಂದಿದ್ದು   ಸರ್ಕಾರ ಶೈಕ್ಷಣಿಕ ಅಭಿವೃದ್ಧಿಗೆ ಹಲವಾರು ಯೋಜನೆ ಗಳನ್ನು ತಂದಿದೆ. ಇದರ ಸದುಪಯೋಗವನ್ನು ಮಕ್ಕಳು, ಪಾಲಕರು ಪಡೆದುಕೊಳ್ಳಬೇಕು.

‘ಹಳೆ ದಾಂಡೇಯಂತಹ ಭಾಗದ ಶಾಲೆಗಳಲ್ಲಿಯೂ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿರುವ ಬಗ್ಗೆ ಮಾಹಿತಿ ಪಡೆದಿದ್ದೇನೆ. ಯಾರೂ ಸಹ ಮಕ್ಕಳನ್ನು ಶಿಕ್ಷಣದಿಂದ ದೂರವಿಡಬೇಡಿ. 

ಈ ಬಗ್ಗೆ ತಾಯಂದಿರು ಗಮನ ಹರಿಸಬೇಕು.  ಶಿಕ್ಷಕರದ್ದು ಪವಿತ್ರವಾದ ಕೆಲಸ. ಅಷ್ಟೇ ಜವಾಬ್ದಾರಿಯ ಕೆಲಸ ಕೂಡ. ಮಕ್ಕಳನ್ನು ಈದೇಶದ ಸತ್ಪ್ರಜೆಯನ್ನಾಗಿ ಮಾಡುವ ದೊಡ್ಡ ಹೊಣೆಗರಿಕೆ ಶಿಕ್ಷಕರ ಮೇಲಿದೆ’ ಎಂದರು.

ನಗರಸಭಾ ಅಧ್ಯಕ್ಷ ನಾಗೇಶ ಸಾಳುಂಕೆ ಅಧ್ಯಕ್ಷತೆ ವಹಿಸಿದ್ದರು.  ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಸ್. ನಾಯ್ಕರವರು ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. 

ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಸಂತೋಷ ರೇಣಕೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಯ್ಯದ್ ತಂಗಳ,  ನಗರಸಭೆ ಉಪಾಧ್ಯಕ್ಷ ಅಷ್ಪಾಕ ಶೇಖ, ಸದಸ್ಯರಾದ ಫಾತಿಮಾ ಬೇಪಾರಿ, ಮಹಮ್ಮದ್ಗೌಸ್ ಫಣಿಬಂದ್, ಶಿರಸಿ ಶೈಕ್ಷಣಿಕ ಜಿಲ್ಲೆಯ ಉಪ ನಿರ್ದೇಶಕ ಎಮ್.ಎಸ್. ಪ್ರಸನ್ನಕುಮಾರ, ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಸ್. ನಾಯ್ಕ, ಸರಕಾರಿ ಉರ್ದು ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಇಮ್ರಾನ್ ಶೇಖ, ಸರ್ಕಾರಿ ಕನ್ನಡ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ನಾಗರಾಜ ಬೇಲಿಪ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT