ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೈಕ್‌ ವ್ಹೀಲಿಂಗ್‌ 11 ಯುವಕರ ಬಂಧನ

ಕೆ.ಜಿ.ಹಳ್ಳಿಯ ಮಿಸ್ಬಾ ಬೈಕ್‌ ಗ್ಯಾರೇಜ್‌ ಮಾಲೀಕ ಸಯ್ಯದ್‌ ವಿರುದ್ಧ ಪ್ರಕರಣ ದಾಖಲು
Last Updated 4 ಮಾರ್ಚ್ 2017, 20:01 IST
ಅಕ್ಷರ ಗಾತ್ರ
ಬೆಂಗಳೂರು: ಪೂರ್ವ ಉಪ ವಿಭಾಗದ ಪುಲಕೇಶಿನಗರ, ಬಾಣಸವಾಡಿ, ಇಂದಿರಾನಗರ ಹಾಗೂ ಕೆ.ಆರ್‌.ಪುರ ಸಂಚಾರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಬೈಕ್‌ ವ್ಹೀಲಿಂಗ್‌ ಮಾಡುತ್ತಿದ್ದ 11 ಯುವಕರನ್ನು ಬಂಧಿಸಲಾಗಿದೆ.
 
ಕೆ.ಜಿ.ಹಳ್ಳಿಯ ನವೀದ್‌ ಅಹಮ್ಮದ್‌ (18), ಗಾಂಧಿನಗರದ ಆಸೀಫ್‌ (22), ನಾಗವಾರ ಮುಖ್ಯರಸ್ತೆಯ ಅಜೀಂ ಮುಲ್ಲಾ (22), ರಾಚೇನಹಳ್ಳಿಯ ಶೇಕ್‌ ಮಸೂದ್‌ (23), ಗಾಂಧಿನಗರದ ಸಯ್ಯದ್‌ ಮುಫೀದ್‌ (24), ಹಲಸೂರಿನ ಹೊಯ್ಸಳನಗರದ ವಿಘ್ನೇಶ್‌ (20), ಪಂಕಜ್‌, ಅಬ್ದುಲ್‌ ರೆಹಮಾನ್‌, ಸಾಯಿತೇಜ, ಕಿಶೋರ್‌ ಹಾಗೂ ಕಿರಣ್‌ ಬಂಧಿತರು. 
 
‘ವಿಶೇಷ ಕಾರ್ಯಾಚರಣೆ ನಡೆಸುವ ಮೂಲಕ ಬೈಕ್‌ ವ್ಹೀಲಿಂಗ್‌ ಮಾಡುತ್ತಿದ್ದವರ ವಿರುದ್ಧ 28 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. 
ಪುಲಕೇಶಿನಗರ ವ್ಯಾಪ್ತಿಯಲ್ಲಿ 17, ಕೆ.ಆರ್‌.ಪುರ 5, ಬಾಣಸವಾಡಿ, ಇಂದಿರಾನಗರದಲ್ಲಿ ತಲಾ ಮೂರು ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ’ ಎಂದು ಹಿರಿಯ ಪೊಲೀಸ್‌ ಅಧಿಕಾರಿ ತಿಳಿಸಿದರು.
 
‘ಬೈಕ್‌ಗಳ ಮೂಲ ಸ್ವರೂಪವನ್ನು ಬದಲಾವಣೆ ಮಾಡಿಕೊಡುತ್ತಿದ್ದ ಕೆ.ಜಿ.ಹಳ್ಳಿಯ ಮಿಸ್ಬಾ ಬೈಕ್‌ ಗ್ಯಾರೇಜ್‌ ಮಾಲೀಕ ಸಯ್ಯದ್‌ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT