ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುನೀತ್‌ ಅಭಿನಯದ ‘ರಾಜಕುಮಾರ’ ಚಿತ್ರದ ಹಾಡಿನ ಆಲ್ಬಮ್‌ ಬಿಡುಗಡೆ

Last Updated 6 ಮಾರ್ಚ್ 2017, 14:57 IST
ಅಕ್ಷರ ಗಾತ್ರ
ADVERTISEMENT

ಬೆಂಗಳೂರು: ಪವರ್‌ಸ್ಟಾರ್‌ ಪುನೀತ್ ರಾಜಕುಮಾರ್‌ ಅಭಿನಯದ ‘ರಾಜಕುಮಾರ’ ಚಿತ್ರದ ಹಾಡುಗಳು ಬಿಡುಗಡೆಯಾಗಿವೆ.

ಕೆಲ ದಿನಗಳ ಹಿಂದೆ ಯುಟ್ಯೂಬ್‌ನಲ್ಲಿ ಬಿಡುಗಡೆ ಮಾಡಲಾಗಿದ್ದ ‘ಯಾರಿವನು..’ ಹಾಡು ಈಗಾಗಲೇ 9 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಕಂಡಿದೆ. ಸೋಮವಾರ ಅಧಿಕೃತವಾಗಿ ಚಿತ್ರದ ಹಾಡು ಬಿಡುಗಡೆ ಮಾಡಲಾಗಿದೆ.

ಚಿತ್ರಕ್ಕೆ ಸಂತೋಷ್ ಆನಂದ್ ರಾಮ್ ನಿರ್ದೇಶನ ಹಾಗೂ ವಿ.ಹರಿಕೃಷ್ಣ ಸಂಗೀತ ಸಂಯೋಜನೆಯಿದೆ. ಯುಟ್ಯೂಬ್‌ನಲ್ಲಿ ಹಾಡಿನ ಆಲ್ಬಮ್‌ ಬಿಡುಗಡೆಯಾಗಿ ಕೆಲವೇ ನಿಮಿಷಗಳಲ್ಲಿ 30 ಸಾವಿರಕ್ಕೂ ಹೆಚ್ಚು ವೀಕ್ಷಣೆ ಕಂಡಿದೆ.

ಇನ್ನೂ ವಿಜಯ್‌ಪ್ರಕಾಶ್‌ ಹಾಡಿರುವ ರಾಜಕುಮಾರ ಟೈಟಲ್‌ ಟ್ರ್ಯಾಕ್‌ನಲ್ಲಿ ‘ಆಡಿಸಿಯೇ ನೋಡು, ಬೀಳಿಸಿಯೇ ನೋಡು...’ ಮತ್ತೆ ರಾಜಕುಮಾರ್‌ ಅವರನ್ನು ನೆನಪಿಸುತ್ತದೆ.

‘ನನ್ನ ಹೆಸರಿನ ಜತೆಗೆ ತಂದೆಯ ಹೆಸರೂ ಸೇರಿಕೊಂಡಿರುವುದರ ಬಗ್ಗೆ ನನಗೆ ಹೆಮ್ಮೆಯಿದೆ. ಆದರೆ ‘ರಾಜಕುಮಾರ’ ಸಿನಿಮಾಗೂ ತಂದೆಯವರ ಹೆಸರಿಗೂ ಸಂಬಂಧವಿಲ್ಲ’ ಎಂದು ಪುನೀತ್‌ ಪ್ರತಿಕ್ರಿಯಿಸಿದ್ದರು. ಚಿತ್ರದ ಹಾಡುಗಳ ಸಾಹಿತ್ಯದಲ್ಲಿ ಹಳೆಯ ಸಿನಿಮಾಗಳ ಹೆಸರು ಬಳಕೆಯಾಗಿದೆ.

ಪುನೀತ್ ರಾಜಕುಮಾರ್ ಜತೆ ಪ್ರಿಯಾ ಆನಂದ್ ನಾಯಕಿಯಾಗಿ ಕಾಣಿಸಿಕೊಂಡಿದ್ದು, ತಮಿಳು ನಟ ಶರತ್ ಕುಮಾರ್, ಪ್ರಕಾಶ್ ರೈ, ಅನಂತ್ ನಾಗ್, ಅಚ್ಯುತ್ ಕುಮಾರ್, ಸಾಧುಕೋಕಿಲಾ, ಚಿಕ್ಕಣ್ಣ, ರಂಗಾಯಣ ರಘು ಸೇರಿದಂತೆ ಹಲವರ ಅಭಿನಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT