ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ: ಶಾಸಕ

ಭಟ್ಕಳ–ಮಂಗಳೂರು ನಡುವೆ ಕೆಎಸ್‌ಆರ್‌ಟಿಸಿ ವೋಲ್ವೋ ಬಸ್‌ ಆರಂಭ– ಸಂಭ್ರಮದ ಸ್ವಾಗತ
Last Updated 6 ಮಾರ್ಚ್ 2017, 9:14 IST
ಅಕ್ಷರ ಗಾತ್ರ
ಕುಂದಾಪುರ: ಭಾನುವಾರ ನೂತನವಾಗಿ ಪ್ರಾರಂಭವಾದ ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗದ ಭಟ್ಕಳ–ಮಂಗಳೂರು ನೂತನ ವೋಲ್ವೋ ಬಸ್ಸಿಗೆ ತಾಲ್ಲೂಕಿನ ಗಡಿ ಭಾಗವಾದ ಶಿರೂರಿನಿಂದ ಪ್ರಾರಂಭವಾಗಿ ಬೈಂದೂರು, ಉಪ್ಪುಂದ, ಕುಂದಾಪುರ ಹಾಗೂ ಬೀಜಾಡಿಗಳಲ್ಲಿ ಸ್ಥಳೀಯರು ಸಂಭ್ರಮದ ಸ್ವಾಗತ ಕೋರಿದರು.
 
ಭಟ್ಕಳದ ಕೆಎಸ್‌ಆರ್‌ಟಿಸಿ ಬಸ್ಸ್‌ ನಿಲ್ದಾಣದಿಂದ ನೂತನ ಬಸ್ಸಿನ ಪ್ರಯಾ‌ಣಕ್ಕೆ ಚಾಲನೆ ನೀಡಿದ ರಾಜ್ಯ ರಸ್ತೆ ಸಾರಿಗೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಕೆ.ಗೋಪಾಲ ಪೂಜಾರಿ ಅವರು, ಭಟ್ಕಳದಿಂದ ಬೈಂದೂರಿನವರೆಗೂ ಸರ್ಕಾರಿ ವೋಲ್ವೋ ಬಸ್ಸಿನಲ್ಲಿ ಪ್ರಯಾಣಿಸುವ ಮೂಲಕ ಗಮನ ಸೆಳೆದರು.
 
ಶಿರೂರು ಮೇಲ್‌ ಪೇಟೆಯಲ್ಲಿ ಬಸ್ಸಿಗೆ ಸ್ವಾಗತ ಕೋರಿದ ಸ್ಥಳೀಯರು ಬಸ್‌ ಸಂಚಾರಕ್ಕೆ ಸಹಕರಿಸಿದ ಶಾಸಕ ಕೆ.ಗೋ ಪಾಲ ಪೂಜಾರಿ ಅವರನ್ನು ಸಾರ್ವಜನಿಕವಾಗಿ ಅಭಿನಂದಿಸಿದರು. ಬೈಂದೂರಿನಲ್ಲಿಯೂ ದೊಡ್ಡ ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳು ಪಟಾಕಿ ಸಿಡಿಸಿ, ಘೋಷಣೆಯನ್ನು ಹಾಕಿ ಸಂಭ್ರಮಿಸಿದರು. ಉಪ್ಪುಂದದಲ್ಲಿ ಸಾರ್ವಜನಿಕರು ಶಾಸಕ ರನ್ನು ಅಭಿನಂದಿಸಿದರು. ಕುಂದಾಪುರ ಹಾಗೂ ಬೀಜಾಡಿಯಲ್ಲಿಯೂ ದೊಡ್ಡ ಸಂಖ್ಯೆಯಲ್ಲಿ ಸೇರಿದ್ದ ಸಾರ್ವಜನಿಕರು ಸ್ವಾಗತ ಸಂಭ್ರಮದ ಕೋರಿದರು.
 
ಶಿರೂರಿನಲ್ಲಿ ಮಾತನಾಡಿದ ಶಾಸಕ ಕೆ.ಗೋಪಾಲ ಪೂಜಾರಿ, ಈ ಭಾಗದ ಜನರ ಹಲವು ವರ್ಷಗಳ ಬೇಡಿಕೆ ಇದೀಗ ಸಾಕಾರಗೊಂಡಿದೆ. ಸಾರ್ವಜನಿಕರ ಬೇಡಿಕೆಗನುಗುಣವಾಗಿ ಪ್ರಾರಂಭದಲ್ಲಿ 9 ವೋಲ್ವೋ ಬಸ್ಸುಗಳು ಸಂಚರಿಸಲು ನಿರ್ಧರಿಸಲಾಗಿದೆ. ಬಸ್ಸುಗಳ ಓಡಾಟ ಪ್ರಾರಂಭಿಸದಂತೆ ಬಂದಿರುವ ಯಾವುದೇ ಖಾಸಗಿ ಲಾಬಿಗಳಿಗೂ ಮಣೆ ಹಾಕದೆ, ಸಾರ್ವಜನಿಕರ ಅನೂಕೂಲತೆಗಳನ್ನು ಗಮನದಲ್ಲಿ ಇಟ್ಟುಕೊಂಡು ನಿರ್ಧಾರ ಕೈಗೊಳ್ಳಲಾಗಿದೆ.

ಸರ್ಕಾರಿ ಬಸ್ಸುಗಳಲ್ಲಿ ವೇಗ ಮಿತಿಯನ್ನು ಅಳವಡಿಸುವ ಮೂಲಕ ಸಾರ್ವಜನಿಕರ ಪ್ರಾಣರಕ್ಷಣೆಗೆ ಮೊದಲ ಆದ್ಯತೆ ನೀಡಲಾಗಿದೆ. ಬಸ್ಸುಗಳಲ್ಲಿ ಸಂಚರಿಸುವ ಪ್ರಯಾಣಿಕರ ಸುರಕ್ಷತೆಯ ಜತೆಯಲ್ಲಿ ಅವರಿಗೆ ಉತ್ತಮ ಪ್ರಯಾಣಾನುಭವ ದೊರೆಯಬೇಕು ಎನ್ನುವುದು ನನ್ನ ಆದ್ಯತೆಯಾಗಿದೆ ಎಂದು ಹೇಳಿದರು.
 
ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗದ ನಿಯಂತ್ರಣಾಧಿಕಾರಿ ವಿವೇಕಾನಂದ ಹೆಗ್ಡೆ, ಕೆಎಸ್‌ಆರ್‌ಟಿಸಿ ಜಿಲ್ಲಾ ಸಂಚಾರಿ ಅಧಿಕಾರಿ ಜೈಶಾಂತಕುಮಾರ್‌, ತಾಲ್ಲೂಕು ಪಂಚಾಯಿತಿ ಸದಸ್ಯ ಎಚ್‌.ರಾಜು ದೇವಾಡಿಗ, ಜಿಲ್ಲಾ ಕೆಡಿಪಿ ಸದಸ್ಯ ಎಸ್‌.ರಾಜು ಪೂಜಾರಿ, ಬೈಂದೂ ರು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮದನ ಕುಮಾರ ಉಪ್ಪುಂದ, ಎಸ್‌ಸಿಡಿಸಿಸಿ ಬ್ಯಾಂಕ್‌ ನಿರ್ದೇಶಕ ಬಿ.ರಘುರಾಮ ಶೆಟ್ಟಿ, ಉದ್ಯಮಿ ಗೋಕುಲ್‌ ಶೆಟ್ಟಿ, ಪತ್ರಕರ್ತ ಅರುಣ್‌ಕುಮಾರ ಶಿರೂರು ಇದ್ದರು.
 
ಬೀಜಾಡಿಯಲ್ಲಿ ಸ್ವಾಗತ: ಬೈಂದೂ ರಿನಿಂದ ಹೊರಟು ಕುಂದಾಪುರ ಮಾರ್ಗವಾಗಿ ಉಡುಪಿಗೆ ತೆರಳುತ್ತಿದ್ದ ನೂತನ ಕೆಎಸ್‌ಆರ್‌ಟಿಸಿ ವೋಲ್ವೋ ಬಸ್ಸಿಗೆ ಬೀಜಾಡಿಯ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಮಿತ್ರ ಸಂಗಮ ಬೀಜಾಡಿಯ ಗೋಪಾಡಿಯ ನೇತೃತ್ವದಲ್ಲಿ ಸಾರ್ವಜ ನಿಕರು ಭವ್ಯ ಸ್ವಾಗತ ಕೋರಿದರು. 
 
ಮಿತ್ರ ಸಂಗಮ ಸಂಸ್ಥೆಯ ಗೌರವಾಧ್ಯಕ್ಷ ವಾದಿರಾಜ್ ಹೆಬ್ಬಾರ್ ಬಸ್ಸಿಗೆ ಹೂವಿನ ಮಾಲೆ ಹಾಕಿ, ಬಸ್ಸಿನ ಚಾಲಕ ಹಾಗೂ  ನಿರ್ವಾಹಕರಿಗೆ ತಂಪು ಪಾನೀಯ ನೀಡಿ ಬಸ್ಸನ್ನು ಬರಮಾಡಿಕೊಂಡರು. 
 
ಚಂದ್ರಶೇಖರ ಬೀಜಾಡಿ, ರಾಜೇಶ್ ಆಚಾರ್ ಬೀಜಾಡಿ, ಗಿರೀಶ್ ಬೀಜಾಡಿ, ಗೋಪಾಲ ಮೊಗವೀರ ಬೀಜಾಡಿ, ನಾರಾಯಣ ಭಂಡಾರಿ, ಮಿತ್ರ ಸಂಗಮ ಯುವ ಸಂಘಟನೆಯ ಅಧ್ಯಕ್ಷ ವಿನಯ ಹೆಬ್ಬಾರ್, ವಿವೇಕ್ ಹೆಬ್ಬಾರ್, ಗೋಪಾಡಿ ಗ್ರಾಮ ಪಂಚಾಯತ್ ಸದಸ್ಯ ರಮೇಶ್ ಗೋಳಿಬೆಟ್ಟು, ಕೃಷ್ಣ ಗೋಪಾಡಿ, ಮೂಡುಗೋಪಾಡಿ ಆಶಾ ಕಾರ್ಯಕರ್ತೆ ಶ್ಯಾಮಲ ಇದ್ದರು. 
 
ಬಸ್‌ ದರ ₹ 200ಕ್ಕೆ ಇಳಿಕೆ
ಬೈಂದೂರು:  ಭಟ್ಕಳ–ಮಂಗಳೂರು ನಡುವಿನ ವೋಲ್ವೋ ಬಸ್‌ನ ದರ ₹ 250 ಇರುವುದನ್ನು ಸೋಮವಾ ರದಿಂದ ₹ 200ಕ್ಕೆ ಇಳಿಸಲಾ ಗುವುದು ಎಂದು ರಾಜ್ಯ ಸಾರಿಗೆ ಸಂಸ್ಥೆಯ ಅಧ್ಯಕ್ಷ ಕೆ. ಗೋಪಾಲ ಪೂಜಾರಿ ಹೇಳಿದರು.

ಬೈಂದೂರಿನಲ್ಲಿ ಮಾತನಾಡಿದ ಅವರು, ವೋಲ್ವೊ ಬಸ್ ಸಂಚಾರ ಕರಾವಳಿಯ ಜನರ ಬಹುದಿನಗಳ ಬೇಡಿಕೆ, ಈಗ ಪ್ರತಿದಿನ ಆರು ಬಸ್‌ಗಳನ್ನು ಓಡಿಸಲು ನಿರ್ಧರಿಸಲಾಗಿದೆ. ಸಾರ್ವಜನಿಕರ ಪ್ರತಿಕ್ರಿಯೆ ಗಮನಿಸಿ ಇನ್ನೂ ಹೆಚ್ಚಿನ ಬಸ್ ಓಡಿಸಲಾಗುವುದು. ಬೈಂದೂರಿನಲ್ಲಿ ನಿಲ್ದಾಣ ಮತ್ತು ಡಿಪೊ ಆರಂಭಿಸುವ ಪ್ರಸ್ತಾವನೆ ಕಾರ್ಯಗತವಾದಾಗ ಈ ಪ್ರದೇಶದಲ್ಲಿ ರಾಜ್ಯ ಸಾರಿಗೆ ಸಂಸ್ಥೆಯ ಸೇವೆ ಇನ್ನಷ್ಟು ವಿಸ್ತರಿಸಲಿದೆ ಎಂದರು.
 
ಬಸ್ಸಿನ ವೇಳಾಪಟ್ಟಿ
ನೂತನ ಕೆಎಸ್‌ಆರ್‌ಟಿಸಿ ವೋಲ್ವೋ ಬಸ್‌ ಬೆಳಿಗ್ಗೆ 6.45ಕ್ಕೆ ಮಂಗಳೂ ರಿನಿಂದ ಹೊರಟು 9.45ಕ್ಕೆ ಭಟ್ಕಳ ತಲುಪಲಿದೆ. ಬಳಿಕ
ಬೆಳಿಗ್ಗೆ 7.15, 7.45, 10.00, 10.30, 11.00 ಅಪರಾಹ್ನ 2.45, 3.15, 3.45ಕ್ಕೆ ಮಂಗಳೂರಿನಿಂದ ಭಟ್ಕಳಕ್ಕೆ ಹೊರಡಲಿದೆ.

ಭಟ್ಕಳದಿಂದ ಬೆಳಿಗ್ಗೆ 6.30, 7.00, 10.45, 11.15, 11.45, ಅಪರಾಹ್ನ 2.00, 3.00ಕ್ಕೆ ಹೊರಡಲಿದೆ. ಶಿರೂರು, ಬೈಂ ದೂರು, ಯಡ್ತರೆ, ತ್ರಾಸಿ, ಕುಂದಾ ಪುರ, ಕೋಟೇಶ್ವರ, ಬ್ರಹ್ಮಾವರ, ಉಡುಪಿ, ಮೂಲ್ಕಿ, ಸುರ ತ್ಕಲ್‌ಗಳಲ್ಲಿ ಬಸ್ ನಿಲುಗಡೆ ಇರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT