ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲು ಮ್ಯೂಸಿಯಂ

Last Updated 9 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ವಿಶೇಷ ಚಟುವಟಿಕೆಗಳು
* ಮ್ಯೂಸಿಯಂನಲ್ಲಿ ಎಲ್ಲ ವಯೋಮಾನದವರೂ  ಭಾಗವಹಿಸಬಹುದಾದ  ಹಲವು ವಿಶೇಷ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತದೆ.
* ಮಕ್ಕಳು, ಶಾಲಾ ವಿದ್ಯಾರ್ಥಿಗಳು ಮತ್ತು ದೊಡ್ಡವರಿಗಾಗಿ ಪ್ರತ್ಯೇಕ ವಿಭಾಗಗಳಿವೆ.

ವಿಶೇಷ
* ಮ್ಯೂಸಿಯಂನ ಮುಖ್ಯ ಕಟ್ಟಡವನ್ನು ಅಷ್ಟಭುಜಾಕೃತಿ ವಿನ್ಯಾಸದಲ್ಲಿ ನಿರ್ಮಿಸಲಾಗಿದೆ.
* ಮ್ಯೂಸಿಯಂನ ಆವರಣ ಪ್ರವೇಶಿಸಿದರೆ ರೈಲ್ವೆ ನಿಲ್ದಾಣದಲ್ಲಿ ಇರುವಂತೆಯೇ ಭಾಸವಾಗುತ್ತದೆ.
* ಭಾರತೀಯ ರೈಲ್ವೆಗೆ ಸಂಬಂಧಿಸಿದ  ದಾಖಲೆ, ನಕ್ಷೆ, ರೇಖಾಚಿತ್ರಗಳು, ಪುಸ್ತಕಗಳನ್ನು ಇಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ.
* ವಿಶ್ವದ ಅತಿ ಹೆಚ್ಚು ರೈಲ್ವೆ ಮಾದರಿಗಳನ್ನು ಸಂಗ್ರಹಿಸಿರುವ ಮ್ಯೂಸಿಯಂ ಇದಾಗಿದೆ.
* ನೂರು ವರ್ಷ  ರೈಲ್ವೆಯಲ್ಲಿ ಸೇವೆ ಸಲ್ಲಿಸಿದ ಉಗಿ, ಕಲ್ಲಿದ್ದಲು, ಡೀಸೆಲ್‌, ಎಲೆಕ್ಟ್ರಿಕ್‌ ರೈಲು ಎಂಜಿನ್‌ಗಳನ್ನು ಇಲ್ಲಿ ಕಾಣಬಹುದು.
* ದೇಶದ ಅತಿ ದೊಡ್ಡ ‘ರೈಲ್ವೆ ಉದ್ಯಾನ‘ ಸಹ ಈ ಮ್ಯೂಸಿಯಂನಲ್ಲಿದೆ.
* ರೈಲು ಕುರಿತು ಉಪನ್ಯಾಸ, ಚರ್ಚೆ ನಡೆಸಲು ಮತ್ತು ಶಾಲಾ ವಿದ್ಯಾರ್ಥಿಗಳಿಗೆ ಮಾಹಿತಿ ತಿಳಿಸಲು 200 ಆಸನಗಳುಳ್ಳ  ಆಡಿಟೋರಿಯಂ ಇಲ್ಲಿದೆ.
* 3ಡಿ ತಂತ್ರಜ್ಞಾನದ ರೈಲು ಬೋಗಿಗಳ ಮಾದರಿಗಳನ್ನು ಇಲ್ಲಿ ಕಾಣಬಹುದು.

ರಾಷ್ಟ್ರದ ರಸ್ತೆ, ರೈಲು, ವಾಯು ಮತ್ತು ಜಲಮಾರ್ಗಗಳ ಕುರಿತು ಮಾಹಿತಿ ನೀಡುವ ಉದ್ದೇಶದಿಂದ ಈ ಮ್ಯೂಸಿಯಂಗೆ  1971 ಅಕ್ಟೋಬರ್ 7 ರಂದು ಅಡಿಗಲ್ಲು ಹಾಕಲಾಯಿತು. 1995ರ ಹೊತ್ತಿಗೆ ಇದು ಸಂಪೂರ್ಣ ರೈಲ್ವೆ ಮ್ಯೂಸಿಯಂ ಆಗಿ ಪರಿವರ್ತನೆಯಾಯಿತು.

ಎಲ್ಲಿದೆ?
ದೆಹಲಿಯ ಚಾಣಕ್ಯಪುರಿಯಲ್ಲಿ ಇರುವ ಈ ಸಂಗ್ರಹಾಲಯ 1977 ಫೆಬ್ರುವರಿ 1 ರಂದು ಆರಂಭವಾಯಿತು. ಇದು 11 ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣವಾಗಿದೆ. ಮಂಗಳವಾರದಿಂದ ಭಾನುವಾರದವರೆಗೆ  ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ತೆರೆದಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT