ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸ್ತೂರಿ ರಂಗನ್ ವರದಿ ತಿರಸ್ಕರಿಸಲು ಒತ್ತಾಯ

Last Updated 8 ಮಾರ್ಚ್ 2017, 10:30 IST
ಅಕ್ಷರ ಗಾತ್ರ

ತರೀಕೆರೆ: ಕಸ್ತೂರಿ ರಂಗನ್ ವರದಿ ಯನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ವು ಎರಡನೇ ಬಾರಿಗೆ ಅಧಿಸೂಚನೆ ಯನ್ನು ಹೊರಡಿಸಿದ್ದು, ಆಕ್ಷೇಪಣೆಗಳನ್ನು ಸಲ್ಲಿಸಲು ಕೆಲವೇ ದಿನಗಳ ಅವಕಾಶವನ್ನು ನೀಡಿದೆ. ಕಸ್ತೂರಿ ರಂಗನ್ ನೇತೃತ್ವದ ಸಮಿತಿಯಲ್ಲಿ ಪಶ್ಚಿಮ ಘಟ್ಟಗಳ ವ್ಯಾಪ್ತಿಯಲ್ಲಿ ಬರುವ 5 ರಾಜ್ಯಗಳ ಪೈಕಿ ಒಬ್ಬ ಸದಸ್ಯರು ಸ್ಥಳೀಯರಿಲ್ಲದ ಕಾರಣ ಸಮಿತಿ ಹಾಗೂ ವರದಿ ಎರಡನ್ನು ತಿರಸ್ಕರಿಸಬೇಕು ಎಂದು ಬಿಜೆಪಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ  ಆರ್. ದೇವಾನಂದ್ ಪತ್ರಿಕಾ ಹೇಳಿಕೆಯ ಮೂಲಕ  ಒತ್ತಾಯಿಸಿದ್ದಾರೆ.

ಕಸ್ತೂರಿ ರಂಗನ್ ಸಮಿತಿಯು ತನ್ನ ವರದಿಯನ್ನು ಸಿದ್ಧಪಡಿಸುವ ಸಮಯ ದಲ್ಲಿ ಕಾಡುಗಳ ಅಂಚಿನ ಹಳ್ಳಿಗಳಿಗೆ ಖುದ್ದು ಹಾಜರಾಗಿ ಸರ್ವೇ ಕಾರ್ಯ ಮಾಡಿರುವುದಿಲ್ಲ. ಸಂವಿಧಾನಿಕ ಅಧಿಕಾರವುಳ್ಳ ಗ್ರಾಮಸಭೆಗಳನ್ನು ನಡೆಸಿ ಜನಪ್ರತಿನಿಧಿಗಳ ಮತ್ತು ರೈತರ ಅಹವಾ ಲನ್ನು ಕೇಳಿರುವುದಿಲ್ಲ.

ಕೇವಲ ಬಾಹ್ಯಾ ಕಾಶದ ಉಪಕರಣಗಳಿಂದ ಮಾತ್ರ ಸರ್ವೇ ಕಾರ್ಯ ನಡೆಸಿದ್ದಾರೆ. ರೈತರು ಬೆಳೆದಿರುವ ಅಡಕೆ, ತೆಂಗು, ಕಾಫಿ, ರಬ್ಬರ್ ಮತ್ತು ಇತರೆ ತೋಟಗಾರಿಕಾ ಬೆಳೆಗಳನ್ನೇ ಅರಣ್ಯಗಳೆಂದು ತಪ್ಪಾಗಿ ಭಾವಿಸಿದ್ದಾರೆ.

ಕರ್ನಾಟಕ ಹಾಗು ಕೇರಳ ರಾಜ್ಯಗಳು ಖುದ್ದು ಸರ್ವೇ ಕಾರ್ಯವನ್ನು ನಡೆಸಿಲ್ಲದ ಕಾರಣ ವರದಿಯು ಅವೈಜ್ಞಾನಿಕ ವಾಗಿದೆ. ಪಶ್ಚಿಮ ಘಟ್ಟ ವ್ಯಾಪ್ತಿಯ 1500 ಹಳ್ಳಿಗಳು ಮತ್ತು ಜಿಲ್ಲೆಯ 150ಕ್ಕೂ ಅಧಿಕ ಹಳ್ಳಿಗಳ ರೈತರ ಬದುಕು ಅತಂತ್ರ ವಾಗಲಿದೆ. ಮುಗ್ಧ ಹಳ್ಳಿಗರು ಮತ್ತು ರೈತರ ಸಾಮೂಹಿಕ ಸಮಾಧಿಯ ಮೇಲೆ ಪಶ್ಚಿಮ ಘಟ್ಟಗಳನ್ನು ಉಳಿಸುವ ಹಗಲು ಕನಸು ಬೇಡ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT