ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುರಕುಂದಾ: ಚರಂಡಿ, ಶುಚಿತ್ವದ್ದೇ ಸಮಸ್ಯೆ

ಮೂಲ ಸೌಕರ್ಯಗಳ ಕೊರತೆ ನಡುವೆ ಸಾಗಿದೆ ನಾಗರಿಕರ ಬದುಕು
Last Updated 7 ಮಾರ್ಚ್ 2017, 6:20 IST
ಅಕ್ಷರ ಗಾತ್ರ
ಸಿರವಾರ: ಸಮೀಪದ ಕುರಕುಂದಾ ಗ್ರಾಮದಲ್ಲಿ ಅಸಮರ್ಪಕ ಚರಂಡಿ ಜತೆಗೆ ಮೂಲ ಸೌಕರ್ಯಗಳ ಕೊರತೆಯಿಂದ ಗ್ರಾಮಸ್ಥರು ತೊಂದರೆ ಪಡುವಂತಾಗಿದೆ.
ಎರಡು ಸಾವಿರ ಜನಸಂಖ್ಯೆ ಇರುವ ಗ್ರಾಮದಲ್ಲಿ 5 ಗ್ರಾಮ ಪಂಚಾಯಿತಿ ಸದಸ್ಯರು ಇದ್ದು, ಮಲ್ಲಟ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿದೆ.
 
ಗ್ರಾಮವು 2011-12ನೇ ಸಾಲಿನಲ್ಲಿ ಸುವರ್ಣಗ್ರಾಮ ಯೋಜನೆಗೆ ಆಯ್ಕೆಯಾಗಿತ್ತು. ಈ ಅನುದಾನದಲ್ಲಿ ಹಲವು ಕಾಮಗಾರಿಗಳು ನಡೆದರೂ ಅವು ಕಳಪೆ ಆಗಿವೆ. ಚರಂಡಿ ನಿರ್ಮಾಣ ಗ್ರಾಮದ ಯಾವ ಭಾಗದಲ್ಲಿಯೂ ನಿರ್ಮಾಣಗೊಂಡಿಲ್ಲ. ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದೆ ಎಲ್ಲಂದರಲ್ಲಿ ನಿಂತ ಕೊಳಚೆ ನೀರಿನಿಂದಾಗಿ ಸಾಂಕ್ರಾಮಿಕ ರೋಗ ಹರಡುವ ಭೀತಿ ಆವರಿಸಿದೆ. 
 
ಸುವರ್ಣಗ್ರಾಮ ಯೋಜನೆಯ ಅನುದಾನದಲ್ಲಿ ನಿರ್ಮಾಣವಾದ ಕಾಂಕ್ರಿಟ್ ರಸ್ತೆ ಮೇಲೆಯೇ ಮತ್ತೆ ಕೃಷ್ಣಾ– ಭೀಮಾ ಗ್ರಾಮೀಣ ಯೋಜನೆಯ ಅನುದಾನದಲ್ಲಿ ಕಳಪೆ ಮಟ್ಟದ ಕಾಮಗಾರಿ ಮಾಡಲಾಗಿದೆ. ಗ್ರಾಮದಲ್ಲಿ ಹಲವರು ಸ್ವಚ್ಛ ಭಾರತ ಅಭಿಯಾನದಲ್ಲಿ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಂಡಿದ್ದು, ಇವರಲ್ಲಿ ಕೆಲವರಿಗೆ ಧನ ಸಹಾಯದ ಹಣ ಸಂದಯವಾಗಿಲ್ಲ. ಇದರಿಂದ ಅನೇಕರು ಶೌಚಾಲಯ ನಿರ್ಮಾಣಕ್ಕೆ ಹಿಂದೇಟು ಹಾಕುವಂತಾಗಿದೆ. 
 
ಶುದ್ಧ ಕುಡಿಯುವ ನೀರಿನ ಘಟಕ ಪದೇಪದೇ ದುರಸ್ತಿಗೆ ಬರುತ್ತಿರುವುದರಿಂದ ಗ್ರಾಮಸ್ಥರಿಗೆ ಶುದ್ಧ ಕುಡಿಯುವ ನೀರಿನ ಘಟಕದ ಇದ್ದರು ಇಲ್ಲದಂತಾಗಿದೆ. ಗ್ರಾಮದ ದಲಿತ ಕೇರಿಯಲ್ಲಿ ಹಳೆಯ ನೀರಿನ ಕೊಳಾಯಿ ವ್ಯವಸ್ಥೆ ಇದ್ದು ಇದರಿಂದ ನೀರಿನ ಸರಬರಾಜು ಆಗುತ್ತಿಲ್ಲ. ದಲಿತರು ಬೇರೆ ಓಣಿಯಲ್ಲಿ ಹೋಗಿ ನೀರು ತರುವ ದುಃಸ್ಥಿತಿ ಇದೆ. ಇಲ್ಲಿ ಹೊಸ ಪೈಪ್‌ಲೈನ್ ವ್ಯವಸ್ಥೆ ಮಾಡಿ ಸಮರ್ಪಕವಾಗಿ ನೀರು ಸರಬರಾಜು ಮಾಡಬೇಕು ಎಂಬುದು ದಲಿತಕೇರಿ ನಿವಾಸಿಗಳ ಒತ್ತಾಯ.
 
ಗ್ರಾಮದ ಪ್ರೌಢಶಾಲೆಗೆ ಕಾಂಪೌಂಡ್ ಇಲ್ಲ. ಶಾಲೆಯಲ್ಲಿ ಶೌಚಾ ಲಯ ವ್ಯವಸ್ಥೆಯಿಲ್ಲದ ಕಾರಣ ವಿದ್ಯಾ ರ್ಥಿಗಳು  ಬಯಲು ಆಶ್ರಯಿಸಿದರೆ, ವಿದ್ಯಾರ್ಥಿನಿಯರಿಗೆ ಹೇಳಿಕೊಳ್ಳಲಾರದ ಸಂಕಟ ಅನುಭವಿಸುತ್ತಿದ್ದಾರೆ.
ಪಿ.ಕೃಷ್ಣ  ಸಿರವಾರ
 
* ಶಾಲೆಯಲ್ಲಿ ಮೂಲ ಸೌಕರ್ಯ ಕಲ್ಪಿಸಿಲ್ಲ. ಕುಡಿಯುವ ನೀರು, ಶೌಚಾಲಯ ನಿರ್ಮಾಣಕ್ಕೆ ಅಧಿಕಾರಿಗಳು ಮುತುವರ್ಜಿ ವಹಿಸಿಲ್ಲ.
ತನುಜಾ, ಗ್ರಾಮಸ್ಥೆ
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT