ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಿ

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಪ್ರಾಧ್ಯಾಪಕ ಈರಣ್ಣ ಸಲಹೆ
Last Updated 9 ಮಾರ್ಚ್ 2017, 6:33 IST
ಅಕ್ಷರ ಗಾತ್ರ
ರಾಯಚೂರು: ಮನುವಾದಿ ಮನಸ್ಥಿತಿ ಗಳ ಬಗ್ಗೆ ಮಹಿಳೆಯರು ಜಾಗೃತ ಗೊಂಡು ಸಮಾಜದಲ್ಲಿ ನಡೆಯುವ ದೌರ್ಜನ್ಯಗಳಿಂದ ಹೊರಬರಲು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳ ಬೇಕು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಜೆ.ಎಲ್‌.ಈರಣ್ಣ ಹೇಳಿದರು.
 
ನಗರದ ಸ್ಪಂದನ ಭವನದಲ್ಲಿ ಆಲ್‌ ಇಂಡಿಯಾ ಮಹಿಳಾ ಸಾಂಸ್ಕೃತಿಕ ಸಂಘಟನೆ (ಎಐಎಂಎಸ್‌ಎಸ್‌)  ಹಾಗೂ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದಿಂದ ಬುಧವಾರ ಆಯೋಜಿಸಿದ್ದ ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
 
21ನೇ ಶತಮಾನದಲ್ಲೂ ಬೆತ್ತಲೆ ಸೇವೆ, ದೇವದಾಸಿ ಪದ್ಧತಿ ಜೀವಂತ ವಿದ್ದು, ಜಾತಿಪದ್ಧತಿ, ಸಂಪ್ರದಾಯ, ಕಂದಾಚಾರಗಳು ಮಹಿಳೆಯರ ಹಕ್ಕುಗಳನ್ನು ಕಸಿದುಕೊಂಡಿವೆ. ಪುರುಷ ಕೇಂದ್ರಿತ ವ್ಯವಸ್ಥೆಯಲ್ಲಿ ಮಹಿಳೆಯರು ಕೂಡ ಶೋಷಣೆ ಒಪ್ಪಿಕೊಂಡಂತಿದೆ ಎಂದರು.
 
ಮಹಾಭಾರತ ಕಾಲದಿಂದಲೂ ಮಹಿಳೆ ಶೋಷಣೆಯ ವಸ್ತುವಾಗಿದ್ದು, ಇಂದಿಗೂ ಶೋಷಣೆಯಿಂದ ಹೊರ ಬರಲು ಸಾಧ್ಯವಾಗಿಲ್ಲ ಎಂದು ತಿಳಿಸಿದರು. ರೈತ-ಕೃಷಿ ಕಾರ್ಮಿಕ ಸಂಘಟನೆಯ ರಾಜ್ಯ ಘಟಕ ಖಜಾಂಚಿ ವಿ.ನಾಗಮ್ಮಾಳ್ ಅವರು ಮಾತನಾಡಿ, ಸಮಾಜದಲ್ಲಿ ಮಹಿಳೆಯರ ಸ್ಥಾನಮಾನ ಅರಿತುಕೊ ಳ್ಳಲು ಮಹಿಳೆಯರು ಶಿಕ್ಷಣ ಪಡೆದು ಸ್ವತಂತ್ರ ನಿರ್ಧಾರಗಳನ್ನು ಕೈಗೊಳ್ಳುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು ಎಂದರು.
 
ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎನ್‌.ಎಸ್‌. ವೀರೇಶ್ ಮಾತನಾಡಿ, ಶೋಷಕ ಬಂಡವಾಳಶಾಹಿ ವ್ಯವಸ್ಥೆಯು ಇಡೀ ಸಮಾಜವನ್ನು ಶೋಷಣೆಗೆ ಒಳಪಡಿಸಿದೆ. ಆದ್ದರಿಂದ ಮಹಿಳೆಯರು ಬಿಡುಗಡೆ ಹೊಂದಲು ಶೋಷಣೆಯ ವಿರುದ್ಧ ಹೋರಾಡಬೇಕಾಗಿದ್ದು, ಮಹಿಳೆಯರು ಸಂಘಟಿತರಾಗಬೇಕು ಎಂದರು.
 
ಅಧ್ಯಕ್ಷತೆ ವಹಿಸಿದ್ದ ಎಐಎಂ ಎಸ್‍ಎಸ್ ಜಿಲ್ಲಾ ಅಧ್ಯಕ್ಷೆ ಚೇತನಾ ಬನಾರೆ ಮಾತನಾಡಿದರು. ಆಶಾ ಕಾರ್ಯಕರ್ತೆಯರ ಸಂಘದ ತಾಲ್ಲೂಕು ಅಧ್ಯಕ್ಷೆ ಈರಮ್ಮ ವೇದಿಕೆಯಲ್ಲಿದ್ದರು.  
 
ಎಐಎಂಎಸ್‍ಎಸ್ ಕಾರ್ಯಕರ್ತರು ‘ಕತೆಗಾರ್ತಿ ಕೊಡಗಿನ ಗೌರಮ್ಮ ಅವರ ಅಪರಾಧಿ ಯಾರು?’ ನಾಟಕ ಪ್ರದರ್ಶಿಸಿದರು. ಬಿಜೆಪಿ ಮಹಿಳಾ ಮೋರ್ಚಾ: ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಮಹಿಳಾ ಮೋರ್ಚಾದ ನಗರ ಘಟಕ ಅಧ್ಯಕ್ಷೆ ಗಂಗೂಬಾಯಿ ನೇತೃತ್ವ ದಲ್ಲಿ ಅಂತರ ರಾಷ್ಟ್ರೀಯ ಮಹಿಳಾ ದಿನವನ್ನು ಬುಧವಾರ ಸಂಭ್ರಮದಿಂದ ಆಚರಿಸಲಾಯಿತು.
 
ಶರಣಮ್ಮ ಕಾಮರೆಡ್ಡಿ, ಸುಲೋಚನಾ, ಸುಶೀಲಾ, ಸೀತಾ ನಾಯ್ಕ ಅವರು ಮಾತನಾಡಿದರು. ಸುಮತಿ ಶಾಸ್ತ್ರಿ ಪ್ರಾಸ್ತಾವಿಕ ಮಾತನಾಡಿದರು. ಶೈಲಜಾ ನಿರೂಪಿಸಿದರು. 
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ: ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಚೇರಿಯಲ್ಲಿ ಅಂತರರಾ ಷ್ಟ್ರೀಯ ಮಹಿಳಾ ದಿನ ಬುಧವಾರ ಆಚ ರಿಸಲಾಯಿತು. ಜಿಲ್ಲಾ ವ್ಯವಸ್ಥಾಪಕ ಎಂ. ಎಸ್.ಗೋನಾಲ, ಸಂತೋಷ ಪಾಟೀಲ್, ಎಸ್.ಪಿ. ಸಂಧ್ಯಾ, ಸುನೀತಾ, ಏಕಾಂ ತಯ್ಯ ಸ್ವಾಮಿ, ಯಲ್ಲಪ್ಪ ಗೌಳಿ ಇದ್ದರು.

* ಭಾವನಾತ್ಮಕ ವಾಗಿ ಮಹಿಳೆಯನ್ನು ಹೊಗಳಿ ಅಟ್ಟಕ್ಕೇರಿ ಸಲಾಗುತ್ತದೆ. ಇದರ ವಸ್ತು ನಿಷ್ಠತೆ ಬಗ್ಗೆಯೂ ವಿಮರ್ಶೆ ನಡೆಯಬೇಕು. ಅವರ ಹಕ್ಕುಗಳ ಬಗ್ಗೆ ಎಲ್ಲರೂ ಅರಿಯಬೇಕು. 
ಜೆ.ಎಲ್‌.ಈರಣ್ಣ, ಪ್ರಾಧ್ಯಾಪಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT