ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನಿ ಮೋದಿಯದ್ದು ಹಿಟ್ಲರ್‌ ಆಡಳಿತ

ಕಾಂಗ್ರೆಸ್‌ನ ಜನವೇದನಾ ಸಮಾವೇಶದಲ್ಲಿ ಸಂಸದ ಬಿ.ವಿ.ನಾಯಕ ವಾಗ್ದಾಳಿ
Last Updated 7 ಮಾರ್ಚ್ 2017, 6:42 IST
ಅಕ್ಷರ ಗಾತ್ರ
ಯಾದಗಿರಿ: ಈ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹಿಟ್ಲರ್ ರೀತಿಯಲ್ಲಿ ಸರ್ವಾಧಿಕಾರ ಆಡಳಿತ ನಡೆಸುತ್ತಿದ್ದಾರೆ. ಇದರಿಂದ ದೇಶದ ಜನರು ಮುಂದೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಸಂಸದ ಬಿ.ವಿ. ನಾಯಕ ವಾಗ್ದಾಳಿ ನಡೆಸಿದರು.
 
ನಗರದ ಜಿಲ್ಲಾ ಕಾಂಗ್ರೆಸ್‌ ಕಚೇರಿ ಆವರಣದಲ್ಲಿ ನಗರ ಹಾಗೂ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಸೋಮವಾರ ಹಮ್ಮಿಕೊಂಡ ಜನ ವೇದನಾ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು.
 
‘ಜನರಲ್ಲಿ ಮಾತಿನ ಮೂಲಕ ಮೋಡಿ ಮಾಡುವ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಭಿವೃದ್ಧಿ ವಿಷಯದಲ್ಲಿ ರಾಜ್ಯಕ್ಕೆ ಮಲತಾಯಿ ಧೋರಣೆ ಮಾಡುತ್ತಿದೆ’ ಎಂದು ಆರೋಪಿಸಿದರು.
 
ಕೇಂದ್ರ ಸರ್ಕಾರ ₹500  ಮತ್ತು ₹ 1,000 ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸಿ, ಜನಸಾಮಾನ್ಯರಿಗೆ ತೊಂದರೆ ಉಂಟು ಮಾಡಿದೆ. ಕಾಳಧನವನ್ನು ಬಯಲಿಗೆ ತರುವುದಾಗಿ ಹೇಳಿ ಸಣ್ಣ ವ್ಯಾಪಾರಿಗಳಿಗೆ, ದುಡಿಯುವ ವರ್ಗಗಳಿಗೆ ತೊಂದರೆ ನೀಡಿದೆ. ಕೇಂದ್ರ ಸರ್ಕಾರ ತೆಗೆದುಕೊಂಡಿರುವ ಈ ನಿರ್ಧಾರ ಏಕಪಕ್ಷೀಯವಾಗಿದ್ದು, ದೇಶದ ಜನರಿಗೆ ಇದರಿಂದ ತುಂಬಾ ತೊಂದರೆ ಅನುಭವನಿಸುವಂತ್ತಾಗಿದೆ’ ಎಂದು ಕಿಡಿಕಾರಿದರು.
 
ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ.ಗೌತಮ ಪ್ರಧಾನಿ ಮಾತನಾಡಿ, ‘ನರೇಂದ್ರ ಮೋದಿ ಅವರಿಗೆ ಬುದ್ದಿ ಭ್ರಮಣೆಯಾಗಿದ್ದರಿಂದಾಗಿ ನೋಟ್ ಅಮಾನ್ಯ ಮಾಡಿದರು. ದೇಶದ ಬಡ ಜನತೆಯನ್ನು ಇನ್ನಷ್ಟು ಬಡವರನ್ನಾಗಿ ಮಾಡುವ ಮುಖಾಂತರ ಅವಘಡಗಳನ್ನು ಮಾಡುತ್ತಾ ದೇಶದ ಜನರಲ್ಲಿ ಒಂದು ರೀತಿ ಅವಾಂತರ ಸೃಷ್ಟಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
 
ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಹೇಶಗೌಡ ಮಾತನಾಡಿ, ‘ಮೋದಿ ನೋಟು ಅಮಾನ್ಯ ಮಾಡಿದರೇ ಹೊರತು ಹೇಳಿದಂತೆ ದೇಶದಲ್ಲಿ ಭಯೋತ್ಪಾದನೆಗೆ ಕಡಿವಾಣ ಬಿದ್ದಿಲ್ಲ. ಹೋರ ದೇಶದಿಂದ ಕಪ್ಪು ಹಣ ತರಲಿಲ್ಲ. ಇವತ್ತು ನಮ್ಮ ದೇಶದ ಬ್ಯಾಂಕುಗಳಲ್ಲಿ ನಾವು ಇಟ್ಟಿರುವ ಹಣ ತೆಗೆದುಕೊಳ್ಳಲಾಗದೇ ಪರದಾಡುವ ಸ್ಥಿತಿ ಎದುರಾಗಿದೆ. ಇದೆಲ್ಲವನ್ನೂ ಗಮನಿಸುತ್ತಿರುವ ಜನರು ಬರುವ ಚುನಾವಣೆಯಲ್ಲಿ ತಕ್ಕಪಾಠ ಕಲಿಸಲಿದ್ದಾರೆ’ಎಂದರು.
 
ಮಾಜಿ ‘ಕಾಡಾ’ ಅಧ್ಯಕ್ಷ ಶ್ರೀನಿವಾಸರೆಡ್ಡಿ ಕಂದಕೂರ ಮಾತನಾಡಿ, ‘ದೇಶದಲ್ಲಿ ಬರೀ ಶ್ರೀಮಂತರೆ ಬದುಕಬೇಕು ಎನ್ನುವ ನಿಟ್ಟಿನಲ್ಲಿ ಕೇಂದ್ರ ನಡೆದುಕೊಳ್ಳುತ್ತಿದೆ. ಬಿಜೆಪಿ ಸರ್ಕಾರದ ದೇಶವನ್ನು ಅಧೋಗತಿಗೆ ತರುವುದರ ಮುಖಾಂತರ ದುರಾಡಳಿತ ನಡೆಸುತ್ತಿದೆ ಎಂದು ಹೇಳಿದ ಅವರು, ಸರ್ವರಿಗೂ ಸಮಪಾಲು ಎನ್ನುವ ರೀತಿಯಲ್ಲಿ ಸಾಮಾಜಿಕ ನ್ಯಾಯ ಒದಗಿಸುವಲ್ಲಿ ಕಾಂಗ್ರೆಸ್ ಸರ್ಕಾರದ ಕಾರ್ಯ ವೈಖರಿಯಾಗಿದೆ’ ಎಂದರು. 
 
ಈ ಸಂದರ್ಭದಲ್ಲಿ ವಿಧಾನ ಪರಿಷತ್ತಿನ ಮಾಜಿ ಸದಸ್ಯ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ, ಜಿಲ್ಲಾ ಘದಕ ಟಧ್ಯಕ್ಷ ಮರಿಗೌಡ, ನಿಗಮ ಮಂಡಳಿ ಅಧ್ಯಕ್ಷ ಬಸವರಾಜ ರಾಮನಾಳ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಸರೆಡ್ಡಿ ಅನಪುರ್, ಯುಡಾ ಅಧ್ಯಕ್ಷ ರಾಮರೆಡ್ಡಿ ಸಾಹುಕಾರ, ನಗರಸಭೆ ಅಧ್ಯಕ್ಷ ಶಶಿಧರರೆಡ್ಡಿ ಪಾಟೀಲ್ ಹೊಸಳ್ಳಿ, ನಗರಸಧೆ  ಉಪಾಧ್ಯಕ್ಷ ಸ್ಯಾಂಸನ್ ಮಾಳಿಕೇರಿ, ನಗರ ಬ್ಲಾಕ್ ಅಧ್ಯಕ್ಷ ಶರಣಪ್ಪಗೌಡ ಮಲ್ಹಾರ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಮಂಜುಳಾ ಘೂಳಿ, ಯುವ ಅಧ್ಯಕ್ಷ ರಾಘವೇಂದ್ರ ಮಾನಸಗಲ್, ಮರೆಪ್ಪ ಬಿಳ್ಹಾರ್, ಹಣಮಂತರ ಕಂದಲಕುರ್, ಸಿದ್ದಲಿಂಗರೆಡ್ಡಿ ಉಳ್ಳೆಸುಗೂರ, ಲಾಯಕ ಹುಸೇನ ಬಾದಲ್, ಶಂಶು ಹುಜಮಾ ಹಾಜಿ, ಸಲಿಮಸಾಬ್, ರವಿ ಮಾಲಿಪಾಟೀಲ್, ದಿನೇಶ ಶರ್ಮಾ, ಜಿಲ್ಲಾ ಕಾರ್ಯದರ್ಶಿ ಸುರೇಶ ಜೈನ್ ಸೇರಿದಂತೆ ಅನೇಕ ಮುಖಂಡರು ಕಾರ್ಯಕರ್ತರು ಈ ಸಮಾವೇಶದಲ್ಲಿ ಭಾಗವಹಿಸಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT