ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಕ್ತರ ಆಕರ್ಷಿಸಿದ ಶ್ರೀನಿವಾಸ ಕಲ್ಯಾಣೋತ್ಸವ

ಶ್ರೀವಾರಿ ಪ್ರತಿಷ್ಠಾನದವರಿಂದ ವೈವಿಧ್ಯಮಯ ಕಾರ್ಯಕ್ರಮ
Last Updated 6 ಮಾರ್ಚ್ 2017, 8:57 IST
ಅಕ್ಷರ ಗಾತ್ರ
ಹುಬ್ಬಳ್ಳಿ: ಇಲ್ಲಿನ ಭವಾನಿ ನಗರದ ರಾಯರಮಠದಲ್ಲಿ ಭಾನುವಾರ ಭವ್ಯ ವೇದಿಕೆಯಲ್ಲಿ ನಡೆದ ಶ್ರೀನಿವಾಸ ಕಲ್ಯಾಣೋತ್ಸವ ಭಕ್ತರನ್ನು ಆಕರ್ಷಿಸಿತು.
 
ಬೆಂಗಳೂರಿನ ಶ್ರೀವಾರಿ ಪ್ರತಿಷ್ಠಾನದ ವೆಂಕಟೇಶಮೂರ್ತಿ ಅವರ ತಂಡವು ವರ್ಣರಂಜಿತ ವೇದಿಕೆಯಲ್ಲಿ ಸಂದರ್ಭಕ್ಕೆ ತಕ್ಕಂತೆ ಹಾಡು, ಭಜನೆ ಮತ್ತು ಕಲ್ಯಾಣದ ಕೈಂಕರ್ಯವನ್ನು ಸಾಲಂಕೃತವಾಗಿ ನಡೆಸಿಕೊಟ್ಟರು.
 
ತಿರುಪತಿಯಲ್ಲಿ ವೆಂಕಟೇಶ್ವರನಿಗೆ ನಡೆಯುವ ನಿತ್ಯ ಕಲ್ಯಾಣೋತ್ಸವ ತದ್ರೂಪ­ವಾಗಿಯೇ ರಾಯರ ಮಠದಲ್ಲಿ ಅನಾವರಣಗೊಳಿಸಿದ ವೈಕಾಸನ ಋಷಿ ವಿಧಿಯಂತೆ ನಡೆದುಕೊಂಡು ಬಂದ ಕಲ್ಯಾಣೋತ್ಸವ ಪಟ್ಟಾಭಿಷೇಕಕ್ಕೆ ಕಲಶವಿಟ್ಟಿತು.
 
ಮೊದಲು ಪದ್ಮಾವತಿ, ವೆಂಕ­ಟೇಶ್ವರ, ಮಹಾಲಕ್ಷ್ಮಿಯನ್ನು ಬರಮಾ­ಡಿಕೊಳ್ಳುವ ಸನ್ನಿವೇಶದಲ್ಲಿ ಮಂಗಲ ವಾದ್ಯಗಳು ಮೊಳಗಿದವು. ಜಾಗಟೆ, ಶಂಖ, ನಿನಾದಗಳು ಭಕ್ತಿ ಪರವಶತೆ­ಯನ್ನು ಹೆಚ್ಚಿಸಿದವು. ಇಲ್ಲಿಂದ ಆರಂಭ­ವಾದ ಬೀಸುವ ಕಲ್ಲು, ಒರಳುಕಲ್ಲು ಪೂಜೆ, ಗಣಪತಿ ಪೂಜೆಯ ಸಂದರ್ಭ­ದಲ್ಲಿ ತೂರಿಬಂದ ಸುವ್ವಿ ಸುವ್ವಿ ಹಾಡು­ಗಳು ಭಕ್ತರನ್ನು ಪರವಶ­ಗೊಳಿಸಿದವು. 
 
ಮಂಗಲಾಷ್ಟಕ ಶ್ಲೋಕದೊಂದಿಗೆ ಅಕ್ಷತಾ­ರೋಪಣ ಆರತಿ ಹೀಗೆ ನಾನಾ ಸೇವೆಗಳ ಮೂಲಕ ಶ್ರೀವಾರಿ ಪ್ರತಿ­ಷ್ಠಾನದ ತಂಡ ಆಗಾಗ ಭಕ್ತರನ್ನು ಸಮ್ಮೋಹನಗೊಳಿಸಿತು.
 
ಕೊನೆಯಲ್ಲಿ ನಡೆದ ಏಕಾಂತ ಸೇವೆಯಲ್ಲಿ ಮೌನ ಧ್ಯಾನ, ಭಜನೆಯ ಓಂಕಾ­ರ ವೇದಿಕೆಯಲ್ಲಿ ಆಲಾ­ಪಿಸಿದವು. ಸಂಸದ ಪ್ರಹ್ಲಾದ ಜೋಶಿ ಸೇರಿದಂತೆ ಹಲವು ಗಣ್ಯರು ಕಲ್ಯಾಣೋತ್ಸವವನ್ನು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT