ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಘಟನೆಗಳಿಂದ ಮಹಿಳೆಯರ ರಕ್ಷಣೆ

ಸ್ವಯಂಸೇವಕರ ಪ್ರೇರಣೆ ಹಾಗೂ ತರಬೇತಿ ಕಾರ್ಯಾಗಾರದಲ್ಲಿ ಹುಲಿಕುಂಟೆ ಮೂರ್ತಿ ಅಭಿಮತ
Last Updated 4 ಮಾರ್ಚ್ 2017, 10:49 IST
ಅಕ್ಷರ ಗಾತ್ರ

ಕೊಪ್ಪಳ: ‘ಮಹಿಳೆ ಸ್ಪರ್ಶದಿಂದ ಭಾವನೆಗಳನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಹೊಂದಿದ್ದಾಳೆ. ಆದ್ದರಿಂದ, ಎಲ್ಲರೂ ಹೆಣ್ಣಿನ ಬಗ್ಗೆ ಒಳ್ಳೆಯ ಭಾವನೆ ಬೆಳೆಸಿಕೊಳ್ಳಬೇಕಿದೆ’ ಎಂದು ಸಾಮಾಜಿಕ ಕಾರ್ಯಕರ್ತ ಹುಲಿಕುಂಟೆ ಮೂರ್ತಿ ಹೇಳಿದರು.

ನಗರದ ವಾಲ್ಮೀಕಿ ಭವನದಲ್ಲಿ ಗುರುವಾರ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ಆಶ್ರಯದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾ ಚರಣೆ ಅಂಗವಾಗಿ ನಡೆಯಲಿರುವ ರಾಜ್ಯ ಮಹಿಳಾ ಸಮಾವೇಶದ ಪೂರ್ವಾ ಭಾವಿಯಾಗಿ ನಡೆದ ಸ್ವಯಂ ಸೇವಕರ ಪ್ರೇರಣೆ ಹಾಗೂ ತರಬೇತಿ ಶಿಬಿರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ವಿಧಾನ ಪರಿಷತ್‌ ಸದಸ್ಯ ಉಗ್ರಪ್ಪ ನೇತೃತ್ವದ ಸದನ ಸಮಿತಿ ಹೆಣ್ಣು ಮಕ್ಕಳ ಸಂರಕ್ಷಣೆಗೆ ರಚನೆಯಾಗಿದೆ. ಮಹಿಳೆಯರಿಗಾಗಿ ಸರ್ಕಾರ 56 ಯೋಜನೆಗಳನ್ನು ಜಾರಿಗೆ ತಂದಿದೆ. ಹೀಗಿದ್ದರೂ ಎಲ್ಲ ಜನಪ್ರತಿನಿಧಿಗಳು, ಅಧಿಕಾರಿಗಳು ಹೆಣ್ಣನ್ನು ಕಾಲವ್ಯಯದ ಗೊಂಬೆಗಳನ್ನಾಗಿ ಉಪಯೋಗಿಸಿಕೊಂಡಿದ್ದಾರೆ.

ದಲಿತ ಮತ್ತು ರೈತ ಸಂಘಟನೆಗಳು ಹೆಣ್ಣು ಮಕ್ಕಳ ಸಂರಕ್ಷಣೆಗೆ ಸಹಕಾರಿಯಾಗಿವೆ. ಸಮಾಜದಲ್ಲಿ ಮೌಲ್ಯಗಳು ಅಮೃತ ವಿದ್ದಂತೆ. ನೇರವಾಗಿ ಮಾತನಾಡುವ ಗುಣ ಬೆಳೆಸಿಕೊಳ್ಳಬೇಕು. ಈ ಸಮಾವೇಶದಲ್ಲಿ ಭಾಗವಹಿಸು ವುದರಿಂದ ನಮ್ಮ ವ್ಯಕ್ತಿತ್ವದಲ್ಲಿ ಖಂಡಿತ ಬದಲಾವಣೆಯಾಗಲಿದೆ’ ಎಂದರು.

ಸಾಮಾಜಿಕ ಕಾರ್ಯಕರ್ತೆ ವಾಣಿ ಪೆರಿಯೋಡಿ ಮಾತನಾಡಿ, ‘ಸ್ವಯಂ ಸೇವಕರು ಸಮಾವೇಶದ ಬಗ್ಗೆ ತಮಗಿರುವ ಅಭಿಪ್ರಾಯಗಳನ್ನು ಇಲ್ಲಿ ಚರ್ಚಿಸಿ, ಪರಿಹರಿಸಿಕೊಳ್ಳಬಹುದು. ಸಮಾವೇಶದಲ್ಲಿ ಭಾಗವಹಿಸುವ ಎಲ್ಲ ಸ್ವಯಂಸೇವಕರು ಉತ್ತಮ ವ್ಯಕ್ತಿತ್ವ ಬೆಳಸಿಕೊಂಡು, ಸಮಾಜದ ಉತ್ತಮ ನಾಗರಿಕರಾಗಿ ರೂಪುಗೊಳ್ಳಬೇಕು.

ಸಮಾವೇಶದಲ್ಲಿ ಸ್ವಯಂ ಸೇವಕರ ಕೆಲಸದ ವಿವರ, ಯಾವ ಸಿದ್ಧಾಂತ ಮತ್ತು ಆಶಯವನ್ನು ಇಟ್ಟುಕೊಂಡು ಇಲ್ಲಿ ಭಾಗವಹಿಸಿದ್ದೀರಿ ಎನ್ನುವುದು ಕಾರ್ಯಾ ಗಾರದಲ್ಲಿ ಚರ್ಚೆಯಾಗಲಿದೆ.

ರಾಜ್ಯ ಮಹಿಳಾ ಸಮಾವೇಶದಲ್ಲಿ ಭಾಗವ ಹಿಸುವ ಸ್ವಯಂ ಸೇವಕರಿಗೆ ಪ್ರಮಾಣಪತ್ರ ವಿತರಿಸಲಾಗುತ್ತದೆ’ ಎಂದರು. ಬಳಿಕ ಸಾಮಾಜಿಕ ಕಾರ್ಯಕರ್ತೆ ಜ್ಯೋತಿ ಹಿಟ್ನಾಳ ಏಕಪಾತ್ರಾಭಿನಯದ ಮೂಲಕ ಮಹಿಳೆಯರ ಸಮಸ್ಯೆಗಳು ಮತ್ತು ಮಹಿಳೆ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಸ್ವಯಂಸೇವಕರಿಗೆ ಅರಿವು ಮೂಡಿಸಿದರು. ಶಿವಾನಂದ ಹೊದ್ಲೂರ, ಸರೋಜಾ ಬಾಕಳೆ, ಪತ್ರಕರ್ತ ಸಿರಾಜ್ ಬಿಸರಳ್ಳಿ, ನತರೀನ್‌ ಮಿಠಾಯಿ, ಎಚ್‌.ವಿ.ರಾಜಾಬಕ್ಷಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT