ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕರ್ಮದ ಕೂಸಿಗೆ ಧರ್ಮದ ತೊಟ್ಟಿಲು’

ನವಲಹಳ್ಳಿ: ನಾಟಕ ಪ್ರದರ್ಶನ
Last Updated 6 ಮಾರ್ಚ್ 2017, 8:26 IST
ಅಕ್ಷರ ಗಾತ್ರ
ತಾವರಗೇರಾ : ನಾಟಕ ಪ್ರದರ್ಶನ ಮತ್ತು ನಾಟಕ ನೋಡುವಂತಹ ಪ್ರೇಕ್ಷಕರು ಸಿನಿಮಾ ಕಡೆ ಗಮನ ಹರಿಸುತ್ತಿದ್ದಾರೆ.  ನಾಟಕದಲ್ಲಿ ಬರುವ ಸನ್ನಿವೇಶಗಳು ಕುಟುಂಬದ ಅಂಕು ಡೊಂಕುಗಳನ್ನು ತಿದ್ದುವಂತಹ ಕೆಲಸ ಮಾಡುತ್ತವೆ ಪ್ರೇಕ್ಷಕರು ಆಲಿಸಬೇಕು ಎಂದು ವಕೀಲರಾದ ಅಮರೇಗೌಡ ಎ ಪಾಟೀಲ್ ಹೇಳಿದರು.
 
ನವಲಹಳ್ಳಿ ಗ್ರಾಮದ ದುರ್ಗಾದೇವಿ ಜಾತ್ರೆ ಅಂಗವಾಗಿ ಶುಕ್ರವಾರ ಶರಣಬಸವೇಶ್ವರ ನಾಟ್ಯ ಸಂಘ ಕರ್ಮದ ಕೂಸಿಗೆ ಧರ್ಮದ ತೊಟ್ಟಿಲು ಎಂಬ ನಾಟಕ ಪ್ರದರ್ಶನದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
 ನಾಟಕದಲ್ಲಿ ಬರುವಂತಹ ಸನ್ನಿವೇಶಗಳು ಸಾರ್ವಜನಿಕರ ದಿನ ನಿತ್ಯ ಜೀವನದ ಅಂಕು ಡೊಂಕುಗಳನ್ನು ತಿದ್ದುತ್ತವೆ , ಕುಟುಂಬಕ್ಕೆ ಕನ್ನಡಿ ಇದ್ದಂತೆ ಎಂದು ಮಾತನಾಡಿದರು.
 
ಹಿರೇ ಮನ್ನಾಪುರ ಜಿಲ್ಲಾ ಪಂಚಾಯತಿ ಸದಸ್ಯ ಕೆ. ಮಹೇಶ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿದರು. ಗ್ರಾಮ ಪಂಚಾಯತಿ ಅಧ್ಯಕ್ಷ ಕಳಕಪ್ಪ ಬಳೂಟಗಿ, ಪತ್ರಕರ್ತ ಪ್ರಸನ್ನ ದೇಸಾಯಿ ಮಾತನಾಡಿದರು.

ಮುರಗಯ್ಯ ಸ್ವಾಮಿ ಹಂಚಿನಾಳ, ಸಂಗಯ್ಯ ಹಿರೇಮಠ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು. ಗ್ರಾಮ ಪಂಚಾಯತಿ ಸದಸ್ಯರಾದ ದೊಡ್ಡಬಸವ ಪಾಟೀಲ, ತಿಮ್ಮಣ್ಣ ಕುರನಾಳ, ಬಸಮ್ಮ ಬಂಡೇರ್, ಲಕ್ಷ್ಮೀ ವಡ್ಡರ, ಎಪಿಎಂಸಿ ಸದಸ್ಯ ಶರಣಪ್ಪಗೌಡ , ಹಿರೇ ಮನ್ನಾಪುರ ತಾಲ್ಲೂಕು ಪಂಚಾಯಿತಿ ಸದಸ್ಯ ಭಿಮಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT