ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರದೊಳಗೆ ರೈತರ ಖಾತೆಗೆ ಬೆಳೆ ಪರಿಹಾರ

ಜಿಲ್ಲೆಯು ಫಸಲ್ ಬೀಮಾ ಎಕ್ಸಲೆನ್ಸ್‌ ಅವಾರ್ಡ್‌ಗೆ ನಾಮನಿರ್ದೇಶನ
Last Updated 9 ಮಾರ್ಚ್ 2017, 9:18 IST
ಅಕ್ಷರ ಗಾತ್ರ
ಚಾಮರಾಜನಗರ: ಬೆಳೆನಷ್ಟ ಅನುಭವಿ ಸಿರುವ ಜಿಲ್ಲೆಯ ರೈತರ ಬ್ಯಾಂಕ್‌ ಖಾತೆ ಗಳಿಗೆ ಇನ್ನೊಂದು ವಾರದೊಳಗೆ ನೇರ ವಾಗಿ ಬೆಳೆ ಪರಿಹಾರದ ಹಣ ಜಮೆಯಾಗಲಿದೆ.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ಯಲ್ಲಿ ಬೆಳೆ ನಷ್ಟ ಕುರಿತು ಚರ್ಚೆ ನಡೆಯಿತು. 
 
ಜಿಲ್ಲಾಧಿಕಾರಿ ಬಿ.ರಾಮು ಮಾತ ನಾಡಿ, ಜಿಲ್ಲೆಯಲ್ಲಿ ಮಳೆ ಇಲ್ಲದೆ ಮುಂಗಾರು ಹಂಗಾಮಿನಡಿ 55,101. 92 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಹಾನಿ ಗೀಡಾಗಿತ್ತು. ಈ ಅವಧಿಯಲ್ಲಿ ಒಟ್ಟು ₹ 40.34 ಕೋಟಿ ಬೆಳೆನಷ್ಟವಾಗಿದೆ ಎಂದು ಸಭೆಗೆ ವಿವರಿಸಿದರು.
 
ಹಿಂಗಾರು ಹಂಗಾಮಿನಡಿ 23,590 ಹೆಕ್ಟೇರ್‌ನಲ್ಲಿ ಬೆಳೆ ಹಾನಿಯಾಗಿದೆ. ಒಟ್ಟು ₹ 16.04 ಕೋಟಿ ಬೆಳೆನಷ್ಟವಾಗಿದೆ. ಈ ಅವಧಿಯ ಬೆಳೆನಷ್ಟದ ಪರಿಶೀಲನೆ ನಡೆ ಯುತ್ತಿದೆ. ಮೊದಲು ಹಂತದಲ್ಲಿ ಮುಂಗಾರು ಹಂಗಾಮಿನ ಬೆಳೆ ಪರಿಹಾರ ರೈತರಿಗೆ ದೊರೆಯಲಿದೆ ಎಂದು ವಿವರಿಸಿದರು.
 
ಕೃಷಿ ಇಲಾಖೆಯ ಉಪ ನಿರ್ದೇಶಕ ಜಿ.ಎಚ್. ಯೋಗೇಶ್‌ ಮಾತನಾಡಿ, ಜಿಲ್ಲೆ ಯಲ್ಲಿ 36 ಸಾವಿರ ರೈತರು ಫಸಲ್‌ ಬೀಮಾ ಯೋಜನೆಯಡಿ ಹೆಸರು ನೋಂದಾಯಿಸಿದ್ದಾರೆ. ಹಾಗಾಗಿ,   ಫಸಲ್‌ ಬೀಮಾ ಯೋಜನೆಯ ಎಕ್ಸಲೆನ್ಸ್‌ ಅವಾರ್ಡ್‌ಗೆ ನಾಮ ನಿರ್ದೇಶನ ಗೊಂಡಿದೆ ಎಂದು ತಿಳಿಸಿದರು.
 
ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್‌ ಮಾತನಾಡಿ, ‘ಅಧಿಕಾರಿಗಳು ಬರಗಾಲದ ಹಿನ್ನೆಲೆಯಲ್ಲಿ ಶ್ರಮವಹಿಸಿ ಕೆಲಸ ಮಾಡಬೇಕು. ಜಿಲ್ಲಾಮಟ್ಟದ ಅಧಿಕಾರಿಗಳ ಹೊಣೆಗಾರಿಕೆ ಹೆಚ್ಚಿದೆ. ಸಬೂಬು ಹೇಳಬಾರದು. ತ್ವರಿತವಾಗಿ ಅಭಿವೃದ್ಧಿ ಕಾಮಗಾರಿ ಪೂರ್ಣ ಗೊಳಿಸ ಬೇಕು’ ಎಂದು ಸೂಚಿಸಿದರು.
 
ಜಿ.ಪಂ. ಅಧ್ಯಕ್ಷ ಎಂ.ರಾಮಚಂದ್ರ, ಉಪಾಧ್ಯಕ್ಷ ಎಸ್.ಬಸವರಾಜು, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕೆ. ಹರೀಶ್‌ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿ ಕಾರಿ ಕುಲದೀಪ್‌ಕುಮಾರ್‌ ಆರ್. ಜೈನ್‌ ಹಾಜರಿದ್ದರು.

ಪ್ರತಿಧ್ವನಿಸಿದ  ಮೇವಿನ ಕಿಟ್‌ ಅವಾಂತರ
ಚಾಮರಾಜನಗರ:
ಮೇವಿನ ಕಿಟ್‌ ಅವಾಂತರ ಸಭೆಯಲ್ಲಿ ಪ್ರತಿಧ್ವನಿಸಿತು.ಶಾಸಕ ಆರ್‌. ನರೇಂದ್ರ ಮಾತ ನಾಡಿ, ‘ಎಷ್ಟು ರೈತರಿಗೆ ಮೇವಿನ ಕಿಟ್‌ ವಿತರಿಸಲಾಗಿದೆ. ಕಿಟ್‌ ಪಡೆದ ರೈತರು ಮೇವು ಬೆಳೆದಿದ್ದಾರೆಯೇ?’ ಎಂದು ಪ್ರಶ್ನಿಸಿದರು.

ಜಿಲ್ಲಾ ಪಶುಪಾಲನಾ ಇಲಾಖೆಯ ಉಪ ನಿರ್ದೇಶಕ ಡಾ.ಬಾಲಸುಂದರ್‌ ಮಾತನಾಡಿ, ‘416 ಹೆಕ್ಟೇರ್‌ನಲ್ಲಿ ಬಿತ್ತನೆಗೆ 2,386 ಮೇವಿನ ಕಿಟ್‌ ವಿತರಿಸ ಲಾಗಿತ್ತು. ಪ್ರತಿ ಕಿಟ್‌ 6 ಕೆಜಿ ತೂಕ ಇರುತ್ತದೆ. 1,450 ರೈತರಿಗೆ ಕಿಟ್‌ ವಿತರಿಸಲಾಗಿದೆ’ ಎಂದು ಸಭೆಗೆ ವಿವರಿಸಿದರು.

ನರೇಂದ್ರ ಮಾತನಾಡಿ, ‘ಜಿಲ್ಲೆ ಯಲ್ಲಿ ಕಿಟ್‌ ಪಡೆದ ಯಾರೊಬ್ಬರು ಮೇವು ಬೆಳೆದಿಲ್ಲ. ಅಧಿಕಾರಿಗಳ ಈ ಬಗ್ಗೆ ಪರಿಶೀಲನೆ ನಡೆಸುತ್ತಿಲ್ಲ. ಸಭೆಗೆ ಸುಳ್ಳು ಮಾಹಿತಿ ನೀಡುತ್ತಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಳ್ಳಾರಿಯಿಂದ ಮೇವು ಪೂರೈಕೆ: ಸಚಿವ ಖಾದರ್‌ ಮಾತನಾಡಿ, ‘ಅಗತ್ಯ ವಿರುವೆಡೆ ಗೋಶಾಲೆ ತೆರೆಯಲು ಮೇವು ಸಂಗ್ರಹಿಸಬೇಕು. ಹಾಲಿ ಇರುವ ಗೋಶಾಲೆಗಳಿಗೂ ಸಮರ್ಪಕ ವಾಗಿ ಮೇವು ಪೂರೈಸಬೇಕು. ಯಾವುದೇ ತೊಂದರೆ ತಲೆ ದೋರ ದಂತೆ ಎಚ್ಚರಿಕೆ ವಹಿಸಬೇಕು’ ಎಂದು ಸೂಚಿಸಿದರು.

ಜಿಲ್ಲಾಧಿಕಾರಿ ರಾಮು ಮಾತನಾಡಿ, ‘ಬಳ್ಳಾರಿಯಿಂದ ಪುಡಿಮೇವು ಪೂರೈಕೆಯಾಗಿದೆ. ಈ ಬಗ್ಗೆ ಪರಿಶೀಲನೆ ನಡೆಸಿದ್ದೇನೆ’ ಎಂದು ತಿಳಿಸಿದರು. ಡಾ.ಬಾಲಸುಂದರ್‌ ಮಾತನಾಡಿ, ‘ಬಳ್ಳಾರಿಯಿಂದ 400 ಟನ್‌ ಮೇವು ತರಿಸಿಕೊಳ್ಳಲು ಕ್ರಮ ವಹಿಸಲಾಗಿದೆ’ ಎಂದು ತಿಳಿಸಿದರು.

‘ಗಿರಿಜನರಿಗೆ ಸೌಲಭ್ಯ ತಲುಪಿಲ್ಲ’
ಚಾಮರಾಜನಗರ:
ಚಾಮರಾಜ ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಗಿರಿಜನರಿಗೆ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ಅಗತ್ಯ ಸೌಲಭ್ಯ ದೊರೆತಿಲ್ಲ. ಅನುದಾನವಿದ್ದರೂ ಬಳಕೆಯಾಗಿಲ್ಲ’ ಎಂದು ಶಾಸಕ ಸಿ. ಪುಟ್ಟರಂಗಶೆಟ್ಟಿ ದೂರಿದರು.

ಸಭೆಯಲ್ಲಿ ಮಾತನಾಡಿದ ಅವರು, ‘ಒಟ್ಟು ₹ 18.26 ಕೋಟಿಗೆ ಕ್ರಿಯಾಯೋಜನೆ ತಯಾರಿಸಲಾಗಿತ್ತು. ಗಿರಿಜನ ಉಪ ಯೋಜನೆಯಡಿ ಕುರಿ ವಿತರಿಸಿಲ್ಲ. ನನ್ನ ಅನುಮತಿ ಇಲ್ಲದೆ ಕೆಲವು ಕಾಮಗಾರಿಗೆ ಕ್ರಿಯಾ ಯೋಜನೆ ಸಿದ್ಧಪಡಿಸಿ ಅನು ಮೋದನೆ ನೀಡಲಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಸರಸ್ವತಿ  ಉಮಾತನಾಡಿ, ‘ಜಿಲ್ಲೆಯ ಎಲ್ಲ ಕ್ಷೇತ್ರದ ಶಾಸಕರು, ಸಂಸದರು ಮತ್ತು ಜಿಲ್ಲಾಧಿಕಾರಿ ಅವರ ಸಮ್ಮುಖ ದಲ್ಲಿಯೇ ಗಿರಿಜನ ಅಭಿವೃದ್ಧಿ ಕಾಮಗಾರಿಗಳಿಗೆ ಕ್ರಿಯಾಯೋಜನೆ ಸಿದ್ಧಪಡಿಸಲಾಗಿತ್ತು. ಇದರನ್ವಯ ಅಭಿವೃದ್ಧಿಗೆ ಚಾಲನೆ ನೀಡಲಾಗಿದೆ’ ಎಂದು ಸಭೆಗೆ ವಿವರಿಸಿದರು.


ಸಚಿವ ಖಾದರ್‌ ಮಾತನಾಡಿ, ‘ಗಿರಿಜನರ ಕಲ್ಯಾಣ ಕಾರ್ಯಕ್ರಮ ಸಂಬಂಧ ವಿಧಾನಸಭಾ ಕ್ಷೇತ್ರವಾರು ನಿಗದಿಯಾಗಿರುವ ಅನುದಾನ ಮತ್ತು ವೆಚ್ಚದ ಮಾಹಿತಿ ಸಲ್ಲಿಸಬೇಕು’ ಎಂದು ಹೇಳುವ ಮೂಲಕ ಚರ್ಚೆಗೆ ತೆರೆ ಎಳೆದರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT