ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರ್ಸರಿ ಉದ್ಯಮದಿಂದ ಉತ್ತಮ ಲಾಭ

ಕಸಿಕಟ್ಟುವ ತರಬೇತಿ ಕಾರ್ಯಕ್ರಮ: ಡಾ. ಎಂ. ಹನುಮಂತಪ್ಪ
Last Updated 9 ಮಾರ್ಚ್ 2017, 10:19 IST
ಅಕ್ಷರ ಗಾತ್ರ
ಉಡುಪಿ: ನರ್ಸರಿ ಕೃಷಿಯಲ್ಲಿ ಗಿಡಗಳ ಬೇಡಿಕೆಗೆ ಅನುಗುಣವಾಗಿ ಕಸಿಗಿಡಗಳನ್ನು ಹಾಕಿದರೆ ಮಾತ್ರ ಹೆಚ್ಚಿನ ಲಾಭ ಗಳಿಸಬಹುದು ಎಂದು ಬ್ರಹ್ಮಾವರ ವಲಯ ಕೃಷಿ ತೋಟಗಾರಿಕಾ ಸಂಶೋ ಧನಾ ಕೇಂದ್ರದ ಸಹ ಸಂಶೋಧನಾ ನಿರ್ದೇಶಕ ಡಾ. ಎಂ. ಹನುಮಂತಪ್ಪ ಹೇಳಿದರು. 
 
ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಎರಡು ದಿನದಗಳ ತೋಟಗಾರಿಕೆ ಬೆಳೆಯಲ್ಲಿ ಸಸ್ಯಾಗಾರದ ನಿರ್ವಹಣೆ ಮತ್ತು ಕಸಿಕಟ್ಟುವ ತರಬೇತಿ ಕಾರ್ಯ ಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. 
 
ನರ್ಸರಿ ಕೃಷಿಯಲ್ಲಿ ಆಸಕ್ತಿ ವಹಿಸುವುದರ ಜತೆಗೆ ಗಿಡಗಳ ಗುಣಮಟ್ಟ ಕಾಯ್ದುಕೊಳ್ಳುವುದು ಬಹಳ ಮುಖ್ಯ. ಉತ್ತಮ ಗುಣಮಟ್ಟದ ಸಸಿಗಳಿಂದ ಕಸಿಮಾಡಿದರೆ ಗಿಡಗಳು ಉತ್ತಮವಾಗಿ ಬೆಳೆಯುತ್ತವೆ. ಲಾಭವು ಸಹ ಹೆಚ್ಚಳವಾಗುತ್ತದೆ. ಮಾವು, ಹಲಸು, ಗೇರು, ಕಾಳುಮೆಣಸು ಮುಂತಾದ ಗಿಡಗಳನ್ನು ನರ್ಸರಿಯಲ್ಲಿ ತಯಾರು ಮಾಡಬಹುದು. ಅಲ್ಲದೆ, ಕಸಿಗಿಡಗಳನ್ನು ಮಾಡಿದರೆ ಹೆಚ್ಚಿನ ಲಾಭ ಗಳಿಸಬಹುದು ಎಂದರು. 
 
ಪೇತ್ರಿ ಅನ್ನಪೂರ್ಣ ನರ್ಸರಿಯ ಮಾಲೀಕ ಪ್ರಸಾದ್‌ ಭಟ್‌ ಮಾತನಾಡಿ, ನರ್ಸರಿ ಕೃಷಿಯಲ್ಲಿ ಲಾಭ ಗಳಿಸಲು ಹೆಚ್ಚಿನ ಸಮಯಾವಕಾಶ ಬೇಕಾಗುತ್ತದೆ. ನಾವು ಮೊದಲು ಉತ್ತಮ ಗುಣಮಟ್ಟದ ಗಿಡಗಳನ್ನು ಆಯ್ಕೆ ಮಾಡಿ, ಉತ್ತಮ ರೀತಿಯಲ್ಲಿ ಜಾಗರೂಕತೆಯಿಂದ ಪೋಷಣೆ ಮಾಡಿದರೆ ಮಾತ್ರ ಮುಂದೆ ಲಾಭಗಳಿಸಲು ಸಾಧ್ಯ ಎಂದರು. 
 
ನರ್ಸರಿ ಕೃಷಿ ಮಾಡುವವರು ಉತ್ತಮ ಗುಣಮಟ್ಟದಗಿಡಗಳನ್ನು ರೈತರಿಗೆ ಒದಗಿಸುವುದು ಮುಖ್ಯ. ಈ ನಿಟ್ಟಿನಲ್ಲಿ ತೋಟಗಾರಿಕೆ ಇಲಾಖೆಯಿಂದ ನರ್ಸರಿ ಕೃಷಿಗೆ ಸಣ್ಣ ಸಸ್ಯಗಾರ ಮತ್ತು ಮಾದರಿ ಸಸ್ಯಗಾರಕ್ಕೆ ಸಹಾಯ ಧನ ದೊರೆಯುತ್ತದೆ. ಹಾಗೆಯೇ ರೈತರಿಗೆ ಹೆಚ್ಚಿನ ಸಹಕಾರ ಸಹ ಸಿಗುತ್ತದೆ ಎಂದು ಜಿಲ್ಲಾ ಪಂಚಾಯಿತಿ ಸಹಾಯಕ ತೋಟಗಾರಿಕಾ ಅಧಿಕಾರಿ ಗುರುಪ್ರಸಾದ್‌ ತಿಳಿಸಿದರು.
 
ಅಧ್ಯಕ್ಷತೆ ವಹಿಸಿ ಮಾತನಾಡಿದ ಬ್ರಹ್ಮಾವರ ವಲಯ ಕೃಷಿ ತೋಟಗಾರಿಕಾ ಸಂಶೋಧನಾ ಕೇಂದ್ರದ ಸಹ ವಿಸ್ತರಣಾ ನಿರ್ದೇಶಕ ಡಾ. ಎಸ್‌. ಯು. ಪಾಟೀಲ್‌, ಸಸ್ಯಗಾರ ಹೊಂದಿದವರು ಮಾರಾಟ  ಮಾಡುವ ಕಲೆ ಅರಿತಲ್ಲಿ ತಾವು ಬೆಳೆಸಿದ ಗಿಡಗಳಿಗೆ ಉತ್ತಮ ಲಾಭ ಪಡೆದುಕೊಳ್ಳಬಹುದು ಎಂದರು.
 
ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಕಾರ್ಯಕ್ರಮ ಸಂಯೋಜಕ ಡಾ. ಬಿ. ಧಂನಂಜಯ ಇದ್ದರು. ವಿಷಯ ತಜ್ಞ ಎಚ್‌.ಎಸ್‌. ಚೈತನ್ಯ ಸ್ವಾಗತಿಸಿದರು, ಸಂಜೀವ್‌ ಕ್ಯಾತಪ್ಪನವರ್‌ ನಿರೂಪಿಸಿ ದರು, ಡಾ. ಎನ್‌. ನವೀನ್‌ ವಂದಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT