ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿ ವ್ಯವಸ್ಥೆಯಿಂದ ಮಾನವೀಯ ಮೌಲ್ಯ ಧ್ವಂಸ

ಮುರುಳಿ ಸಾವಿನ ಪ್ರಕರಣ ತನಿಖೆ ಸಿಒಡಿಗೆ ವಹಿಸಲು ಒತ್ತಾಯ, ವಿವಿಧ ಸಂಘಟನೆಗಳಿಂದ ಮೆರವಣಿಗೆ
Last Updated 7 ಮಾರ್ಚ್ 2017, 9:22 IST
ಅಕ್ಷರ ಗಾತ್ರ
ಗುಡಿಬಂಡೆ: ಜಾತಿ ವ್ಯವಸ್ಥೆ ದೇಶದ ಎಲ್ಲಾ ಬಗೆಯ ಮಾನವೀಯ ಮೌಲ್ಯಗಳನ್ನು ಧ್ವಂಸಗೊಳಿಸುತ್ತಿದೆ. ಕ್ಷುಲ್ಲಕ ಕಾರಣಕ್ಕೆ ದಲಿತರನ್ನು ಹತ್ಯೆ ಮಾಡಲಾಗುತ್ತಿದೆ. ಅದಕ್ಕೆ ಉದಾಹರಣೆ ಗುಡಿಬಂಡೆ ವಿದ್ಯಾರ್ಥಿ ಮುರುಳಿ ಕೊಲೆ  ಎಂದು ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಯೋಜಕ ಎನ್.ವೆಂಕಟೇಶ್ ಆತಂಕ ವ್ಯಕ್ತಪಡಿಸಿದರು.
 
ಪಟ್ಟಣದಲ್ಲಿ ಸೋಮವಾರ ದಲಿತ ಸಂಘರ್ಷ ಸಮಿತಿಯ,  ದಲಿತ ದಮನಿತರ ಸ್ವಾಭಿಮಾನ ಹೋರಾಟ ಸಮಿತಿ, ಜೀತ ವಿಮುಕ್ತಿ ಕರ್ನಾಟಕ, ಅಮ್ ಆದ್ಮಿ ಪಾರ್ಟ್, ಡಿವೈಎಫ್ಐ, ಕರ್ನಾಟಕ ಜನಶಕ್ತಿ, ಮುಸ್ಲಿಂ ಜಾಗೃತಿ ಸಮಿತಿ, ಲಂಚ ಮುಕ್ತ ಕರ್ನಾಟ ಸೇರಿದಂತೆ ಇತರೆ ಸಂಘಟನೆಗಳು ಹಮ್ಮಿಕೊಂಡಿದ್ದ ಬಹಿರಂಗ ಸಭೆಯಲ್ಲಿ ಮಾತನಾಡಿದರು.
 
ದಲಿತರ ಮೇಲೆ ನಡೆಯುತ್ತಿರುವ ಹಲ್ಲೆ, ಅತ್ಯಾಚಾರ ಮತ್ತು ಅವರ ಮೇಲಿನ ದಾಳಿ ನೋಡಿದರೆ ದಾಳಿಗಳನ್ನು ಕಂಡಾಗ ದಿಗ್ಬ್ರಮೆಯಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.
 ದಸಂಸ ರಾಜ್ಯ ಸಮಿತಿ ಸದಸ್ಯ ಸಿ.ಜಿ.ಗಂಗಪ್ಪ ಮಾತನಾಡಿ, ಮುರಳಿ ಸಾವಿಗೆ ಕಾರಣರಾದ ಸಾಯಿಗಗನ್, ನವೀನ್ ಕುಮಾರ್, ಸಂದೀಪ್ ಅವರನ್ನು ಬಂಧಿಸಿ ಯಾವುದೇ ವಿಚಾರಣೆ ನಡೆಸದೆ ನ್ಯಾಯಾಂಗ ಬಂಧನಕ್ಕೆ ಕಳುಹಿಸುತ್ತಾರೆ. ಆದರೆ ಈ ಕೃತ್ಯದಲ್ಲಿ ಮೂವರು ಬಾಲಕರಲ್ಲದೇ ದೊಡ್ಡ ಗುಂಪೇ ಕೆಲಸಮಾಡಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.  ಮುರಳಿಯನ್ನು ಕಳೆದುಕೊಂಡ ಇಡೀ ಕುಟುಂಬ ಕಣ್ಣೀರಲ್ಲಿ ಜೀವನ ಕಳೆಯುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
 
ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಜಿ.ವಿ.ಗಂಗಪ್ಪ ಮಾತನಾಡಿ, ಪೊಲೀಸರು ನೇಣಿ ಹಾಕಿಕೊಂಡಿರುವ ಸ್ಥಳದಲ್ಲಿ ಸೂಕ್ತ ತನಿಖೆ ನಡೆಸಿಲ್ಲ. ಶಾಲೆಯ ಶಿಕ್ಷಕ ಮತ್ತು ಸಹ ವಿದ್ಯಾರ್ಥಿಗಳನ್ನು ಯಾವುದೇ ವಿಚಾರಣೆ ಮಾಡಿಲ್ಲ. ಈ ಪ್ರಕರಣಕ್ಕೆ ಸಂಬಂಧ ಸಮಾಜ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆಯ ಅಧಿಕಾರಿಗಳು ಮೃತ ಮುರಳಿ ಪೋಷಕರ ಮನೆಗೆ ಭೇಟಿ ನೀಡಿಲ್ಲ. ಶಾಲಾ ಅವಧಿಯಲ್ಲಿಯೇ ಕೊಲೆಯಾಗಿ ಹೋದ ಮುರಳಿಯ ಬಗ್ಗೆ ಶಿಕ್ಷಣ ಇಲಾಖೆಯಾಗಲೀ, ಶಿಕ್ಷಕರಾಗಲೀ ಪ್ರತಿಕ್ರಿಯಿಸಿಲ್ಲ. ಇದು ಹಲವು ಅನುಮಾನಗಳಿಗೆ ಕಾರಣವಾಗುತ್ತಿದೆ ಎಂದು ಆರೋಪಿಸಿದರು.
 
ದಲಿತ ಸಮುದಾಯ ಇನ್ನೂ ಎಷ್ಟು ದಿನ ಕೊಲೆ, ಅತ್ಯಾಚಾರ, ದಬ್ಬಾಳಿಕೆ, ದೌರ್ಜನ್ಯಗಳಿಗೆ ಬಲಿಯಾಗಬೇಕು. ಸರಣಿ ಹತ್ಯೆಗಳು ನಡೆಯುತ್ತಿದ್ದರೂ ಜವಾಬ್ದಾರಿಯಿಂದ ವರ್ತಿಸಬೇಕಾದ ಸರ್ಕಾರಗಳು ಏನು ಮಾಡುತ್ತಿವೆ? ಎಂದು ಪ್ರಶ್ನಿಸಿದರು.
 
ಮುರಳಿ ಸಾವಿನ ಪ್ರಕರಣವನ್ನು ಕೂಡಲೇ ಸಿಒಡಿ ತನಿಖೆಗೆ ಒಳಪಡಿಸಬೇಕು. ಹಾಗೂ ಅವರ ಕುಟುಂಬಕ್ಕೆ ₹ 10ಲಕ್ಷ ಪರಿಹಾರ ಘೋಷಿಸಿ ಒಬ್ಬರಿಗೆ ಸರ್ಕಾರಿ ನೌಕರಿ ನೀಡಬೇಕು ಎಂದು ಒತ್ತಾಯಿಸಿದರು.
 
ದಸಂಸ ಜಿಲ್ಲಾ ಸಂಚಾಲಕ ಬಿ.ವಿ.ಆನಂದ್, ಹಿರಿಯ ಮುಖಂಡ ಎನ್. ಮುನಿಸ್ವಾಮಿ, ಕೊಟ್ಟಾಶಂಕರ್, ದೊಡ್ಡಹಳ್ಳಿ ನರಸಿಂಹಮೂರ್ತಿ, ಕವಿ ಗೊಲ್ಲಹಳ್ಳಿ ಶಿವಪ್ರಸಾದ್, ದಲಿತ ದಮನಿತರ ಸ್ವಾಭಿಮಾನ ಹೋರಾಟ ಸಮಿತಿಯ ಬಿ.ಆರ್.ಭಾಸ್ಕರ್ ಪ್ರಸಾದ್, ಮುಖಂಡರಾದ ಹುಲಿಕುಂಟೆ ಮೂರ್ತಿ, ದಿನೇಶ್, ಎಚ್.ವಿ.ವಾಸು, ಗೌರಿ, ಹಾ.ಮ.ರಾಮಚಂದ್ರ, ಮೋಹನ್ ದಾಸರಿ, ಕೃಷ್ಣಾರೆಡ್ಡಿ, ಅನಿಲ್ ಕುಮಾರ್, ಹರ್ಷಕುಮಾರ್, ಕೆ.ಸಿ.ರಾಜಾಕಾಂತ್, ಖಾಸಿಂ ಸಾಬ್, ರತ್ನಮ್ಮ, ನಾರಾಯಣಸ್ವಾಮಿ, ಚೆನ್ನರಾಯಪ್ಪ, ಅಮರಾವತಿ ಹಾಜರಿದ್ದರು.
 
ಪ್ರತಿಭಟನಾ ಮೆರವಣಿಗೆ
ಪಟ್ಟಣದ ಬಿಸಿಎಂ ವಿದ್ಯಾರ್ಥಿ ನಿಲಯದಿಂದ ತಾಲ್ಲೂಕು ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಇದೇ ವೇಳೆ ದಲಿತ ದಮನಿತರ ಸ್ವಾಭಿಮಾನ ಹೋರಾಟ ಸಮಿತಿ ರಂಗತಂಡ ದಿಂದ ಮುರಳಿಯ ನೆರಳು ಎಂಬ ನಾಟಕವನ್ನು ಪ್ರದರ್ಶಿಸಿದರು. ವಿದ್ಯಾನಿಲಯಗಳ ವಿದ್ಯಾರ್ಥಿಗಳು ವಿವಿಧ ನಾಟಕದಲ್ಲಿ ಪಾಲ್ಗೊಂಡಿದ್ದರು.

ಸ್ಥಳಕ್ಕೆ ಜಿಲ್ಲಾ ವರಿಷ್ಟಾಧಿಕಾರಿ ಚೈತ್ರಾ ಭೇಟಿ ನೀಡಿ ಸಾವಿನ ಪ್ರಕರಣವನ್ನು ನಾನೇ  ತನಿಖೆ ನಡೆಸಿ ಮೂರು ದಿನದಲ್ಲಿ ವರದಿ ನೀಡುತ್ತೇನೆ.  ಜತೆಗೆ ಪ್ರಕರಣವನ್ನು ಸಿಒಡಿ ತನಿಖೆಗೆ ಪತ್ರ ಬರೆಯುವುದಾಗಿ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT