ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರೊಡನೆ ರಾಜಕೀಯ ಸಲ್ಲ

ಮಹಾದಾಯಿ ಧರಣಿ 602ನೇ ದಿನಕ್ಕೆ: ರೈತರ ಹಿತ ಕಾಯಲು ಅಧಿಕಾರ ಬಳಸಿ
Last Updated 9 ಮಾರ್ಚ್ 2017, 10:58 IST
ಅಕ್ಷರ ಗಾತ್ರ
ನರಗುಂದ: ಮಹಾದಾಯಿ ಹೋರಾಟ  600 ದಿನಗಳಿಗೂ ಮೀರಿ ವಿಶ್ವದಾಖಲೆ ಬರದಿದೆ.  ಈ  ಭಾಗದ ಜನಪ್ರತಿನಿಧಿ ಗಳು ಹೋರಾಟವನ್ನು ಬೆಂಬಲಿಸುವ ಬದಲು ಅದನ್ನು ಅಡಗಿಸುವ ಕುತಂತ್ರ ರೂಪಿಸಿದ್ದಾರೆ. 
 
ರೈತರಿಂದ ಪಡೆದ ಅಧಿಕಾರವನ್ನು ಕನಿಷ್ಠ ಸೌಜನ್ಯಕ್ಕಾದರೂ  ರೈತರ ಹಿತಕ್ಕೆ ಬಳಸಬೇಕು ಎಂದು ಮಹಾದಾಯಿ ಹೋರಾಟ ಸಮಿತಿ ಸದಸ್ಯ ಕೃಷ್ಣಪ್ಪ ಜೋಗಣ್ಣವರ ಆಗ್ರಹಿಸಿದರು.
 
ಪಟ್ಟಣದಲ್ಲಿ ನಡೆಯುತ್ತಿರುವ ಮಹಾ ದಾಯಿ ಧರಣಿಯ  602ನೇ ದಿನ ಬುಧ ವಾರ ಅವರು ಮಾತನಾಡಿದರು. ನೀರಾವರಿ ಯೋಜನೆಗಳಿಗಾಗಿ ಹಿಂದೆ ಅನೇಕ ಶಾಸಕರು ತಮ್ಮ ಜೀವದ ಹಂಗು ತೊರೆದು ಹೋರಾಟ ನಡೆಸಿ ದ್ದರು. ಆದರೆ, ಇಂದಿನ ಶಾಸಕರು, ಸಂಸ ದರು ಅದನ್ನೇ ಬಂಡವಾಳವಾಗಿಸಿ ಕೊಂಡು ಅವುಗಳನ್ನು ಈಡೇರಿಸುತ್ತೇವೆ ಎಂದು ಹುಸಿ ಭರವಸೆ ನೀಡುತ್ತಾ ಮೋಸ ಮಾಡುತ್ತಿದ್ದಾರೆ ಎಂದು ದೂರಿದರು.
 
ರಾಜಕೀಯ ಪಕ್ಷಗಳಿಗೆ ಕುಳಿತರೂ, ನಿಂತರೂ ಚುನಾವಣೆಯದ್ದೇ ಧ್ಯಾನ. ಇವರಿಗೆ  ಸಾಮಾನ್ಯರ ಉದ್ಧಾರ ಬೇಕಿಲ್ಲ. ನಿಜವಾದ ಕಳಕಳಿ ಇದ್ದರೆ ಚುನಾವಣೆ ಭ್ರಮೆ ಬಿಟ್ಟು ಮಹಾದಾಯಿ ಯೋಜನೆ ಜಾರಿಗೆ ಕಂಕಣಬದ್ಧರಾಗಬೇಕು ಎಂದು ಕೃಷ್ಣಪ್ಪ ಆಗ್ರಹಿಸಿದರು. 
 
ಮಹಾದಾಯಿ ಹೋರಾಟ ಸಮಿತಿ ಅಧ್ಯಕ್ಷ ವೀರಬಸಪ್ಪ ಹೂಗಾರ, ಪಾಧ್ಯಕ್ಷ ಚಂದ್ರಗೌಡ ಪಾಟೀಲ, ವೆಂಕಪ್ಪ ಹುಜ ರತ್ತಿ, ಶ್ರೀಶೈಲ ಮೇಟಿ, ಹನಮಂತ ಪಡೆ ಸೂರು, ಭೀಮಪ್ಪ ದಿವಟಗಿ, ರತ್ನವ್ವ ಸವಳಬಾವಿ, ವೀರಣ್ಣ ಸೊಪ್ಪಿನ, ಎಸ್‌.ಬಿ. ಜೊಗಣ್ಣವರ,  ಈರಣ್ಣ ಗಡಗಿಶೆಟ್ಟರ, ಸಿದ್ದಪ್ಪ ಚಂದ್ರತ್ನವರ, ಯಲ್ಲಪ್ಪ ಹುಜ ರತ್ತಿ, ಜಗನ್ನಾಥ ಮುಧೋಳೆ ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT