ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಬ್ಬನ ಹೆಸರಲ್ಲಿ 550 ಗಿನ್ನಿಸ್‌ ರೆಕಾರ್ಡ್‌!

Last Updated 9 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಅದ್ವಿತೀಯ ಸಾಧನೆ ಮಾಡಿ ಗಿನ್ನಿಸ್ ಬುಕ್ ಆಫ್ ವರ್ಲ್ಡ್‌ ರೆಕಾರ್ಡ್ಸ್‌ನಲ್ಲಿ ಒಮ್ಮೆಯಾದರೂ  ಹೆಸರು ದಾಖಲಿಸ ಬೇಕು ಎಂದು ಹಲವರು ಎಲ್ಲಿಲ್ಲದ ಕಸರತ್ತು ಮಾಡುತ್ತಾರೆ. ಆದರೆ ಈ ವ್ಯಕ್ತಿ ಮಾತ್ರ ತಮ್ಮ ಹೆಸರಲ್ಲಿ ಒಂದಲ್ಲ ಎರಡಲ್ಲ ಬರೊಬ್ಬರಿ 550 ಗಿನ್ನೆಸ್ ವಿಶ್ವ ದಾಖಲೆಗಳನ್ನು ಮುಡಿಗೇರಿಸಿ ಕೊಂಡಿದ್ದಾರೆ!
ನ್ಯೂಯಾರ್ಕ್‌ನ ನಿವಾಸಿ ಅಶ್ರಿತ ಫರ್ಮನ್  ಅವರ ಈ ಸಾಧನೆ ಎಲ್ಲರನ್ನೂ ಆಶ್ಚರ್ಯಕ್ಕೆ ಗುರಿಮಾಡಿದೆ.

ಫರ್ಮನ್ ಮೊದಲು ಶಾರೀರಿಕ ವಾಗಿ ತೀರಾ ಬಲಹೀನರಾಗಿದ್ದರು. ‘ಇಷ್ಟೆಲ್ಲಾ ಸಾಧನೆ ಮಾಡುವ ಸಾಮರ್ಥ್ಯ ನನಗಿದೆ ಎಂದು ಎಂದೂ ಅಂದುಕೊಂಡಿರಲಿಲ್ಲ. ಆದರೆ ಭಾರತದ ಆಧ್ಯಾತ್ಮಿಕ ಗುರುವೊಬ್ಬರ ಮಾರ್ಗದರ್ಶನದಿಂದಲೇ ಇಷ್ಟೆಲ್ಲಾ ಸಾಧ್ಯವಾಯಿತು’ ಎಂದು ತಮ್ಮ ಸಾಧೆನೆಯ ಗುಟ್ಟನ್ನು ಹಲವು ಸಂದರ್ಶನಗಳಲ್ಲಿ ಹಂಚಿಕೊಂಡಿದ್ದಾರೆ.

ಶ್ರೀಚಿನ್ಮಯ ಎಂಬ ಆಧ್ಯಾತ್ಮಿಕ ಮಾರ್ಗದರ್ಶನ ನೀಡುವ ಗುರುಗಳ ಬಳಿ ಅಶ್ರಿತ  ಅವರು ಶಿಷ್ಯನಾಗಿ ಸೇರಿ ಅವರ ಮಾರ್ಗದರ್ಶನ ಮತ್ತು ಅವರು ನೀಡಿದ ಸ್ಫೂರ್ತಿಯಿಂದ ಮೊದಲ ಬಾರಿ 1978ರಲ್ಲಿ ನ್ಯೂಯಾರ್ಕ್‌ನ  ಸೆಂಟ್ರಲ್‌ ಪಾರ್ಕ್‌ನಲ್ಲಿ ಆಯೋಜಿಸಿದ್ದ 24 ಗಂಟೆ ನಿರಂತರವಾಗಿ ಸೈಕಲ್‌ ತುಳಿಯುವ ಸ್ಪರ್ಧೆಯಲ್ಲಿ ಭಾಗವಹಿಸಿ ಮೂರನೇ ಸ್ಥಾನ ಗಳಿಸಿದ್ದರು. ಇದಕ್ಕಾಗಿ ಅವರು ಕೇವಲ ಎರಡು ವಾರ ಅಭ್ಯಾಸ ಮಾಡಿದ್ದರು. ಸ್ಪರ್ಧೆಯಲ್ಲಿ  ಒಟ್ಟು 652 ಕಿ.ಮೀ ದೂರ  ಸೈಕಲ್‌ ತುಳಿದಿದ್ದರು.

ಇದೇ ಸ್ಫೂರ್ತಿಯಿಂದ ವಿಶ್ವದಾಖಲೆ ಮಾಡಲು ಶುರು ಮಾಡಿದ ಅವರು 1979ರಲ್ಲಿ 27ಸಾವಿರ ಜಂಪಿಂಗ್‌ ಜಾಕ್ಸ್ (ಮೇಲಕ್ಕೆ ಎಗರಿ ಎಗರಿ ದೂಕುವುದು) ಮಾಡಿ ಮೊದಲ ಗಿನ್ನಿಸ್‌ ವಿಶ್ವದಾಖಲೆ  ಮಾಡಿದರು. ನಂತರ ನೀರಿನೊಳಗೆ ಹೆಚ್ಚು ದೂರ ಅಂದರೆ 2.8ಕಿ.ಮೀ ಸೈಕಲ್ ತುಳಿದು ಎರಡನೇ ಗಿನ್ನಿಸ್ ದಾಖಲೆ ಮಾಡಿದರು.

ಹೀಗೆ 36 ವರ್ಷದಲ್ಲಿ ಒಟ್ಟು 550 ಗಿನ್ನಿಸ್ ವಿಶ್ವ ದಾಖಲೆಗಳನ್ನು ಅವರು ಮಾಡಿದ್ದಾರೆ. 200 ವಿಶ್ವದಾಖಲೆಗಳು ಇನ್ನೂ ಅವರ ಹೆಸರಲ್ಲೇ ಇವೆ. 40 ದೇಶಗಳಲ್ಲಿ ಅವರು ದಾಖಲೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT