ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ್ಯಾಜ್ಯ ಸಂಗ್ರಹಣಾ ತೊಟ್ಟಿಗೆ ಬೆಂಕಿ

ವಿಲೇವಾರಿಯಾಗದ ವಿಜಯಪುರ ಕಸದ ರಾಶಿ
Last Updated 5 ಮಾರ್ಚ್ 2017, 19:46 IST
ಅಕ್ಷರ ಗಾತ್ರ

ವಿಜಯಪುರ: ಪಟ್ಟಣದಲ್ಲಿ ವಿಲೇವಾರಿಯಾಗದೆ ಎಲ್ಲೆಂದರಲ್ಲಿ ಕೊಳೆಯುತ್ತಿರುವ ಕಸದ ರಾಶಿಗಳಿಂದ ದುರ್ನಾತ ಬೀರುತ್ತಿರುವುದು ಒಂದೆಡೆಯಾದರೆ, ಕಸದ ಶೇಖರಣಾ ತೊಟ್ಟಿಗಳಿಗೆ ಬೆಂಕಿಬಿದ್ದು ಹೊರ ಬರುತ್ತಿರುವ ಕಲುಷಿತ ಹೊಗೆಯಿಂದ ಜನರ ಆರೋಗ್ಯದಲ್ಲಿ ಏರುಪೇರಾಗುತ್ತಿದೆ ಎಂದು ನಾಗರಿಕರು ಆರೋಪಿಸಿದ್ದಾರೆ.

ವಿಜಯಪುರ ಪಟ್ಟಣದಲ್ಲಿ 23 ವಾರ್ಡುಗಳಿವೆ. 50 ಸಾವಿರಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ. ದಿನನಿತ್ಯ 6 ಟನ್ ನಷ್ಟು ಕಸ ಉತ್ಪಾದನೆಯಾಗುತ್ತಿದೆ. ಇದುವರೆಗೂ ಜಿಲ್ಲಾಡಳಿತ  ವೈಜ್ಞಾನಿಕವಾಗಿ ಕಸವಿಲೇವಾರಿ ಮಾಡಲು ಸೂಕ್ತವಾದ ಸ್ಥಳಾವಕಾಶವನ್ನು ನೀಡಿಲ್ಲ. ಆಯಾ ವಾರ್ಡುಗಳಲ್ಲಿನ ಕಸವನ್ನು ಅಲ್ಲೆ ವಿಂಗಡಣೆ ಮಾಡುವಂತೆ ಹೇಳಿದ್ದಾರೆ. ಅದು ಕೆಲವು ವಾರ್ಡುಗಳಲ್ಲಿ ಮಾತ್ರ ನಡೆಯುತ್ತಿದೆ ಎಂದು ಪುರಸಭೆಯ ಅಧಿಕಾರಿಗಳು ಹೇಳುತ್ತಿದ್ದಾರೆ.

ಕೆಲವು ವಾರ್ಡುಗಳಲ್ಲಿ ಸ್ಥಳಾವಕಾಶವಿಲ್ಲ. ಮನೆಗಳ ಸಮೀಪದಲ್ಲಿ ಕಸವನ್ನು ವೈಜ್ಞಾನಿಕವಾಗಿ ಸಂಸ್ಕರಣೆ ಮಾಡಲು ಹೊರಟರೆ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ.

ಪುರಸಭೆಯವರು ರಾತ್ರಿಯ ವೇಳೆಯಲ್ಲಿ ಪಟ್ಟಣದಲ್ಲಿನ ಕಸವನ್ನು ತೆಗೆದುಕೊಂಡು ಹೋಗಿ ಹಳ್ಳಿಗಳಲ್ಲಿನ ಪಾಳುಬಾವಿಗಳಿಗೆ ಸುರಿಯುತ್ತಿದ್ದಾರೆ. ಇದರಿಂದ ಮುಂದಿನ ದಿನಗಳಲ್ಲಿ ಈಗ ಲಭ್ಯವಾಗುತ್ತಿರುವ ನೀರಿನಲ್ಲಿ ವಿಷವನ್ನು ಕುಡಿಯುವಂತಹ ಪರಿಸ್ಥಿತಿಗಳು ಎದುರಾಗಲಿದೆ.

ಪ್ರಸ್ತುತ 1500 ಅಡಿಗಳಿಂದ ಬರುತ್ತಿರುವ ನೀರಿನಲ್ಲಿ ಫ್ಲೋರೈಡ್ ನ ಅಂಶವಿರುವ ನೀರು ಕುಡಿದು ಮಾರಕ ರೋಗಗಳಿಗೆ ಒಳಗಾಗುತ್ತಿದ್ದೇವೆ. ಈ ಪರಿಣಾಮವಾಗಿ  ಪಟ್ಟಣದಲ್ಲಿ ಎಲ್ಲೆಂದರಲ್ಲಿ ಬಿದ್ದಿರುವ ಕಸದ ರಾಶಿಗಳಿಗೆ ಬೆಂಕಿ ಹಚ್ಚುತ್ತಿದ್ದಾರೆ. ಇದರಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದರ ಜೊತೆಗೆ ಪ್ರಾಣಿ ಪಕ್ಷಿಗಳಿಗೆ ಕಂಟಕವಾಗುತ್ತಿದೆ, ಕೂಡಲೇ ಪುರಸಭೆಯ ಅಧಿಕಾರಿಗಳು ಹಾಗೂ ಜಿಲ್ಲಾಡಳಿತ  ಎಚ್ಚೆತ್ತುಕೊಳ್ಳಬೇಕು ಎಂದು ಭಾರತ ಜನಜಾಗೃತಿ ಸೇನೆ ರಾಜ್ಯಾಧ್ಯಕ್ಷ ಸಿ.ಮುನಿಯಪ್ಪ, ಜಿಲ್ಲಾಧ್ಯಕ್ಷ ಅಶ್ವಥ್ಥಪ್ಪ, ಮುನಿಕೃಷ್ಣಪ್ಪ, ಮುನೀಂದ್ರ, ಮಂಜು ನಾಥ್, ಮನೋಹರ್, ಕಿಶೋರ್ ಕುಮಾರ್, ರಾಜೇಶ್ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT