ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಿರಿಜನರನ್ನು ಅತಂತ್ರವಾಗಿಸಿದ ಕಾಯ್ದೆ: ವಿಷಾದ

ಕಾಟಾಚಾರಕ್ಕೆ ನಡೆದ ಬುಡಕಟ್ಟು ಸಾಂಸ್ಕೃತಿಕ ಉತ್ಸವ: ಅಧಿಕಾರಿಗಳ ವಿರುದ್ಧ ಆಕ್ರೋಶ
Last Updated 6 ಮಾರ್ಚ್ 2017, 10:19 IST
ಅಕ್ಷರ ಗಾತ್ರ
ಎಚ್.ಡಿ.ಕೋಟೆ:  50 ವರ್ಷಗಳ ಹಿಂದೆ ಗಿರಿಜನರು ಕಾಡಿನಲ್ಲಿ ಸ್ವತಂತ್ರವಾಗಿ ಅಲ್ಲಿ ಸಿಗುತ್ತಿದ್ದ ಗೆಡ್ಡೆ, ಗೆಣಸು, ಹಣ್ಣುಗಳನ್ನು ತಿಂದು ಬದುಕನ್ನು ಯಾವ ರೀತಿ ಸವೆಸಬೇಕು ಎಂಬ ಪರಿಕಲ್ಪನೆಯಲ್ಲಿ ಬದುಕುತ್ತಿದ್ದರು. ಆದರೆ 1972 ರಲ್ಲಿ ಸರ್ಕಾರ ವನ್ಯ ಜೀವಿ ಸಂರಕ್ಷಣಾ ಕಾಯ್ದೆಯನ್ನು ಜಾರಿಗೆ ತಂದು ಗಿರಿಜನರ ಬದುಕನ್ನು ಆತಂತ್ರರನ್ನಾಗಿ ಮಾಡಿದೆ ಎಂದು ಪರಿಸರ ತಜ್ಞ ಕ್ಷೀರಸಾಗರ್ ವಿಷಾದಿಸಿದರು.
 
ಪಟ್ಟಣದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದ ಆವರಣದಲ್ಲಿ ಶನಿವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಹಮ್ಮಿಕೊಂಡಿದ್ದ ಬುಡಕಟ್ಟು ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
 
ತಾಲ್ಲೂಕಿನಲ್ಲಿ ನೂರಾರು ಕುಟುಂಬಗಳನ್ನು ಕಾಡಿನಿಂದ ಪುನರ್ ವಸತಿ ಯೋಜನೆಯ ನೆಪದಲ್ಲಿ ಹೊರ ಹಾಕಿ ಅವರಿಗೆ ಸರಿಯಾದ ರೀತಿಯಲ್ಲಿ ಪುನರ್ ವಸತಿ ಕಲ್ಪಿಸದೆ ನೀರಿನಿಂದ ಮೀನನ್ನು ಹೊರಹಾಕಿದ ರೀತಿಯಲ್ಲಿ ಗಿರಿಜನರ ಬದುಕನ್ನು ಅತಂತ್ರ ಮಾಡಿದ್ದಾರೆ ಎಂದರು. 
 
2006 ರಲ್ಲಿ ಅರಣ್ಯದ ಮೇಲೆ ಬುಡಕಟ್ಟು ಜನರ ಹಕ್ಕು ಎಂಬ ಕಾಯ್ದೆಯನ್ನು ಜಾರಿಗೆ ತಂದಿದ್ದರೂ ಕಾಯ್ದೆ ಸಮರ್ಪಕವಾಗಿ ಜಾರಿಯಾಗಿಲ್ಲ. 2013 ರಲ್ಲಿ ಗಿರಿಜನರು ವಾಸ ಮಾಡುತ್ತಿರುವ ಪ್ರದೇಶವನ್ನು ಆ ವ್ಯಾಪ್ತಿಯ ಗ್ರಾಮ ಪಂಚಾಯಿತಿಗೆ ಸೇರಿಸಿ ಪಂಚಾಯಿತಿಯಲ್ಲಿ ಗಿರಿಜನರ ಹಕ್ಕಿನ ಬಗ್ಗೆ ಚರ್ಚಿಸಿ ಅಭಿವೃದ್ಧಿ ಬಗ್ಗೆ ತೀರ್ಮಾನಿಸಿ ಗಿರಿಜನರ ಹಕ್ಕುಗಳನ್ನು ಸಮರ್ಪಕವಾಗಿ ಜಾರಿ ಮಾಡಬೇಕು ಎಂದರು.
 
ಪೌಷ್ಟಿಕ ಆಹಾರ ಮಾರಾಟ ಮಾಡಬೇಡಿ: ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ  ಶಾಸಕ ಎಸ್.ಚಿಕ್ಕಮಾದು ಮಾತನಾಡಿ, ‘ಆದಿವಾಸಿ ಗಿರಿಜನರು ದೈಹಿಕವಾಗಿ ಸದೃಢರಾಗಲಿ ಎಂದು ಸರ್ಕಾರ ಪೌಷ್ಟಿಕ ಆಹಾರ ವಿತರಿಸುತ್ತಿದ್ದು, ಅದನ್ನು ಬಳಕೆ ಮಾಡಿಕೊಂಡು ಆರೋಗ್ಯಕರ ಜೀವನ ನಿಮ್ಮದಾಗಿಸಿಕೊಳ್ಳಿ ಎಂದರು.
 
ತಾಲ್ಲೂಕಿನಲ್ಲಿ 6 ಸಾವಿರ ಕುಟುಂಬಕ್ಕೆ ಸರ್ಕಾರ ವರ್ಷದಲ್ಲಿ 6 ತಿಂಗಳು  ಪೌಷ್ಟಿಕ ಆಹಾರ ನೀಡುತ್ತಿದ್ದು ಇದನ್ನು ಕೆಲವು ಗಿರಿಜನರು ಹಣಕ್ಕಾಗಿ ಇತರರಿಗೆ ಮಾರಾಟ ಮಾಡಿ ತಾವು ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆ ಎಂಬ ವಿಷಯ ಬೇಸರ ತಂದಿದೆ. ಈ ರೀತಿ ಲೋಪ ಆಗದಂತೆ ಅಧಿಕಾರಿಗಳು ಎಚ್ಚರ ವಹಿಸಿ, ಗಿರಿಜನರ ಆರೋಗ್ಯ ಕಾಪಾಡಿ ಎಂದರು.
 
ತಾಲ್ಲೂಕಿನಲ್ಲಿ ಗಿರಿಜನರಿಗಾಗಿಯೇ ಕಾರ್ಯಕ್ರಮ ಮಾಡುತ್ತಿದ್ದರು ಸಹ ಬೆರಳಣಿಕೆಯಷ್ಟು ಮಂದಿ ಕಾರ್ಯಕ್ರಮಕ್ಕೆ ಬಂದಿದ್ದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳು ಸರಿಯಾಗಿ ಜನರಿಗೆ ಮಾಹಿತಿ ನೀಡದೆ ಕಾರ್ಯಕ್ರಮ ನಡೆಸುತ್ತಿರುವುದು ಯಾವುದೇ ಪ್ರಯೋಜನವಿಲ್ಲ ಎಂದರು.
 
ಕೇವಲ ಮೋಜು ಮಸ್ತಿ ಮಾಡುವುದಕ್ಕೆ ಮಾತ್ರ ಸಿಮೀತವಾಗದೆ ಗಿರಿಜನರ ಕಲೆ, ಸಂಸ್ಕೃತಿ, ಆಚಾರ, ವಿಚಾರ ಅನಾವರಣಗೊಳಿಸಲು ವೇದಿಕೆಯಾಗಿ ರೂಪುಗೊಳ್ಳಬೇಕಿತ್ತು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT