ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರಸಭೆ ಅಧ್ಯಕ್ಷರ ಕೊಠಡಿಗೆ ಮುತ್ತಿಗೆ

ಸಮರ್ಪಕ ನೀರು ಪೂರೈಕೆಗೆ 18ನೇ ವಾರ್ಡ್‌ ನಿವಾಸಿಗಳ ಒತ್ತಾಯ
Last Updated 9 ಮಾರ್ಚ್ 2017, 7:10 IST
ಅಕ್ಷರ ಗಾತ್ರ
ಕೋಲಾರ: ಸಮರ್ಪಕವಾಗಿ ಕುಡಿಯುವ ನೀರು ಪೂರೈಸುವಂತೆ ಒತ್ತಾಯಿಸಿ ನಗರದ 18ನೇ ವಾರ್ಡ್‌ ನಿವಾಸಿಗಳು ಇಲ್ಲಿನ ನಗರಸಭೆ ಅಧ್ಯಕ್ಷರ ಕೊಠಡಿಗೆ ಬುಧವಾರ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿದರು.
 
ನಗರಸಭೆ ಆವರಣದಲ್ಲಿ ಬಿಂದಿಗೆಗಳೊಂದಿಗೆ ಮೊದಲು ಧರಣಿ ಕುಳಿತ ವಾರ್ಡ್‌ನ ಮಹಿಳೆಯರು, ನಗರಸಭೆ ಅಧಿಕಾರಿಗಳು, ವಾರ್ಡ್‌ನ ಸದಸ್ಯ ನವಾಜ್‌ ಪಾಷಾ ಹಾಗೂ ಅಧ್ಯಕ್ಷೆ ಮಹಾಲಕ್ಷ್ಮಿ ಅವರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
 
‘ವಾರ್ಡ್‌ನ ವ್ಯಾಪ್ತಿಯ ಮಿಲ್ಲತ್‌ ನಗರ, ಸುಲ್ತಾನ್‌ ತಿಪ್ಪಸಂದ್ರ, ರಹಮತ್‌ ನಗರ ಬಡಾವಣೆಯಲ್ಲಿ ಕಳೆದ ಎರಡು ತಿಂಗಳಿನಿಂದ ಟ್ಯಾಂಕರ್‌ ನೀರು ಪೂರೈಕೆಯಾಗಿಲ್ಲ. ಮತ್ತೊಂದೆಡೆ ಬಡಾ ವಣೆಗಳ ನಲ್ಲಿಗಳಲ್ಲಿ ನೀರು ಬರುತ್ತಿಲ್ಲ. ಈ ಬಗ್ಗೆ ವಿಚಾರಿಸಲು ವಾರ್ಡ್‌ನ ಸದಸ್ಯರು ಹಾಗೂ ನಗರಸಭೆ ಅಧಿಕಾರಿಗಳಿಗೆ ಕರೆ ಮಾಡಿದರೆ ಕರೆ ಸ್ವೀಕರಿಸುವುದಿಲ್ಲ’ ಎಂದು ಸ್ಥಳೀಯ ನಿವಾಸಿ ಅಫ್ಜರ್‌ ಖಾನ್‌ ದೂರಿದರು.
 
ಟ್ಯಾಂಕರ್‌ ನೀರು ಹಂಚಿಕೆಯಲ್ಲಿ ಅಕ್ರಮ ನಡೆಯುತ್ತಿದೆ. ಸ್ಥಳೀಯ ವಾಲ್‌ ಮೆನ್‌ ನೀರು ಕೊಡುವುದಲ್ಲಿ ತಾರತಮ್ಯ ಮಾಡುತ್ತಿದ್ದಾರೆ. ಮನೆಗ ಳಿಂದ ಹಣ ಪಡೆದು ಟ್ಯಾಂಕರ್‌ ನೀರು ಕೊಡಲಾ ಗುತ್ತಿದೆ. ಹಣ ಕೊಡದ ಮನೆಗಳಿಗೆ ನೀರು ವಿತರಣೆ ಮಾಡುತ್ತಿಲ್ಲ. ಅಲ್ಲದೇ, ಟ್ಯಾಂಕರ್‌ ಚಾಲಕರು ನಗರ ಸಭೆಯು ನಿಗದಿಪಡಿಸಿದ ಪ್ರಮಾಣಕ್ಕಿಂತ ಕಡಿಮೆ ನೀರು ಪೂರೈಸಿತ್ತಿದ್ದಾರೆ ಎಂದರು.
 
ಟ್ಯಾಂಕರ್‌ ಮಾಲೀಕರು ನಿಗದಿತ ಪ್ರಮಾಣದಲ್ಲಿ ನೀರು ಸರಬರಾಜು ಮಾಡಿದಿದ್ದರೂ ನಗರಸಭೆಯ ಕಡತ ದಲ್ಲಿ ಸುಳ್ಳು ಮಾಹಿತಿ ದಾಖಲಿಸಿ ಹೆಚ್ಚುವರಿ ಬಿಲ್‌ ಪಡೆಯುತ್ತಿದ್ದಾರೆ. ಅಧಿಕಾರಿಗಳು ಹಾಗೂ ವಾರ್ಡ್‌ ಸದ ಸ್ಯರು ಬಡಾವಣೆಗಳಿಗೆ ಭೇಟಿ ನೀಡಿ ಟ್ಯಾಂಕರ್‌ ನೀರು ಪೂರೈಕೆಯಲ್ಲಿ ನಡೆ ಯುತ್ತಿರುವ ಅಕ್ರಮವನ್ನು ಪರಿಶೀಲಿ ಸುತ್ತಿಲ್ಲ. ವಾರ್ಡ್‌ನಲ್ಲಿ ಚರಂಡಿ, ಬೀದಿ ದೀಪ, ರಸ್ತೆಯಂತಹ ಮೂಲ ಸೌಕರ್ಯ ಗಳು ಮರೀಚಿಕೆಯಾಗಿವೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
 
ವಾರ್ಡ್‌ನಲ್ಲಿ ತ್ಯಾಜ್ಯ ವಿಲೇವಾರಿ ಪ್ರಕ್ರಿಯೆ ಸರಿಯಾಗಿ ನಡೆಯುತ್ತಿಲ್ಲ. ಚರಂಡಿಗಳನ್ನು ಹಲವು ತಿಂಗಳುಗಳಿಂದ ಸ್ವಚ್ಛಗೊಳಿಸಿಲ್ಲ. ನಗರಸಭೆ ಸದಸ್ಯರು ಹಾಗೂ ಅಧ್ಯಕ್ಷರು ವಾರ್ಡ್‌ನ ವ್ಯಾಪ್ತಿಯ ಬಡಾವಣೆಗಳನ್ನು ಸಂಪೂರ್ಣ ನಿರ್ಲಕ್ಷಿಸಿದ್ದಾರೆ. ಇವರ ನಿರ್ಲಕ್ಷ್ಯದಿಂದಾಗಿ ಸ್ಥಳೀಯರು ಪ್ರತಿನಿತ್ಯ ಬವಣೆ ಪಡುವಂತಾಗಿದೆ. ಅಧ್ಯಕ್ಷರೇ ವಾರ್ಡ್‌ಗೆ ಭೇಟಿ ಸಮಸ್ಯೆಗಳನ್ನು ಪರಿಶೀಲಿಸಬೇಕು ಎಂದು ಆಗ್ರಹಿಸಿದರು.
 
ನಗರಸಭೆ ಅಧ್ಯಕ್ಷೆ ಮಹಾಲಕ್ಷ್ಮಿ ಅವರ ಪತಿ ಹಾಗೂ ನಗರಸಭಾ ಸದಸ್ಯ ಪ್ರಸಾದ್‌ಬಾಬು ಅವರು ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿ ಪ್ರತಿಭಟನಾಕಾರರ ಮನವೊಲಿಸಲು ಯತ್ನಿಸಿದರು. ಇದರಿಂದ ಕೋಪಗೊಂಡ ಪ್ರತಿಭಟನಾಕಾರರು, ‘ಮಹಾಲಕ್ಷ್ಮಿ ಅವರು ನಗರಸಭೆಯ ಅಧ್ಯಕ್ಷರು. ಅವರೇ ಸಮಸ್ಯೆ ಪರಿಹರಿಸುವ ಭರವಸೆ ಕೊಡಬೇಕು. ಅವರ ಬದಲು ನೀವು ಯಾಕೆ ಸಂಧಾನ ನಡೆಸಲು ಬರುತ್ತೀರಿ’ ಎಂದು ಪ್ರಸಾದ್‌ಬಾಬು ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
 
ವಾರ್ಡ್‌ ವ್ಯಾಪ್ತಿಯ ಬಡಾವಣೆಗಳಲ್ಲಿ ಶೀಘ್ರವೇ ಹೊಸ ಕೊಳವೆ ಬಾವಿಗಳನ್ನು ಕೊರೆಸಬೇಕು. ಟ್ಯಾಂಕರ್‌ ನೀರು ಪೂರೈಕೆಯಲ್ಲಿ ನಡೆಯುತ್ತಿರುವ ಅಕ್ರ ಮಕ್ಕೆ ಕಡಿವಾಣ ಹಾಕಬೇಕು. ಇಲ್ಲದಿದ್ದರೆ ಅಧ್ಯಕ್ಷರ ಕೊಠಡಿಯಲ್ಲೇ ಅನಿರ್ದಿ ಷ್ಟಾವಧಿ ಧರಣಿ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು. ವಾರ್ಡ್‌ ನಿವಾಸಿಗಳಾದ ಶಬಾನಾ ಬೇಗಂ. ಆಯಿಷಾ,  ತಬ್ಸಮ್, ನೂರುಲ್ಲಾ, ಶಫಿ  ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT