ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಮವಾರ, 6–3–1967

50 ವರ್ಷಗಳ ಹಿಂದೆ
Last Updated 5 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಇ.ಎಂ.ಎಸ್. ಸಂಪುಟದಲ್ಲಿ 13 ಸಚಿವರು
ತಿರುವನಂತಪುರ, ಮಾ. 5–
ಕೇರಳದಲ್ಲಿ ಎರಡನೆ ಕಾಂಗ್ರೆಸ್ಸೇತರ ಸಂಪುಟದಲ್ಲಿ 13 ಮಂದಿ ಸದಸ್ಯರಿದ್ದಾರೆ.

ವಾಮ ಕಮ್ಮೂನಿಸ್ಟ್ ಪಕ್ಷದ ನಾಯಕ ಹಾಗೂ ಮುಖ್ಯಮಂತ್ರಿಯಾಗಿ ನೇಮಕಗೊಂಡಿರುವ ಶ್ರೀ ಇ.ಎಂ.ಎಸ್. ನಂಬೂದ್ರಿಪಾಡ್ ಅವರು ಸಂಯುಕ್ತರಂಗ ಸರ್ಕಾರದ ಸಚಿವರ ಪಟ್ಟಿಯನ್ನು ಕೇರಳದ ರಾಜ್ಯಪಾಲ ಶ್ರೀ ಭಗ್ವಾನ್ ಸಹಾಯ್ ಅವರಿಗೆ ಇಂದು ಬೆಳಿಗ್ಗೆ 10 ಗಂಟೆಗೆ ಅರ್ಪಿಸಿದರು.

**
‘ಸ್ಪರ್ಧಿಸುವವರಿಗೆ ತಡೆ ಇಲ್ಲ: ಒಮ್ಮತದ ಆಯ್ಕೆಗೆ ಯತ್ನ’
ನವದೆಹಲಿ, ಮಾ. 5–
‘ಕೇಂದ್ರದಲ್ಲೇ ಆಗಲಿ, ರಾಜ್ಯಗಳಲ್ಲೇ ಆಗಲಿ ನಾಯಕತ್ವಕ್ಕೆ ಸ್ಪರ್ಧಿಸದಂತೆ ಯಾರಿಗೇ ಆದರೂ ತಡೆಯೊಡ್ಡಲು ಸಾಧ್ಯವಿಲ್ಲ. ಎಲ್ಲರಿಗೂ ಸ್ಪರ್ಧಿಸಲು ಹಕ್ಕಿದೆ. ಆದರೆ ಪರಸ್ಪರ ಮಾತುಕತೆಗಳಿಂದ ಸ್ಪರ್ಧೆಯನ್ನು ತಪ್ಪಿಸಲು ಸಾಧ್ಯವಿದೆ’ ಎಂದು ಕಾಂಗ್ರೆಸ್ ಅಧ್ಯಕ್ಷ ಶ್ರೀ ಕಾಮರಾಜರು ಇಂದು ಇಲ್ಲಿ ನುಡಿದರು.

**
ಪತ್ರಿಕೆಗಳ ವಿರುದ್ಧ ದೂರು ಸಲ್ಲಿಸಲು ಸಾರ್ವಜನಿಕರಿಗೆ ಅವಕಾಶ
ನವದೆಹಲಿ, ಮಾ. 5–
ನಿನ್ನೆ ಇಲ್ಲಿ ಸಭೆ ಸೇರಿದ ಪತ್ರಿಕಾ ಮಂಡಳಿಯು ದೂರುಗಳಿಗೆ ಸಂಬಂಧಿಸಿದಂತೆ ವಿಧಿ ನಿಯಮಗಳನ್ನು ರಚಿಸಿತು.

ಪತ್ರಿಕಾ ನೀತಿ ನಿಯಮ ಅಥವಾ ಸಾರ್ವಜನಿಕ ಅಭಿರುಚಿಗೆ ವಿರೋಧವಾಗಿ ವರ್ತಿಸಿದೆ ಎಂದು ಹೇಳಲಾಗಿರುವ ಪತ್ರಿಕೆಯ ವಿರುದ್ಧ ದೂರನ್ನು ಸಲ್ಲಿಸಲು ಈ ನಿಯಮಗಳು ಸಾರ್ವಜನಿಕರಿಗೆ ಅವಕಾಶ ನೀಡಿವೆ.

ಪತ್ರಿಕಾ ನೀತಿ ನಿಯಮಗಳ ಉಲ್ಲಂಘನೆ ಹಾಗೂ ವೃತ್ತಿ ಸಂಬಂಧವಾದ ದುರ್ವರ್ತನೆಗಳ ಆರೋಪದ ಮೇಲೆ ಸಂಪಾದಕರುಗಳು ಹಾಗೂ ಪತ್ರಕರ್ತರ ವಿರುದ್ಧ ದೂರನ್ನು ಸಲ್ಲಿಸಲೂ ಸಾರ್ವಜನಿಕರಿಗೆ ಅವಕಾಶ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT