ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಿಧೆಡೆ ಹಡಪದ ಸಮುದಾಯ ಸಮಾವೇಶ

ಶೈಕ್ಷಣಿಕ ಜಾಗೃತಿಗೆ ಸಲಹೆ: ಅಸ್ಪೃಶ್ಯತೆಗೆ ಆಕ್ರೋಶ, ಹಿಂದುಳಿಕೆಗೆ ಕಳವಳ
Last Updated 9 ಮಾರ್ಚ್ 2017, 6:56 IST
ಅಕ್ಷರ ಗಾತ್ರ
ಕುಷ್ಟಗಿ/ಕನಕಗಿರಿ/ ಕಾರಟಗಿ:  ವಿವಿಧೆಡೆ ಹಡಪದ ಸಮಾಜದ ಸಮಾವೇಶ ನಡೆದು ಪದಾಧಿಕಾರಿಗಳನ್ನು ಆರಿಸಲಾಯಿತು.
 
ಕುಷ್ಟಗಿ ವರದಿ: ಶಿಕ್ಷಣ ಮತ್ತು ಸಂಘಟನೆ ಮೂಲಕ ಹಡಪದ ಸಮುದಾಯ ಸಮಾಜದ ಮುಖ್ಯವಾಹಿನಿಗೆ ಬರಬೇಕಿದೆ ಎಂದು ಸಮುದಾಯದ ಜಿಲ್ಲಾ ಸಮಿತಿ ಅಧ್ಯಕ್ಷ ಮಂಜುನಾಥ ಹಂದ್ರಾಳ ಹೇಳಿದರು.
 
ಬುಧವಾರ ನಿಡಶೇಸಿ ಪಶ್ಚಕಂಥಿ ಹಿರೇಮಠದಲ್ಲಿ ನಡೆದ ಸಮುದಾಯದ ತಾಲ್ಲೂಕು ಮಟ್ಟದ ಸಮಾವೇಶದಲ್ಲಿ ಮಾತನಾಡಿದರು. ಶೈಕ್ಷಣಿಕ, ಸಾಮಾಜಿ, ಆರ್ಥಿಕ ಮತ್ತು ರಾಜಕೀಯವಾಗಿ ಹಿಂದುಳಿದಿದೆ. ಮಕ್ಕಳಿಗೆ ಉತ್ತಮ ಶಿಕ್ಷಣ ದೊರಕಿಸಿಕೊಡುವಲ್ಲಿ ಮತ್ತು ಸಂಘಟನೆ ಮಹತ್ವ ಕುರಿತು ಸಮುದಾಯದ ಜನರನ್ನು ಜಾಗೃತಿಗೊಳಿಸುವಂತೆ ಹೇಳಿದರು.
 
ಹಡಪದ ಸಮಾಜದ ಜಿಲ್ಲಾ ಸಮಿತಿ ಉಪಾಧ್ಯಕ್ಷ ಹನುಮಂತ ಅವರು ಮಾತನಾಡಿ, ಕುಲಕಸುಬುಗಳು ವಿನಾಶದ ಅಂಚಿನಲ್ಲಿವೆ. ಅಸ್ತಿತ್ವ ಕಾಪಾಡಿಕೊಳ್ಳಲು ಸಂಘಟನಾತ್ಮಕ ಹೋರಾಟ ನಡೆಸುವ ಅಗತ್ಯವಿದೆ ಎಂದರು.
 
ಹಡಪದ ಸಮಾಜದ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಅನ್ನಪೂರ್ಣಮ್ಮ ಮನ್ನಾಪೂರ, ಮುಖ್ಯಶಿಕ್ಷಕ ಎಚ್.ಪುತ್ರಪ್ಪ, ನಿವೃತ್ತ ಪ್ರಾಚಾರ್ಯರಾದ ಪಾರ್ವತಿದೇವಿ ಹೊಂಬಳ, ಬಸವರಾಜ ಬಂಡರಗಲ್‌, ಲಲಿತಮ್ಮ ಜಿಗಳೂರು ಮಾತನಾಡಿದರು. 
 
ಪ್ರಮುಖರಾದ ಕನಕಗಿರಿ ಭಾಗದ ಅಧ್ಯಕ್ಷ ಮಹಾದೇವಪ್ಪ ಹಡಪದ, ಪ್ರಮುಖರಾದ ಚಂದ್ರಶೇಖರ ಲಿಂಗದಳ್ಳಿ, ಪಂಚಾಕ್ಷರಿ ಇಲಕಲ್ಲ, ಹನುಮಂತಪ್ಪ ಹನುಮಸಾಗರ, ಸತ್ಯನಾರಾಯಣ, ಮಲ್ಲಪ್ಪ ಕುಷ್ಟಗಿ, ರುದ್ರಪ್ಪ ಹಡಪದ, ಚಂದ್ರಪ್ಪ ಹಡಪದ, ವೀರಭದ್ರಪ್ಪ ಹಡಪದ, ಶುಕಮುನಿ ಕೊರಡಕೇರಿ, ಗುಂಡಪ್ಪ ಹಿರೇವಂಕಲಕುಂಟಿ, ಮಂಜುನಾಥ ಬೇಲೂರು, ಕೂಡ್ಲೆಪ್ಪ ಇದ್ದರು.  ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಸೇರಿದ ನೂರಾರು ಜನ ಸಭೆಯಲ್ಲಿ ಪಾಲ್ಗೊಂಡಿದ್ದರು.
 
ಪದಾಧಿಕಾರಿಗಳು:  ಇದೇ ಸಂದರ್ಭದಲ್ಲಿ ಹಡಪದ ಸಮಾಜದ ತಾಲ್ಲೂಕು ಸಮಿತಿ ರಚಿಸಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಎನ್.ಎಸ್. ನೀಲಕಂಠಬಾಬು (ಅಧ್ಯಕ್ಷ) ಶಿವಾಜಿ ಹಡಪದ (ಕಾರ್ಯಧ್ಯಕ್ಷ), ಹನುಮನಾಳ ಹೋಬಳಿಯ ಸಂಗಪ್ಪ ಕಾಟಾಪೂರ, ಹನುಮಸಾಗರದ ಪರಶುರಾಮ ಹಡಪದ, ತಾವರಗೇರಾದ ನಾಗರಾಜ ಹಡಪದ, ದೋಟಿಹಾಳದ ವಿರೂಪಾಕ್ಷಪ್ಪ ಹಡಪದ, ಹನುಮಂತ ಹಿರೇಮನ್ನಾಪುರ (ಉಪಾಧ್ಯಕ್ಷರು). ಉಮೇಶ ಮಾರನಾಳ (ಪ್ರಧಾನ ಕಾರ್ಯದರ್ಶಿ). ಬುಡ್ಡಪ್ಪ ಯಲಬುರ್ತಿ (ಸಹ ಕಾರ್ಯದರ್ಶಿ). ಎಚ್‌.ಮಹೇಶ (ಖಜಾಂಚಿ). ಪಂಪಣ್ಣ ಮನ್ನಾಪೂರ (ಸಂಘಟನಾ ಕಾರ್ಯದರ್ಶಿ). 
 
ಕನಕಗಿರಿ ವರದಿ:  ಶೈಕ್ಷಣಿಕ, ಆರ್ಥಿಕ ಹಾಗೂ ರಾಜಕೀಯವಾಗಿ ತೀರ ಹಿಂದುಳಿದಿರುವ ಹಡಪದ (ಕ್ಷೌರಿಕ) ಸಮಾಜದವರು ಮಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಹಡಪದ ಜನಾಂಗದವರ ಸಮಾವೇಶ ನಡೆಸಲು ಯೋಜಿಸಲಾಗಿದೆ ಎಂದು ಅಖಿಲ ಕರ್ನಾಟಕ  ಹಡಪದ (ಕ್ಷೌರಿಕ) ಸಮಾಜದ ಯುವ ಘಟಕದ ಅಧ್ಯಕ್ಷ  ನಾಗರಾಜ ಸರ್ಜಾಪುರ ತಿಳಿಸಿದರು.
 
ಪಟ್ಟಣದ ಹಿರೇಹಳ್ಳ ಬಸವೇಶ್ವರ ದೇವಸ್ಥಾನದ ಸಮುದಾಯ ಭವನದಲ್ಲಿ ಈ ವಿಧಾನಸಭಾ ಕ್ಷೇತ್ರದ ಹಡಪದ (ಕ್ಷೌರಿಕ) ಸಮಾಜದ ಬಾಂಧವರು  ಶನಿವಾರ ಆಯೋಜಿಸಿದ್ದ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.  
 
ಹಡಪದ (ಕ್ಷೌರಿಕ) ಸಮಾಜದ ಜಿಲ್ಲಾಧ್ಯಕ್ಷ ಮಂಜುನಾಥ ಹಂದ್ರಾಳ ಮಾತನಾಡಿ ಸಮಾಜದವರು ಮೊದಲ ಆದ್ಯತೆ ಶಿಕ್ಷಣಕ್ಕೆ ನೀಡಬೇಕಾಗಿದೆ,  ಸಮುದಾಯದ ಅಭಿವೃದ್ಧಿಗೆ ಸಂಬಂಧಿಸಿದಂತೆ ವಿವಿಧ ಕಾರ್ಯಕ್ರಮಗಳನ್ನು ನಡೆಸಲಾಗುವದು ಸಹಕಾರ ನೀಡಬೇಕಂದು ಹೇಳಿದರು. ಕನಕಗಿರಿ ವಿಧಾನಸಭಾ ಕ್ಷೇತ್ರ ಹಾಗೂ ಯುವ ಘಟಕದ ಪದಾಧಿಕಾರಿಗಳನ್ನು ರಚಿಸಲಾಯಿತು.
 
ಪದಾಧಿಕಾರಿಗಳು:   ಮಹಾದೇವಪ್ಪ ಹಡಪದ ಕಾರಟಗಿ (ಅಧ್ಯಕ್ಷ),  ವಿರುಪಣ್ಣ ಜಮಾಪುರ, ಚಂದಪ್ಪ ಹೇರೂರು, ವಿರೂಪಾಕ್ಷಪ್ಪ ಕನಕಗಿರಿ. ಮಹಾದೇವಪ್ಪ ನವಲಿ (ಉಪಾಧ್ಯಕ್ಷರು), ದೇವರಮನಿ ವೀರೇಶ, ಕೊಟ್ನೇಕಲ ರವಿಚಂದ್ರ, ಪಂಪಾಪತಿ, ಯಮನೂರಪ್ಪ (ಖಜಾಂಚಿಗಳು), ಶಿವಕುಮಾರ ಕಾರಟಗಿ, ನಿರುಪಾದಿ ಬೂದಗುಂಪ, ಮಲ್ಲಿಕಾರ್ಜುನ ಕನಕಗಿರಿ, ಯಮನೂರಪ್ಪ ಕನಕಗಿರಿ (ಪ್ರಧಾನ ಕಾರ್ಯದರ್ಶಿಗಳು), ಬಸವರಾಜ ಬೇವಿನಾಳ, ಕಂಠಿರಂಗಪ್ಪ,  ವೀರೇಶಪ್ಪ, ಮುತ್ತುರಾಜ ಮುಸಲಾಪುರ(ಸಂಘಟನಾ ಕಾರ್ಯದರ್ಶಿಗಳು), 
 
ಯಮನೂರಪ್ಪ ಶ್ರೀರಾಮನಗರ, ಹನುಮೇಶ ಡಣಾಪುರ, ಸಿದ್ದಪ್ಪ ಅರಳಹಳ್ಳಿ, ಯಮನೂರಪ್ಪ ಹಿರೇಖೇಡ (ಸಂಚಾಲಕರು), ರುದ್ರಪ್ಪ ಮೈಲಾಪುರ, ಷಣ್ಮುಖಪ್ಪ ಆಚಾರನರಸಾಪುರ,  ನಾರಾಯಣಪ್ಪ ಕನಕಗಿರಿ (ನಿರ್ದೇಶಕರು)ಯುವಕ ಸಂಘದ ಪದಾಧಿಕಾರಿಗಳು: ಬಸವರಾಜ ಬಸಪ್ಪ ಕನಕಗಿರಿ( ಅಧ್ಯಕ್ಷ), ವೀರಭದ್ರಪ್ಪ ವಿರುಪಣ್ಣ (ಉಪಾಧ್ಯಕ್ಷರು), ಬಸವರಾಜ ಸಣ್ಣ ದುರಗಪ್ಪ ( ಪ್ರಧಾನ ಕಾರ್ಯದರ್ಶಿ),
 
ಕಾರಟಗಿ ವರದಿ: ಕನಕಗಿರಿ ವಿಧಾನಸಭಾ ಕ್ಷೇತ್ರದ ಹಡಪದ (ಕ್ಷೌರಿಕ) ಸಮಾಜದ ನೂತನ ಅಧ್ಯಕ್ಷರಾಗಿ ಇಲ್ಲಿಯ ಮಹಾದೇವಪ್ಪ ಹಡಪದ ಅವಿರೋಧವಾಗಿ ಈಚೆಗೆ ನಡೆದ ಸಮಾವೇಶದಲ್ಲಿ ಆಯ್ಕೆಯಾಗಿದ್ದಾರೆ. ವೀರಭದ್ರಪ್ಪ (ಉಪಾಧ್ಯಕ್ಷ), ವೀರೇಶ್ ದೇವರಮನಿ (ಖಜಾಂಚಿ), ಶಿವಕುಮಾರ ಕಾರಟಗಿ (ಪ್ರಧಾನ ಕಾರ್ಯದರ್ಶಿ)ಯಾಗಿ ಅವಿರೋಧವಾಗಿ ಆಯ್ಕೆಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT