ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಡುಬಿದಿರೆ ಆಳ್ವಾಸ್‌ ಕಾಲೇಜು ಪಾರಮ್ಯ

ಮಣಿಪಾಲ ಹಾಫ್‌ ಮ್ಯಾರಾಥಾನ್‌–ಓಟದ ಹುಮ್ಮಸ್ಸು ಪ್ರದರ್ಶನ
Last Updated 6 ಮಾರ್ಚ್ 2017, 9:26 IST
ಅಕ್ಷರ ಗಾತ್ರ
ಉಡುಪಿ: ಉಡುಪಿ ಜಿಲ್ಲಾ ಅಮೆಚೂರ್ ಅಥ್ಲೆಟಿಕ್ಸ್‌ ಅಸೋಸಿಯೇಶನ್‌ ಸಂಸ್ಥೆಯು ಮಣಿಪಾಲ ವಿಶ್ವವಿದ್ಯಾಲಯ, ಸಿಂಡಿ ಕೇಟ್‌ ಬ್ಯಾಂಕ್‌ ಹಾಗೂ ಅದಾನಿ ಯುಪಿ ಸಿಎಲ್‌ನ ಸಹಯೋಗದಲ್ಲಿ ಭಾನುವಾರ ಮಣಿಪಾಲದಲ್ಲಿ ಆಯೋಜಿಸಿದ್ದ ಮಣಿಪಾಲ ಹಾಫ್‌ ಮ್ಯಾರಾಥಾನ್‌ನ
ಪುರುಷರ ವಿಭಾಗದಲ್ಲಿ ಮೂಡುಬಿದಿರೆ ಆಳ್ವಾಸ್‌ ಕಾಲೇಜಿನ ನವೀನ್‌ ಹಾಗೂ ಮಹಿಳಾ ವಿಭಾಗದಲ್ಲಿ ಅದೇ ಕಾಲೇಜಿನ ಕಿರಣ್‌ ಜಿತೂರ್‌ ಪ್ರಥಮ ಬಹುಮಾನ ಪಡೆದರು. 
 
ಪುರುಷರ ವಿಭಾಗದಲ್ಲಿ ಆಳ್ವಾಸ್‌ ಕಾಲೇಜಿನ ರಜೀತ್‌ ಸಿಂಗ್‌ ಹಾಗೂ ಅದೇ ಕಾಲೇಜಿನ ಸಂತೋಷ್‌ ಕ್ರಮವಾಗಿ ದ್ವಿತೀ ಯ ಮತ್ತು ತೃತೀಯ ಸ್ಥಾನ ಪಡೆದರು. ಮಹಿಳಾ ವಿಭಾಗದಲ್ಲಿ ಮೂಡುಬಿದಿರೆ ಆಳ್ವಾಸ್‌ ಕಾಲೇಜಿನ ತಿಪ್ಪವ್ವ ಸಣ್ಣಕ್ಕಿ ದ್ವಿತೀಯ ಹಾಗೂ ಅದೇ ಕಾಲೇಜಿನ ಕೆ.ಎಚ್‌. ಅರ್ಚನಾ ತೃತೀಯ ಸ್ಥಾನ ಗಳಿಸಿದರು. 
 
ಇತರ ಫಲಿತಾಂಶ- 5 ಕಿ.ಮೀ ಓಟ: ಪ್ರೌಢಶಾಲಾ ಬಾಲಕರ ಮುಕ್ತ ವಿಭಾಗ: ನಿಟ್ಟೆ ಡಾ. ಎನ್‌ಎಸ್‌ಎಎಂ ಪ್ರೌಢಶಾಲೆ ಯ ದಿನೇಶ್‌–1, ನಿಟ್ಟೂರು ಪ್ರೌಢಶಾ ಲೆಯ ಯಲ್ಲಪ್ಪ–2, ನಿಟ್ಟೆ ಡಾ. ಎನ್‌ ಎಸ್‌ಎಎಂ ಪ್ರೌಢಶಾಲೆಯ ರಿಹಾನ್‌–3. ಬಾಲಕಿಯರ ವಿಭಾಗ: ನಿಟ್ಟೆ ಡಾ. ಎನ್‌ ಎಸ್‌ಎಎಂ ಪ್ರೌಢಶಾಲೆಯ ಸುಮ–1, ನಿಟ್ಟೆ ಡಾ. ಎನ್‌ಎಸ್‌ಎಎಂ ಪ್ರೌಢ ಶಾಲೆಯ ಭೂಮಿಕ–2, ನಿಟ್ಟೆ ಡಾ. ಎನ್‌ಎಸ್‌ಎಎಂ ಪ್ರೌಢಶಾಲೆಯ ವೈ. ಎಚ್‌. ಮಂಜುಳ–3. 
 
10 ಕಿ.ಮೀ ಓಟ: 16 ರಿಂದ 35 ವರ್ಷದೊಳಗಿನ ಪುರುಷರ ವಿಭಾಗ: ಪ್ರವೀಣ್‌ ಕಂಬಳ್‌–1, ವಿಜಯ–2, ಜಿ. ಎಸ್‌. ಚೇತನ್‌. ಮಹಿಳಾ ವಿಭಾಗ: ಕುಮಾರಿ ಮಮತಾ–1, ಬಿ.ಕೆ. ಸುಪ್ರಿತಾ–2, ಬಿ. ದೀಕ್ಷಾ–3. 
 
35ರಿಂದ 50 ವರ್ಷದೊಳಗಿನ ಪುರುಷರ ವಿಭಾಗ: ಶಂಕರ್‌–1, ವಿಶ್ವ ನಾಥ್‌ ಕೋಟ್ಯಾನ್‌–2, ಜಿ. ದಿವಾಕರ–3. ಮಹಿಳಾ ವಿಭಾಗ: ಯೂಲಿಯ–1, ರೇಖಾ–2, ಡಾ. ಪ್ರಮೀಳಾ–3. 
 
50 ವರ್ಷ ಮೇಲ್ಪಟ್ಟ ಪುರುಷರ ವಿಭಾಗ: ಹೊಸೂರು ಉದಯ ಕುಮಾರ್‌ ಶೆಟ್ಟಿ–1, ಮಾಧವ ಸರಿಪುವ–2, ಓಂಶಿವ ಕೋಟ್ಯಾನ್‌–3. ಮಹಿಳೆ ಯರ ವಿಭಾಗ: ಅರುಣಾಕಲಾ ಹಿರಿಯ ಡಕ–1, ಲಲಿತಾ ನಾಯ್ಕ್‌–2, ಬಬಿತಾ–3. 
 
ಮಣಿಪಾಲ್‌ ಎಜುಕೇಶನ್‌ ಮತ್ತು ಮೆಡಿಕಲ್‌ ಗ್ರೂಪ್‌ನ ಸಿಇಒ ಡಾ. ರಂ ಜನ್‌ ಪೈ ಮ್ಯಾರಾಥಾನ್‌ ಸ್ಪರ್ಧೆಗೆ ಚಾಲನೆ ನೀಡಿದರು.
 
ಬಹುಮಾನ ವಿತ ರಣಾ ಸಮಾರಂಭದಲ್ಲಿ ಮಣಿಪಾಲ ವಿಶ್ವ ವಿದ್ಯಾಲಯದ ಸಹಕುಲಾಧಿಪತಿ ಡಾ. ಎಚ್‌.ಎಸ್‌. ಬಲ್ಲಾಳ್‌, ಸಿಂಡಿಕೇಟ್‌ ಬ್ಯಾಂ ಕಿನ ಕಾರ್ಯನಿರ್ವಹಣಾ ನಿರ್ದೇಶಕ ಎಸ್‌.ಎಸ್‌. ಮಲ್ಲಿಕಾರ್ಜುನ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಟಿ. ಬಾಲ ಕೃಷ್ಣ, ಸಿಂಡಿಕೇಟ್‌ ಬ್ಯಾಂಕ್‌ನ ಮಹಾ ಪ್ರಬಂಧಕ ಕೆ.ಟಿ. ರೈ, ಅದಾನಿ ಯುಪಿ ಸಿಎಲ್‌ನ ವ್ಯವಸ್ಥಾಪಕ ನಿರ್ದೇಶಕ ಕಿಶೋರ್‌ ಆಳ್ವ, ಮ್ಯಾರಾಥಾನ್‌ ಸಮಿತಿ ಅಧ್ಯಕ್ಷ ಕೆ. ರಘುಪತಿ ಭಟ್‌, ಕಾರ್ಯ ದರ್ಶಿ ಡಾ. ವಿನೋದ್‌ ಸಿ. ನಾಯಕ್‌, ಎಂಐಟಿಯ ನಿರ್ದೇಶಕ ಜಿ.ಕೆ. ಪ್ರಭು ಉಪಸ್ಥಿತರಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT