ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಕ್ಷಣಾ ಬಜೆಟ್‌ ಹೆಚ್ಚಳ: ಚೀನಾ

Last Updated 4 ಮಾರ್ಚ್ 2017, 19:56 IST
ಅಕ್ಷರ ಗಾತ್ರ

ಬೀಜಿಂಗ್‌: ದೇಶದ ರಕ್ಷಣಾ ವಲಯವನ್ನು ಹೆಚ್ಚು ಸಧೃಡಗೊಳಿಸಲು ಈ ವರ್ಷ ರಕ್ಷಣಾ ಬಜೆಟ್‌ ಮೊತ್ತವನ್ನು ಶೇ 7 ರಷ್ಟು ಹೆಚ್ಚಿಸಲು ಚೀನಾ ಸರ್ಕಾರ ನಿರ್ಧರಿಸಿದೆ ಎಂದು ಚೀನಾ ಸಂಸತ್ತಿನ ವಕ್ತಾರೆ ಫು ಯಿಂಗ್‌ ಹೇಳಿದ್ದಾರೆ.

ಆದರೆ ಎಂದಿನಂತೆ ದೇಶದ ಜಿಡಿಪಿಯ ಶೇ 1.3 ರಷ್ಟು ಹಣವನ್ನು ಮಾತ್ರ ರಕ್ಷಣಾ ವಲಯಕ್ಕೆ ಚೀನಾ ಖರ್ಚು ಮಾಡಲಿದೆ ಎಂದು ಅವರು ತಿಳಿಸಿದ್ದಾರೆ.

‘ಮಾತುಕತೆಯ ಮೂಲಕ ಗಡಿ ವಿವಾದಗಳನ್ನು ಬಗೆಹರಿಸಲು  ಚೀನಾ ಸಿದ್ಧವಿದೆ. ಆದರೆ ದೇಶದ ಸಾರ್ವಭೌಮತ್ವ ಮತ್ತು ಹಿತಾಸಕ್ತಿ ಕಾಪಾಡಲು ಹಾಗೂ   ನೆರೆ ದೇಶಗಳ ಹಸ್ತಕ್ಷೇಪವನ್ನು ಎದುರಿಸಲು ರಕ್ಷಣಾ ವಲಯದಲ್ಲಿ ಸಾಮರ್ಥ್ಯ ಹೆಚ್ಚಿಸಿಕೊಳ್ಳುವುದು ಅವಶ್ಯಕ’ ಎಂದು ಫು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT