ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದ್ಯದಂಗಡಿ ವಿರುದ್ಧ ಮಹಿಳೆಯರ ಪ್ರತಿಭಟನೆ

ಕಿಕ್ಕೇರಿ ಹೋಬಳಿಯ ಮಾದಾಪುರ ಗ್ರಾಮಸ್ಥರ ಆಕ್ರೋಶ
Last Updated 6 ಮಾರ್ಚ್ 2017, 9:56 IST
ಅಕ್ಷರ ಗಾತ್ರ
ಕಿಕ್ಕೇರಿ: ಗ್ರಾಮದ ನೆಮ್ಮದಿಗೆ ಭಂಗವಾಗುವ ಕಾರಣದಿಂದ ಮದ್ಯದ ಅಂಗಡಿ ತೆರೆಯಲು ಅವಕಾಶ ನೀಡ ಬಾರದು ಎಂದು ಒತ್ತಾಯಿಸಿ ಹೋಬಳಿ ಯಮಾದಾಪುರದಲ್ಲಿ ಗ್ರಾಮಸ್ಥರು ಶನಿವಾರ ವಿವಿಧ ಸ್ತ್ರೀಶಕ್ತಿ ಸಂಘಗಳ ಸಹಯೋಗದಲ್ಲಿ ಪ್ರತಿಭಟಿಸಿದರು. 
 
ಹೋಬಳಿಯ ಮಾದಾಪುರ ಗ್ರಾಮದಲ್ಲಿ ನಿತ್ಯ ವಿವಿಧ ಪ್ರತಿಭಟನೆಗೆ ಮೂಲಕ ಈ ಕುರಿತು ಗಮನಸೆಳೆಯಲಾಗಿದೆ. ಆದರೆ, ಸ್ಥಳೀಯ ಗ್ರಾಮ ಪಂಚಾಯಿತಿ ಈ ಕುರಿತು ಸಕಾರಾತ್ಮಕವಾಗಿ ಗಮಹರಿಸುತ್ತಿಲ್ಲ ಎಂದು ಸ್ಥಳೀಯರು ದೂರಿದರು.
 
ಮದ್ಯದಅಂಗಡಿ ತೆರೆಯಲು ಉದ್ದೇಶಿದಿರುವ ಕಡೆಯೇ ದೇವಾಲಯ, ಹಾಲಿನ ಡೈರಿ, ಭಜನಾಮಂಡಳಿ ಇದೆ. ಈ ರಸ್ತೆಯಲ್ಲೇ ಶಾಲಾ ಮಕ್ಕಳು, ಹೆಣ್ಣು ಮಕ್ಕಳು ಓಡಾಡಬೇಕಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ.
 
ಪ್ರತಿಭಟನೆಯನ್ನು ಗಣನೆಗೆ ತೆಗೆದುಕೊಳ್ಳದೆ ಗ್ರಾಮ ಪಂಚಾಯಿತಿ ಲಿಕ್ಕರ್ ಶಾಪ್ ತೆರೆಯಲು ನಿರಾಪಕ್ಷೇಣಾ ಪತ್ರ ನೀಡಿದೆ. ಇದಕ್ಕೆ ನಮ್ಮ ವಿರೋಧವಿದೆ ಎಂದು ಪ್ರತಿಭಟನಾ ಕಾರರು ಆಕ್ರೋಶ ವ್ಯಕ್ತಪಡಿಸಿದರು.
 
ಗಾಣದಹಳ್ಳಿ, ಚಿನ್ನೇನಹಳ್ಳಿ, ಗೊಂದಿಹಳ್ಳಿ, ಕೋಟಹಳ್ಳಿ ಇವೆ. ಅಂಗಡಿ ತೆರೆದಲ್ಲಿ ಗ್ರಾಮಗಳ ನೆಮ್ಮದಿ ಹಾಳಾಗಲಿದೆ. ಅಧಿಕಾರಿಗಳು ಜನರ ವಿರೋಧವನ್ನು ಗಣನೆಗೆ ತೆಗೆದುಕೊಳ್ಳ ಬೇಕು ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT