ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಕ್ಕಿನ ಕಣ್ಣಿನ ಪೋರ

Last Updated 5 ಮಾರ್ಚ್ 2017, 19:30 IST
ಅಕ್ಷರ ಗಾತ್ರ

*ಧಾರಾವಾಹಿಯಲ್ಲಿ ನಟಿಸುವ ಅವಕಾಶ ಸಿಕ್ಕಿದ್ದು ಹೇಗೆ?
ಅದೊಂಥರಾ ಆಕಸ್ಮಿಕ ಬಿಡಿ. ನಮ್ಮ ಧಾರಾವಾಹಿ (ನಾ ನಿನ್ನ ಬಿಡಲಾರೆ, ಕಲರ್ಸ್‌ ಸೂಪರ್ ಚಾನೆಲ್) ನಿರ್ದೇಶಕ ವಿನೋದ್ ದೊಂಡಾಳೆ ಅವರ ಜೊತೆ ಫೇಸ್‌ಬುಕ್‌ನಲ್ಲಿ ನನ್ನ ಅತ್ತಿಗೆ ಫ್ರೆಂಡ್ ಆಗಿದ್ದರು. ಒಮ್ಮೆ ಅತ್ತಿಗೆ ಫೇಸ್‌ಬುಕ್‌ನಲ್ಲಿ ಫ್ಯಾಮಿಲಿ ಫೋಟೊ ಹಾಕಿದಾಗ ವಿನೋದ್ ಸರ್ ಅತ್ತಿಗೆಗೆ ‘ಆ ಬ್ಲಾಕ್ ಟೀ ಶರ್ಟ್ ಹುಡುಗ ಯಾರು? ಅವರಿಗೆ ನಟನೆಯಲ್ಲಿ ಆಸಕ್ತಿ ಇದೆಯಾ’ ಅಂತ ಕೇಳಿದ್ರಂತೆ. ನಾನು ಈ ಬಗ್ಗೆ ಹೇಳಿದಾಗ ಮನೆಯಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ತು. ಎಲ್ರೂ ನಾನು ಆ್ಯಕ್ಟ್ ಮಾಡ್ಲಿ ಅಂತಾನೇ ಹೇಳಿದ್ರು. ನಾನು ಮುನ್ನಡೆದೆ.

*ಮೊದಲ ಬಾರಿ ಕ್ಯಾಮೆರಾ ಎದುರಿಸಿದಾಗ...
ಯಪ್ಪಾ... ಅದೊಂದು ದೊಡ್ಡ ಸಾಹಸ. ಮೊದಲ ಒಂದು ತಿಂಗಳು ಫುಲ್ ಸೈಕಲ್ ಹೊಡಿತಾ ಇದ್ದೆ. ನನಗೆ ನಟನೆಯ ಗಂಧ ಗಾಳಿ ಗೊತ್ತಿರಲಿಲ್ಲ. ನಾನು ಎಂದೂ ನಾಟಕ, ನಟನೆ ಅಂತೆಲ್ಲಾ ಮಾಡಿದವನೇ ಅಲ್ಲ. ಧಾರಾವಾಹಿಗಾಗಿ ಮೊದಲ ಬಾರಿ ಕ್ಯಾಮೆರಾ ಎದುರಿಸಿದೆ. ಮೊದಮೊದಲು ಒಂಥರಾ ಗೊಂದಲ ಇತ್ತು.  ಕ್ಯಾಮೆರಾ ಆನ್ ಆದಾಗ ಎಲ್ಲಿ ನೋಡಬೇಕು, ಹೇಗೆ ರಿಯಾಕ್ಟ್ ಮಾಡಬೇಕು ಅಂತ ಗೊತ್ತಾಗುತ್ತಿರಲಿಲ್ಲ. ನಿರ್ದೇಶಕ ವಿನೋದ್ ದೊಂಡಾಳೆ ನನಗೆ ನಟನೆ ಹಾಗೂ ಕ್ಯಾಮೆರಾದ ಇಂಚಿಂಚು ಪರಿಚಯ ಮಾಡಿಸಿದ್ರು.

*ಮನೆಯವರ ಸಹಕಾರ ಹೇಗಿತ್ತು?
ನಮ್ಮ ಮನೇಲಿ ತುಂಬಾ ಸಹಕಾರ ನೀಡಿದ್ರು. ನನಗೆ ನಟಿಸಲು ಅವಕಾಶ ಸಿಕ್ಕಿದೆ  ಎಂದಾಗ ‘ಸುಮ್ ಸುಮ್ನೆ ಧಾರಾವಾಹಿಗೆ ಸೆಲೆಕ್ಟ್ ಆಗೋಲ್ಲ. ಎಷ್ಟೋ ಜನ ಅವಕಾಶಕ್ಕಾಗಿ ಕಾಯ್ತಾ ಇರ್ತಾರೆ. ಆದರೆ ಅವರಿಗೆ ಸಿಕ್ಕಿರೊಲ್ಲ. ನಿನಗೆ ನೀನು ಆಸೆ ಪಡದೇ ಸಿಕ್ಕಿದೆ.  ಈ  ಅವಕಾಶನ ಸದುಪಯೋಗ ಮಾಡ್ಕೋ’ ಎಂದು ಅಪ್ಪ ಧೈರ್ಯ ಹೇಳಿದ್ರು. ನಾನು ಐಬಿಎಂನಲ್ಲಿ ಕೆಲಸ ಮಾಡುತ್ತಿದ್ದೆ. ಆ ಕೆಲಸ ಬಿಟ್ಟು ನಟನೆಯಲ್ಲಿ ತೊಡಗಿಸಿಕೊಂಡಿದ್ದೇನೆ. ನಮ್ಮ ವಂಶದಲ್ಲೇ ಯಾರೂ ನಟರಿಲ್ಲ,  ಮನೇಲಿ ಎಲ್ಲರೂ ತುಂಬಾನೇ ಸಹಕಾರ ನೀಡಿದ್ದಾರೆ.

*‘ನಾ ನಿನ್ನ ಬಿಡಲಾರೆ’ ಧಾರಾವಾಹಿ ಹೆಸರೇ ಭಯ ಬೀಳ್ಸೋ ಹಾಗಿದೆಯಲ್ಲಾ...
ಹಹಹ…ಹುಂ. ಇದೊಂದು ಸೂಪರ್ ನ್ಯಾಚುರಲ್ ಅಂಶ ಇರೋ ಕತೆ. ಆದರೆ ಧಾರಾವಾಹಿ ಒಂಥರಾ ನವರಸಗಳನ್ನು ಒಳಗೊಂಡಿದೆ. ಈ ಧಾರಾವಾಹಿಯಲ್ಲಿ ಒಬ್ಬೊಬ್ಬರದು ಒಂದೊಂದು ರೀತಿಯ ಪಾತ್ರ. ನವರಸದ ಪ್ರತಿ ರಸವೂ ಒಂದೊಂದು ನಟರಲ್ಲಿದೆ. ರೋಮಾನ್ಸ್ ಅಂದ್ರೆ ನಂದಿನಿ, ಬೀಭತ್ಸ ಅಂದ್ರೆ ಕಾಂಚನಾ ಹೀಗೆ ಪ್ರತಿ ಪಾತ್ರಗಳು ಭಿನ್ನವಾಗಿದೆ. ಧಾರಾವಾಹಿಯಲ್ಲಿ ನಗು, ಅಳು, ಸಂತೋಷ, ದುಃಖ ಎಲ್ಲವೂ ಇದೆ. ಧಾರಾವಾಹಿಯಲ್ಲಿ ನಾನು ಒಬ್ಬ ಶ್ರೀಮಂತರ ಮನೆ ಮಗ. ಆದರೆ ನಾನು ತುಂಬಾ ಸರಳ ಸ್ವಭಾವದ ಹುಡುಗ. ಜೀವನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಪಾತ್ರ ನನ್ನದು.

*ನಿಜ ಜೀವನಕ್ಕೂ, ಧಾರಾವಾಹಿ ಪಾತ್ರಕ್ಕೂ ತುಂಬಾ ಸಾಮ್ಯತೆ ಇದೆ ಅಂತೆ, ಹೌದಾ?
ಅದು ನಿಮ್ಗೂ ಗೊತ್ತಾಯ್ತಾ...? ಧಾರಾವಾಹಿಯ ಅಕ್ಷಯ್‌ಗೂ ಜಿನ ಜೀವನದ ದೀಪಕ್‌ಗೂ ತುಂಬಾನೇ ಹೋಲಿಕೆ ಇದೆ. ನಂಗೆ ಶ್ರೀಮಂತಿಕೆ ಇದ್ದರೂ ದರ್ಪ ತೋರಿಸೋದು ಅಂದ್ರೆ ಆಗಲ್ಲ. ಧಾರಾವಾಹಿಲಿ ಕಾಂಚನಾ ಥರಾ ಅಹಂಕಾರ ತೋರಿಸೋ ಹುಡುಗೀರು ಅಂದ್ರೆ ನಂಗೆ ಹಿಡಿಸಲ್ಲ. ನನಗೆ ಸೌಮ್ಯ ಸ್ವಭಾವದ ಹೆಣ್ಣುಮಕ್ಕಳು ಇಷ್ಟ ಆಗ್ತಾರೆ.

*ನಿಮ್ಮ ಬೆಕ್ಕಿನ ಕಣ್ಣು ಹಿಂಬಾಲಿಸುವ ಹುಡುಗಿಯರ ಸಂಖ್ಯೆ ಬಲು ದೊಡ್ಡದಂತೆ...
ಇದಾರೆ ಒಂದು ಎಂಬತ್ತರಿಂದ ನೂರು ಜನ. ಬಟ್ ನಾನು ಯಾರ ವಿಷಯದಲ್ಲೂ ಸೀರಿಯಸ್ ಆಗಿಲ್ಲ. ನಂಗೆ ಫ್ರೆಂಡ್ಸ್ ಅಂದ್ರೆ ಇಷ್ಟ. ನಾನು ಜೀವನವನ್ನು ಜಾಲಿಯಾಗಿ ಕಳೆಯೋಕೆ ಇಷ್ಟಪಡೋನು. ಜೀವನವನ್ನು ಯಾವುದೇ ನಿರ್ಬಂಧ ಇಲ್ದೆ ಎಂಜಾಯ್ ಮಾಡಬೇಕು. ನನ್ನ ಫ್ರೆಂಡ್ಸ್‌ ಪಟ್ಟಿಯಲ್ಲಿ ಹುಡುಗರ ಸಂಖ್ಯೆಯೇ ಹೆಚ್ಚು.

*ಭೂತ ಪ್ರೇತವನ್ನೆಲ್ಲಾ ನಂಬ್ತಿರಾ?
ಇಲ್ಲಾ... ಖಂಡಿತಾ ನಾನು ಅದನೆಲ್ಲಾ ನಂಬೊಲ್ಲ. ದೇವರನ್ನು ನಂಬ್ತೀನಿ ಅಷ್ಟೇ. ದೇವರು ಅಂದ್ರೆ ಒಂದು ಒಳ್ಳೆಯ ಶಕ್ತಿ.  ಅದೊಂದು ಭಾವನೆ. ದೇವಸ್ಥಾನಕ್ಕೆ ಜನ ಹೋಗೋದು ನೆಮ್ಮದಿ, ಶಾಂತಿ ಸಿಗುತ್ತೆ ಅನ್ನೋ ನಂಬಿಕೆಯಲ್ಲಿ. ನಿಜವಾದ ದೆವ್ವ ಭೂತ ಅಂದ್ರೆ ಅದು ಮನುಷ್ಯರೇ. ಮನುಷ್ಯರೇ ದೆವ್ವದ ಥರಾ ವರ್ತಿಸ್ತಾರೆ. ಮನುಷ್ಯರಿಗೆ ಮನುಷ್ಯರಿಂದಲೇ ತೊಂದರೆಗಳು ಜಾಸ್ತಿ.

*ಇಷ್ಟದ ಹೀರೋ, ಹಿರೋಯಿನ್?
ಇಷ್ಟದ ಹೀರೋ ಕೇಳಿದ್ರೆ ಪಟ್ ಅಂತ ರವಿಚಂದ್ರನ್ ಹೆಸರು ಹೇಳ್ತಿನಿ. ನನ್ನ ಮೊಬೈಲ್‌ನಲ್ಲಿ ಇರೋ ಹಾಡುಗಳೆಲ್ಲಾ ರವಿಚಂದ್ರನ್ ಸಿನಿಮಾದ್ದು. ಇನ್ನೂ ನಟಿಯರ ಬಗ್ಗೆ ಕೇಳಿದ್ರೆ ಹೇಳೊಕೆ ಕಷ್ಟ ಆಗುತ್ತೆ. ಒಂದೊಂದು ಸಿನಿಮಾದಲ್ಲಿ ಒಬ್ಬೊಬ್ಬ ನಟಿ ಇಷ್ಟ ಆಗ್ತಾರೆ. ನಂಗೆ ಒಮ್ಮೆ ರಾಗಿಣಿ ಇಷ್ಟ ಆಗಿದ್ರು. ‘ಪರಾರಿ’ ಸಿನಿಮಾ ನೋಡಿದಾಗ ಶುಭಾ ಪೂಂಜ ಇಷ್ಟ ಆಗಿದ್ರು. ನಟಿಯರ ಲಿಸ್ಟ್  ಬೇಳಿತಾ ಹೋಗುತ್ತೆ ಬಿಡಿ.

*ಜೀವನ ಅಂದ್ರೆ...
ಜೀವನ ಅನ್ನೋದು ಒಂದು ಪಯಣ. ನಮ್ಮ ನಿರೀಕ್ಷೆಗಳೆಲ್ಲಾ ಜೀವನದಲ್ಲಿ ಈಡೇರುವುದಿಲ್ಲ. ನಮ್ಮ ಹುಟ್ಟು ಕೂಡ ನಿರೀಕ್ಷೆ ಮಾಡಿ ಪಡೆದಿದ್ದಲ್ಲ ಅಲ್ವಾ...?

*ಧಾರಾವಾಹಿಯಲ್ಲಿ ಅಕ್ಷಯ್ ತನ್ನ ಹೆಂಡತಿಯನ್ನು ಪ್ರೀತಿಸುವಷ್ಟು ನಿಜ ಜೀವನದ ದೀಪಕ್ ತನ್ನ ಹೆಂಡ್ತೀನಾ ಪ್ರೀತಿ ಮಾಡ್ತಾನಾ?
ನಂಗೆ ಮದುವೆ ಬಗ್ಗೆ ಅಂಥ ಆಸಕ್ತಿಯಿಲ್ಲ. ಇಲ್ಲಿಯವರೆಗೂ ಮದುವೆಯ ಪರಿಕಲ್ಪನೆಯೇ ಅರ್ಥ ಆಗಿಲ್ಲ. ಮದುವೆ ಆದ ಮೇಲೆ ಜನ ತುಂಬಾ ಖುಷಿಯಾಗಿ ಇರ್ತಾರೆ ಅಂತೆಲ್ಲಾ ಹೇಳ್ತಾರೆ. ನಂಗೆ ಜಗತ್ತನ್ನು ಸುತ್ತೋ ಆಸೆ. ಹೆಂಡತಿ ಜೊತೆ ಇದ್ರೆ ಸ್ವಾತಂತ್ರ ಇರೋಲ್ಲ. ನಾವು ಫ್ರೆಂಡ್ಸ್ ಜೊತೆ ಹೋದಾಗ ಸಿಗೋ ಖುಷಿ ಹೆಂಡ್ತಿ ಜೊತೆ ಹೋದಾಗ ಸಿಗೊಲ್ಲ. ನಂಗೆ ಹೆಂಡ್ತಿ ಅಂದ್ರೆ ಸ್ನೇಹಿತೆ ಥರಾ ಇರಬೇಕು.

*
ನಂಗೆ ಬೈಕ್ ರೈಡಿಂಗ್ ಅಂದ್ರೆ ತುಂಬಾ ಇಷ್ಟ. ನಮ್ಮದೊಂದು ಹುಡುಗರ ಗ್ಯಾಂಗ್ ಇದೆ. ವೀಕೆಂಡ್ ನಲ್ಲಿ  ಬೈಕ್ ರೈಡಿಂಗ್ ಹೋಗ್ತೀವಿ. ಈ ಬಾರಿ ಹೊಸ ವರ್ಷಕ್ಕೆ ಮಡಿಕೇರಿಗೆ  ಹೋಗಿದ್ವಿ. ಇನ್ನು ನಾಯಿ ಕೂಡ ತುಂಬಾ ಇಷ್ಟ.
–ದೀಪಕ್‌,
ಕಿರುತೆರೆ ನಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT