ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ಜೆಡಿಎಸ್‌ಗೆ ಅಧಿಕಾರದ ವಿಶ್ವಾಸ

ತಾಲ್ಲೂಕು ಅಧ್ಯಕ್ಷರಿಗೆ ಪಕ್ಷದ ಜವಾಬ್ದಾರಿ ವಹಿಸುವ ಸಭೆ
Last Updated 7 ಮಾರ್ಚ್ 2017, 10:39 IST
ಅಕ್ಷರ ಗಾತ್ರ
ಕನಕಪುರ: ತಾಲ್ಲೂಕಿನಲ್ಲಿ ಜೆ.ಡಿ.ಎಸ್‌. ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಮತ್ತು ಮತದಾರರಿದ್ದಾರೆ. 2018ರ ಸಾರ್ವತ್ರಿಕ ಚುನಾವಣೆಯಲ್ಲಿ ಜೆ.ಡಿ.ಎಸ್‌. ಪಕ್ಷವನ್ನು ಗೆಲ್ಲಿಸಿ ರಾಜ್ಯದಲ್ಲಿ  ಪಕ್ಷವನ್ನು ಅಧಿಕಾರಕ್ಕೆ ತರಲಿದ್ದಾರೆ ಎಂದು ಜೆ.ಡಿ.ಎಸ್‌. ಮುಖಂಡ ಡಿ.ಎಂ.ವಿಶ್ವನಾಥ್‌ ವಿಶ್ವಾಸ ವ್ಯಕ್ತಪಡಿಸಿದರು. 
 
ನಗರದ ಪ್ರವಾಸಿ ಮಂದಿರದಲ್ಲಿ ಜೆ.ಡಿ.ಎಸ್‌. ಪಕ್ಷದ ತಾಲ್ಲೂಕು ಅಧ್ಯಕ್ಷರನ್ನಾಗಿ ನೇಮಕಗೊಂಡಿದ್ದ ಬಿ.ನಾಗರಾಜು (ಚಿಕ್ಕಪ್ಪ) ಅವರಿಗೆ ಪಕ್ಷದ ಜವಾಬ್ದಾರಿ ಕೊಟ್ಟು ಮಾತನಾಡಿದರು. 
 
ರಾಜ್ಯದೆಲ್ಲೆಡೆ ಇಂದು ಜೆ.ಡಿ.ಎಸ್‌ ಪರವಾದ ಒಲವು ವ್ಯಕ್ತವಾಗುತ್ತಿದೆ. ಮುಂದಿನ ಚುನಾವಣೆಯಲ್ಲಿ ಪಕ್ಷವು ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬಂದು ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಲಿದ್ದಾರೆ ಎಂದರು.
 
ಕನಕಪುರ ವಿಧಾನಸಭಾ ಕ್ಷೇತ್ರದಲ್ಲೂ ಉತ್ತಮ ವಾತಾವರಣವಿದ್ದು ಪಕ್ಷದ ಗೆಲುವು ಸುಲಭವಾಗಿ ಆಗಲಿದೆ. ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಪರಸ್ಪರ ನಂಬಿಕೆ ಮತ್ತು ವಿಶ್ವಾಸದ ಮೇಲೆ ಪಕ್ಷ ಸಂಘಟನೆ ಮಾಡಿ ಪಕ್ಷವನ್ನು ಬಲ ಹೆಚ್ಚಿಸಬೇಕೆಂದು ಮನವಿ ಮಾಡಿದರು. 
 
‘ನಿಷ್ಠಾವಂತ ಮತದಾರರು ಪಕ್ಷದ ಪರವಾಗಿ ಗ್ರಾಮ ಪಂಚಾಯತಿ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿಗಳಲ್ಲಿ ಮತ ಚಲಾಯಿಸುತ್ತಾ ಬೆಂಬಲಿಸುತ್ತಾ ಬಂದಿದ್ದಾರೆ. ನಮ್ಮ ಕೆಲವು ತಪ್ಪುಗಳಿಂದ ಪಕ್ಷ ಸಂಘಟನೆಗೆ ಹಿನ್ನೆಡೆಯಾಗಿದೆ. ಇಂತಹ ತಪ್ಪುಗಳು ಯಾರಿಂದಲೂ ಮರುಕಳಿಸಬಾರದು. ಈ ಬಾರಿ ಎಲ್ಲರೂ ಒಟ್ಟಾಗಿ ಚುನಾವಣೆಯನ್ನು ಎದುರಿಸೋಣ’ ಎಂದು ತಿಳಿಸಿದರು. 
 
ಜೆ.ಡಿ.ಎಸ್‌. ಹಿರಿಯ ಮುಖಂಡ ಸಿದ್ದಪ್ಪಾಜಿ ಮಾತನಾಡಿ, ಒಂದು ಪಕ್ಷ ಅಧಿಕಾರಕ್ಕೆ ಬರಬೇಕಾದರೆ ಮತ್ತು ಚುನಾವಣೆಯಲ್ಲಿ ಗೆಲ್ಲಬೇಕಾದರೆ ಪ್ರತಿಯೊಬ್ಬ ಕಾರ್ಯಕರ್ತ ಮುಖಂಡರು ಪ್ರಮುಖವಾಗುತ್ತಾರೆ. ಯಾರೂ ಪಕ್ಷಕ್ಕೆ ವಿಷ ಹಾಗೂ ಪಕ್ಷದ ನಿಷ್ಠಾವಂತ ಮತದಾರರಿಗೆ ವಿಷ ಹಾಕುವ ಕೆಲಸ ಮಾಡಬಾರದು. ಪಕ್ಷ ತಾಯಿ ಇದ್ದ ಆಗೆ ನಂಬಿಕೆಯಿಂದ ಕೆಲಸ ಮಾಡಿ ಪಕ್ಷವನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು. 
 
ಬಿ.ನಾಗರಾಜು (ಚಿಕ್ಕಪ್ಪ) ಮಾತನಾಡಿ ಪಕ್ಷದಲ್ಲಿ 30 ವರ್ಷಗಳಿಂದ ಪ್ರಾಮಾಣಿಕವಾಗಿ ದುಡಿಯುತ್ತಾ ಬಂದಿದ್ದೇನೆ, ಇಂದು ಪಕ್ಷವು ಗುರುತಿಸಿ ದೊಡ್ಡ ಜವಾಬ್ದಾರಿ ನೀಡಿದೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷವನ್ನು ಸಂಘಟಿಸುವ ಜತೆಗೆ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸುವುದಾಗಿ ಹೇಳಿದರು.
 
ತಾ.ಪಂ. ಸದಸ್ಯ ಧನಂಜಯ, ಪುರಸಭೆ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ್‌, ಮಾಜಿ ಸದಸ್ಯರಾದ ಜಯರಾಮು, ದುರ್ಗಯ್ಯ, ಸಾತನೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಚಂದ್ರಶೇಖರ್‌, ತುಂಗಣಿ ಗ್ರಾಮ ಪಂಚಾಯಿತಿ ಸದಸ್ಯರಾದ ಕುಮಾರ್‌ ಮತ್ತು ರಾಜಗೋಪಾಲ್‌ ಜೆ.ಡಿ.ಎಸ್‌. ಮುಖಂಡರಾದ ಬಿ.ಎಸ್.ಗೌಡ, ಕೈಲಾಸ್‌ಮೂರ್ತಿ, ಅಸ್ಲಾಂ, ಸಬ್ದರ್, ಸ್ಟುಡಿಯೋ ಚಂದ್ರ , ಸುರೇಶ್, ಪ್ರಕಾಶ್‌, , ಗುಡ್ಡದಹಳ್ಳಿ ಕೃಷ್ಣಪ್ಪ, ರಾಜೇಂದ್ರ, ಚಾಕನಹಳ್ಳಿ ಪ್ರಕಾಶ್‌, ಲಾಯರ್‌ಜಾಧವ್‌, ಸರ್ಧಾರ್‌, ಮಂಜುಕುಮಾರ್‌, ಆಸಿಫ್‌, ಜಿಯಾವುಲ್ಲಾ, ಅಕ್ರಂ, ಕುಮಾರಗೌಡ, ಅತಿಕ್‌ ಉಪಸ್ಥಿತರಿದ್ದರು.    
 
* ಕನಕಪುರ ಡಿ.ಕೆ.ಸಹೋದರರ ಸಾಮ್ರಾಜ್ಯವಾಗಿದೆ. ಇಲ್ಲಿ ಸಂವಿಧಾನಬದ್ದ ಸರ್ಕಾರಕ್ಕೆ ಬೆಲೆಯೇ ಇಲ್ಲದಂತಾಗಿದೆ, ತಾಲ್ಲೂಕಿನಲ್ಲಿ ನಡೆಯುತ್ತಿರುವ ಎಲ್ಲಾ ಕಾಮಗಾರಿಗಳನ್ನು ಅವರ ಹಿಂಬಾಲಕರೇ ಮಾಡುತ್ತಿದ್ದು ಅವ್ಯವಹಾರ ನಡೆಸುತ್ತಿದ್ದಾರೆ
ಚಿನ್ನಸ್ವಾಮಿ, ಜೆ.ಡಿ.ಎಸ್‌. ಮುಖಂಡ
 
* ಕನಕಪುರ ಮತ್ತು ಇಲ್ಲಿನ ಜತೆಗೆ ಇನ್ನೂ ಸ್ವಾತಂತ್ರ್ಯ ಸಿಕ್ಕಿಲ್ಲ, ಏನಾದರೂ ಮಾತನಾಡಲು ಜನ ಭಯಪಡುವ  ಪರಿಸ್ಥಿತಿ ನಿರ್ಮಾಣವಾಗಿದೆ. ಈ ವ್ಯವಸ್ಥೆಯನ್ನು ಬದಲಾಯಿಸಬೇಕಿದೆ
ಕೆ.ನಂಜೇಗೌಡ, ವಕೀಲರ ಸಂಘದ ತಾಲ್ಲೂಕು ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT