ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನ್ನ ಚಂಚಲ ಪಾದಗಳು

ಕವನ
Last Updated 4 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ನಿನ್ನ ಮನೆಯ ರಹದಾರಿ ಹುಡುಕುತ್ತಾ ಹೋಗುವವು ನನ್ನ ಚಂಚಲ ಪಾದಗಳು
ಕಾಣದಿದ್ದರೂ ಕಣ್ಣು ಮತ್ತೆ ಎಡವುತ್ತಾ ಹೋಗುವವು ನನ್ನ ಚಂಚಲ ಪಾದಗಳು

ಸಾಲದಲೆ ಇರುತ್ತವೆ ಎಲ್ಲಾ ಸಂಬಂಧಗಳು ಋಣದ ಮಾತು ಸುಮ್ಮನೆ
ಬರುತ್ತಲೇ ಅವಳ ಓಣಿ ಚಡಪಡಿಸುತ್ತಾ ಹೋಗುವವು ನನ್ನ ಚಂಚಲ ಪಾದಗಳು

ಇರದೆ ಅನುಮತಿ ಇನ್ನೊಬ್ಬರ ದುಃಖದಲಿ ಭಾಗಿದಾರನಾಗಬಾರದು ರಾಜಾ
ಆದರೂ ಆ ಮನೆಗೆ ದಾಪುಗಾಲಿಡುತ್ತಾ ಹೋಗುವವು ನನ್ನ ಚಂಚಲ ಪಾದಗಳು

ಯಾರಾದರೂ ಹೃದಯದ ಗಾಯಗಳ ಇಲಾಜು ಮಾಡುವರು ಎಲ್ಲಿಯ ತನಕ
ಮತ್ತೆ ಮಧುಶಾಲೆಯೆಡಗೆ ನಡುಗುತ್ತಾ ಹೋಗುವವು ನನ್ನ ಚಂಚಲ ಪಾದಗಳು

ಯಾಕೋ ಕಣ್ತಪ್ಪಿಸಿ ಓಡಾಡುತಿವೆ ಈ ಶಹರಿನ ಮುಖ ನಕ್ಷೆ ರಸ್ತೆಗಳು
ತಮ್ಮದೇ ಶವಯಾತ್ರೆಗೆ ಗಡಬಡಿಸುತ್ತಾ ಹೋಗುವವು ನನ್ನ ಚಂಚಲ ಪಾದಗಳು

ಮರ್ಯಾದೆ ಸಿಗದ ಜಾಗದಲಿ ಕರೆದುಕೊಂಡು ಹೋಗಿ ಮರ್ಯಾದೆಗೇಡು ಮಾಡುವವು
ಕ್ಷಮೆಯಿರಲಿ, ಮತ್ತೆ ಮತ್ತೇ ಮರ್ಯಾದೆಗೆಡುತ್ತಾ ಹೋಗುವವು ನನ್ನ ಚಂಚಲ ಪಾದಗಳು

–ಆರಿಫ್ ರಾಜಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT