ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತ್ರಕರ್ತೆಯ ಮೊಬೈಲ್‌ ಕರೆ ಸ್ವೀಕರಿಸಿದ ಅನುಷ್ಕಾ ಶರ್ಮಾ

ಆಂಟಿ ನಿಮ್ಮ ಮಗಳು ನನ್ನ ಸಂದರ್ಶನ ಮಾಡುತ್ತಿದ್ದಾರೆ, ಬಳಿಕ ಕರೆಮಾಡಿ
Last Updated 9 ಮಾರ್ಚ್ 2017, 16:43 IST
ಅಕ್ಷರ ಗಾತ್ರ

ಮುಂಬೈ: ಬಾಲಿವುಡ್ ನಟಿ ಅನುಷ್ಕಾ ಶರ್ಮಾ ತಮ್ಮ ಮುಂದಿನ ಚಿತ್ರ ‘ಫಿಲೌರಿ’ ಕುರಿತ ಸಂದರ್ಶನದ ವೇಳೆ ಪತ್ರಕರ್ತೆಯ ಮೊಬೈಲ್‌ಗೆ ಬಂದ ಕರೆಯನ್ನು ಸ್ವೀಕರಿಸಿ ನೆರೆದಿದ್ದವರಲ್ಲಿ ಅಚ್ಚರಿ ಮೂಡಿಸಿದರು.

ತಮ್ಮ ಚಿತ್ರದ ಬಗ್ಗೆ ಮಾತು ಆರಂಭಿಸಿದ ಅನುಷ್ಕಾ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದರು. ಸಂದರ್ಶನದ ಧ್ವನಿ ರೆಕಾರ್ಡ್‌ ಮಾಡಿಕೊಳ್ಳಲು ಅಲ್ಲಿದ್ದ ಪತ್ರಕರ್ತೆಯೊಬ್ಬರು ತಮ್ಮ ಮೊಬೈಲ್‌ ಅನ್ನು  ನಟಿಯ ಮುಂದೆ ಇಟ್ಟಿದ್ದರು.

ಈ ವೇಳೆ ಪತ್ರಕರ್ತೆಯ ಫೋನಿಗೆ ಅವರ ತಾಯಿ ಕರೆ ಮಾಡಿದರು. ತಕ್ಷಣ ಮೊಬೈಲ್‌ ತೆಗೆದು ಕರೆ ಸ್ವೀಕರಿಸಿದ ಅನುಷ್ಕಾ, ‘ಆಂಟಿ ನಿಮ್ಮ ಮಗಳು ನನ್ನ ಸಂದರ್ಶನ ಮಾಡುತ್ತಿದ್ದಾರೆ. ಅನಂತರ ಕರೆ ಮಾಡಿ, ನಾನು ಅನುಷ್ಕಾ ಶರ್ಮಾ’ ಎಂದು ಹೇಳಿ ಕರೆ ಸ್ಥಗಿತಗೊಳಿಸಿದರು.

ಅಲ್ಲಿದ್ದ ಪತ್ರಕರ್ತರೆಲ್ಲರೂ ನಗೆಗಡಲಲ್ಲಿ ತೇಲಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT