ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾಕಾವ್ಯ ಪೂಜೆ, ಉಪನ್ಯಾಸಕ್ಕೆ ಸೀಮಿತವಲ್ಲ

ಸಂಪೂರ್ಣ ರಾಮಾಯಣ ಸಮೀಕ್ಷೆಯ ಸಮಾರೋಪ ಸಮಾರಂಭದಲ್ಲಿ ಈಶ್ವರಪ್ಪ
Last Updated 6 ಮಾರ್ಚ್ 2017, 6:06 IST
ಅಕ್ಷರ ಗಾತ್ರ

ಶಿವಮೊಗ್ಗ: ‘ರಾಮಾಯಣ ಹಾಗೂ ಮಹಾಭಾರತ ಗ್ರಂಥಗಳು ವಿದೇಶಿಗರ ಗಮನ ಸೆಳೆದಿವೆ’ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಹೇಳಿದರು.

ನಗರದ ಅಂಬೇಡ್ಕರ್ ಭವನದಲ್ಲಿ ಭಾನುವಾರ ವಾಗ್ಮಿ ಪಾವಗಡ ಪ್ರಕಾಶ್‌ರಾವ್ ಅವರ ಸಂಪೂರ್ಣ ರಾಮಾಯಣ ಸಮೀಕ್ಷೆಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಇತರ ರಾಷ್ಟ್ರಗಳ ಜನರು ನೆಮ್ಮದಿ ಜೀವನಕ್ಕೆ ರಾಮಾಯಣ, ಮಹಾಭಾರತ ಗ್ರಂಥಗಳನ್ನೇ ಅವಲಂಬಿಸಿದ್ದಾರೆ. ಭಾರತೀಯ ಸಂಸ್ಕೃತಿ, ಪರಂಪರೆಯ ಪ್ರತೀಕಗಳಾಗಿರುವ ಮಹಾಕಾವ್ಯಗಳನ್ನು ಕೇವಲ ಪೂಜಿಸಿ, ಉಪನ್ಯಾಸ ಕೇಳಿದರೆ ಮಾತ್ರ ಸಾಲದು. ಅದರ ತತ್ವ ಹಾಗೂ ಆದರ್ಶಗಳನ್ನು ಜೀವನದಲ್ಲಿ ಪರಿಪಾಲಿಸಬೇಕು’ ಎಂದು ಸಲಹೆ ನೀಡಿದರು.

‘ದೇಶದಲ್ಲಿ ಮಹಾಕಾವ್ಯಗಳು ಇರದೇ ಹೋಗಿದ್ದರೆ, ಯಾವ ಪರಿಸ್ಥಿತಿ ಉಂಟಾಗುತ್ತಿತ್ತು ಎಂಬುದನ್ನು ಊಹಿಸುವುದೂ ಕಷ್ಟ. ಪಾವಗಡ ಪ್ರಕಾಶ್ ರಾವ್ ಅವರು ರಾಮಾಯಣದ ಬಗ್ಗೆ ವಿದೇಶದಲ್ಲಿಯೂ ಉಪನ್ಯಾಸ ನೀಡುತ್ತಿದ್ದಾರೆ’ ಎಂದು ತಿಳಿಸಿದರು. ರಾಮಾಯಣ, ಮಹಾಭಾರತದಲ್ಲಿ ಇರುವ ಜೀವನಮೌಲ್ಯ ಅಂಶಗಳ ಬಗ್ಗೆ ತಿಳಿದುಕೊಳ್ಳದ ಪರಿಣಾಮ  ದುಷ್ಕೃತ್ಯಗಳು ಹೆಚ್ಚಾಗುತ್ತವೆ. ಹಾಗಾಗಿ ಪ್ರತಿ
ಯೊಬ್ಬನೂ ಮನೆಯಲ್ಲಿ ರಾಮಾಯಣ, ಮಹಾಭಾರತಗಳಲ್ಲಿರುವ ಅಂಶಗಳನ್ನು ಪಾಲಿಸಬೇಕು ಎಂದರು.

ಸಮಾರೋಪ ಭಾಷಣ ಮಾಡಿದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಕೆ.ಎನ್.ವೆಂಕಟನಾರಾಯಣ, ‘ರಾಮಾಯಣ ಭಾರತ ದೇಶದ ಸಂಸ್ಕೃತಿಯ ಒಂದು ಭಾಗವಾಗಿದೆ. ವೇದಗಳ ರೂಪ. ವೇದಗಳನ್ನು ಅರ್ಥೈಕೊಳ್ಳುವುದು ಕಷ್ಟವೆಂದಾದರೆ, ಅದರ ಸಾರಾಂಶ ಹಾಗೂ ಜೀವನಕ್ಕೆ ಮಾರ್ಗದರ್ಶನ ನೀಡುವ ಅಂಶಗಳನ್ನು ರಾಮಾಯಣ, ಮಹಾಭಾರತ ಕೃತಿಗಳ ಮೂಲಕ ತಿಳಿಯಬಹುದು’ ಎಂದರು.

‘ಪಾವಗಡ ಪ್ರಕಾಶ್ ರಾಮಾಯಣದ ಪ್ರತಿ ಪಾತ್ರದ ಕುರಿತು ಅದ್ಭುತವಾಗಿ ವಿವರಣೆ ನೀಡುತ್ತಾರೆ. ಅವರು ಕೇಳುಗರಿಗೆ, ಓದುಗರಿಗೆ ಅರ್ಥವಾಗುವ ರೀತಿಯಲ್ಲಿ ರಾಮಾಯಣ ಕೃತಿಯ ಎಲ್ಲ ಭಾಗಗಳ ವಿವರಣೆಯನ್ನು ಉಪನ್ಯಾಸ ಮಾಲಿಕೆಗಳಲ್ಲಿ ನೀಡಿದ್ದಾರೆ’ ಎಂದರು.
ವಿಪ್ರ ನೌಕರರ ಕ್ಷೇಮಾಭಿವೃದ್ಧಿ ಸಂಘ ಅಧ್ಯಕ್ಷ ಎಚ್.ಕೆ.ಕೇಶವಮೂರ್ತಿ ಅಧ್ಯಕ್ಷತೆ ವಹಿಸಿದ್ದರು.

ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ನಟರಾಜ್ ಭಾಗವತ್, ಪ್ರಮುಖರಾದ ಎಚ್.ಸಿ.ರವಿಕುಮಾರ್, ಬ್ರಾಹ್ಮಣ ಮಹಾಸಭಾದ ರಾಜ್ಯ ಸಂಘಟನಾ ಕಾರ್ಯದರ್ಶಿ ಮ.ಸ. ನಂಜುಂಡ ಸ್ವಾಮಿ, ಕೇಶವಮೂರ್ತಿ, ದಿನೇಶ್‌ಕುಮಾರ್ ಜೋಷಿ, ಅಚ್ಯುತ್‌ರಾವ್, ಛಾಯಾಪತಿ, ಜಿ.ಎಸ್.ಅನಂತ್, ರವಿಕುಮಾರ್, ವನಜಾ, ಪ್ರಹ್ಲಾದ್ ಪಾಟೀಲ್, ಗುರುದತ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT