ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಸ್ಟ್‌ ಲುಕ್‌ನಲ್ಲಿ ‘ಬೇಗಂ ಜಾನ್‌’ ಮಿಂಚು!

Last Updated 9 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ವಿದ್ಯಾಬಾಲನ್‌ ಅಭಿನಯದ ‘ಬೇಗಂ ಜಾನ್‌’ ಸಿನಿಮಾದ ಫಸ್ಟ್‌ ಲುಕ್‌ ಅನಾವರಣಗೊಂಡಿದೆ. ಹುಕ್ಕಾ ಹಿಡಿದು ಕುರ್ಚಿಯ ಮೇಲೆ ಕುಳಿತಿರುವ ವಿದ್ಯಾಬಾಲನ್‌ ಪಕ್ಕದಲ್ಲಿ ಒಂದು ಬಂದೂಕು ಇದೆ. ‘ಮೈ ಬಾಡಿ ಮೈ ಹೌಸ್‌, ಮೈ ಕಂಟ್ರಿ, ಮೈ ರೂಲ್ಸ್‌’ ಎಂಬ ಬರಹ ಪೋಸ್ಟರ್‌ನಲ್ಲಿದೆ.

ವಿದ್ಯಾ ಬಾಲನ್‌ ಚಿತ್ರದ ಪೋಸ್ಟರ್‌ಅನ್ನು ತಮ್ಮ ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಮಾಡುತ್ತಿದೆ. ‘ಬೇಗಂ ಜಾನ್‌’  ಬೆಂಗಾಲಿ ಸಿನಿಮಾ ‘ರಾಜ್‌ಕಹಿನಿ’ಯ ಹಿಂದಿ ರೂಪಾಂತರವಾಗಿದ್ದು, ಶ್ರೀಜಿತ್‌ ಮುಖರ್ಜಿ ನಿರ್ದೇಶಿಸಿದ್ದಾರೆ.

ದೇಶ ವಿಭಜನೆ ಬಳಿಕ ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿಕೊಂಡಿದ್ದ ಮಹಿಳೆಯ ಕುರಿತ ಕಥೆ ಇರುವ ಈ ಚಿತ್ರದಲ್ಲಿ ‘ಬೇಗಂ ಜಾನ್’ ಆಗಿ ವಿದ್ಯಾ ಬಾಲನ್ ಕಾಣಿಸಿಕೊಂಡಿದ್ದಾರೆ.

ಬೋಲ್ಡ್‌ ಲುಕ್‌ನಲ್ಲಿ ಕಾಣಿಸಿಕೊಂಡಿರುವ ವಿದ್ಯಾ, ಈ ಮೊದಲು ‘ಡರ್ಟಿ ಪಿಕ್ಚರ್‌’, ‘ಕಹಾನಿ 2’ ಸೇರಿದಂತೆ ಅನೇಕ ಚಿತ್ರಗಳಲ್ಲಿ ವಿಶಿಷ್ಟ ಪಾತ್ರಗಳಿಂದ ಗಮನಸೆಳೆದವರು.

ನಾಸಿರುದ್ದೀನ್‌ ಶಾ, ಗೌಹಾರ್‌ ಖಾನ್‌, ಇಳಾ ಅರುಣ್‌, ರಜಿತ್‌ ಕಪೂರ್‌ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಂದಹಾಗೆ ‘ಬೇಗಂ ಜಾನ್‌’ ಚಿತ್ರ ಏ.14ರಂದು ತೆರೆಗೆ ಬರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT