ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಠಾಣೆ ಪಕ್ಕದ ನಿವಾಸಿಗಳಿಗೆ ಜೀವಭಯ!

ಪೊಲೀಸ್ ಹೊರ ಠಾಣೆ ಕಟ್ಟಡ ಶಿಥಿಲ; ವಿಷಜಂತುಗಳ ವಾಸಸ್ಥಳ
Last Updated 7 ಮಾರ್ಚ್ 2017, 7:16 IST
ಅಕ್ಷರ ಗಾತ್ರ
ಶ್ರವಣಬೆಳಗೊಳ: ಪಟ್ಟಣದಲ್ಲಿ ಶಿಥಿಲಾ ವಸ್ಥೆ ತಲುಪಿರುವ ಹೊರ ಪೊಲೀಸ್ ಠಾಣೆ ಕಟ್ಟಡ ವಿಷಜಂತುಗಳ ವಾಸಸ್ಥಳವಾಗಿ ಮಾರ್ಪಟ್ಟಿದೆ. ಇದರಿಂದ ಸುತ್ತಮುತ್ತಲಿನ ನಿವಾಸಿಗಳಿಗೆ ಜೀವಭಯ ಎದುರಾಗಿದೆ.
 
ಈ ಕಟ್ಟಡ ಪಟ್ಟಣದ ಮುಖ್ಯರಸ್ತೆಯ ಚಂದ್ರಗಿರಿಬೆಟ್ಟ (ಚಿಕ್ಕಬೆಟ್ಟ)ಕ್ಕೆ ಹೊಂದಿ ಕೊಂಡಂತಿದೆ. ಬೀಗ ಹಾಕಿರುವುದ ರಿಂದ ಮತ್ತು ಸುತ್ತಮುತ್ತ ಗಿಡ– ಗಂಟಿ ಬೆಳೆದಿರುವುದರಿಂದ ಕಟ್ಟಡದಲ್ಲಿ ವಿಷಜಂತುಗಳು ಸೇರಿಕೊಂಡಿವೆ. ರಾತ್ರಿ ಸಮಯದಲ್ಲಿ ಹೊರಬಂದು ಅಕ್ಕಪಕ್ಕ ಮನೆಗಳು, ಅಂಗಡಿ ಮಳಿಗೆ ಸೇರಿಕೊಳ್ಳುತ್ತಿವೆ. ಇದರಿಂದ ಸ್ಥಳೀಯರು ಆತಂಕಗೊಂಡಿದ್ದಾರೆ.
 
‘ಪ್ರತಿದಿನ ಅಂಗಡಿ ಬಾಗಿಲು ತೆರೆಯುವ ಸಂದರ್ಭದಲ್ಲಿ ಹಾವುಗಳು ಕಾಣಿಸಿಕೊಂಡು ಜೀವ ಭಯ ಉಂಟಾ ಗುತ್ತದೆ’ ಎಂದು ಔಟ್ ಪೊಲೀಸ್ ಠಾಣೆ ಕಟ್ಟಡ ಪಕ್ಕದ ಜ್ಯೂಸ್‌ ಸೆಂಟರ್‌ ಮಾಲೀಕ ರಾಜೇಂದ್ರ ಆತಂಕ ವ್ಯಕ್ತಪಡಿಸುತ್ತಾರೆ.
 
50 ವರ್ಷಗಳಿಂದಲೂ ಇದೇ ಕಟ್ಟಡ ದಲ್ಲಿ ಔಟ್‌ ಪೊಲೀಸ್‌ ಠಾಣೆ ಕಾರ್ಯ ನಿರ್ವಹಿಸುತ್ತಿತ್ತು. 2006ರಲ್ಲಿ ಮೇಲ್ದರ್ಜೆ ಗೇರಿಸಿ ಪೊಲೀಸ್ ಠಾಣೆಯಾಗಿ ಮಾರ್ಪಾಡು ಮಾಡಲಾಯಿತು. 2006ರ ಮಹಾಮಸ್ತಕಾಭಿಷೇಕದ ವಿಶೇಷ ಅನುದಾನದಲ್ಲಿ ಸುಸಜ್ಜಿತ ಪೊಲೀಸ್ ಠಾಣೆ ಮತ್ತು ಸಮುದಾಯ ಭವನ ನಿರ್ಮಿಸಲಾಯಿತು. 
ಅಲ್ಲದೆ, ಎಸ್.ಡಿ.ಜೆ.ಎಂ.ಐಸಿ ಟ್ರಸ್ಟಿಗೆ ಸೇರಿದ ಗೊಮ್ಮಟನಗರದ ಬಡಾವಣೆಯಲ್ಲಿ ಪೊಲೀಸ್ ವಸತಿಗೃಹಗಳ ಸಮುಚ್ಚಯ ನಿರ್ಮಿಸಲಾಗಿದೆ. 2005–06ರವರೆಗೆ ಈ ಕಟ್ಟಡ ಸುಸ್ಥಿತಿಯಲ್ಲಿತ್ತು.
 
ಸುಮಾರು 10 ವರ್ಷಗಳಿಂದ ಔಟ್ ಪೊಲೀಸ್ ಠಾಣೆ ಪಾಳುಬಿದ್ದಿದೆ. ಈ ಕಟ್ಟಡ ತಮಗೆ ಬಿಟ್ಟುಕೊಡುವಂತೆ ಗ್ರಾಮ ಪಂಚಾಯಿತಿ ಆಡಳಿತ ಒತ್ತಾಯಿಸುತ್ತಿದ್ದಂತೆ, ಪೊಲೀಸ್ ಇಲಾಖೆ ನೆಪಮಾತ್ರಕ್ಕೆ ವಸತಿಗೃಹ ಫಲಕ ಹಾಕಿದೆ.
 
ಅನುಪಯುಕ್ತವಾದ ಈ ಕಟ್ಟಡಕ್ಕೆ ಸುಮಾರು 10 ವರ್ಷಗಳಿಂದ ಪೊಲೀಸ್‌ ವಸತಿಗೃಹ ಎಂಬ ನಾಮಫಲಕ ಮಾತ್ರ ಹಾಕಲಾಗಿದೆ. ಆದರೆ, ಸಾರ್ವಜನಿಕ ಉಪಯೋಗಕ್ಕೆ ಬಿಟ್ಟುಕೊಟ್ಟರೆ ಅನು ಕೂಲವಾಗುತ್ತದೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್‌.ಪಿ.ಮಂಜೇಗೌಡ ಹೇಳುತ್ತಾರೆ.
 
‘ರಾತ್ರಿ ಸಮಯದಲ್ಲಿ ಸಾರ್ವಜನಿ ಕರು ಈ ಅನುಪಯುಕ್ತ ಕಟ್ಟಡದ ಮುಂದೆ ಮಲ– ಮೂತ್ರ ವಿಸರ್ಜನೆ ಮಾಡುವುದರಿಂದ ನಿತ್ಯ ಸ್ವಚ್ಛಗೊಳಿಸಲು ತೊಂದರೆ ಉಂಟಾಗುತ್ತಿದೆ’ ಎಂದು ಗ್ರಾ.ಪಂ ಸಿಬ್ಬಂದಿ ಹೇಳುತ್ತಾರೆ. ‘ಪೊಲೀಸ್ ಇಲಾಖೆ ಮತ್ತು ಜನಪ್ರತಿನಿಧಿಗಳು ಈ ಅನುಪಯುಕ್ತ ಕಟ್ಟಡವನ್ನು ಸಾರ್ವಜನಿಕರ ಉಪ ಯೋಗಕ್ಕೆ ಬಿಟ್ಟುಕೊಟ್ಟರೆ ಸೂಕ್ತ’ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT