ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಠಿಣ ಶಿಕ್ಷೆಯಾಗಲಿ

ವಾಚಕರ ವಾಣಿ
Last Updated 9 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರಿನಲ್ಲಿ ಒಳಚರಂಡಿ ಮತ್ತು ಇಳಿಗುಂಡಿಗೆ (ಮ್ಯಾನ್‌ಹೋಲ್) ಇಳಿದ ಮೂವರು ಕಾರ್ಮಿಕರು ಮೃತಪಟ್ಟಿರುವುದು ಅತ್ಯಂತ ದುಃಖದಾಯಕ ಸಂಗತಿ. ಒಳಚರಂಡಿಯನ್ನು ಮನುಷ್ಯರಿಂದ ಸ್ವಚ್ಛಗೊಳಿಸುವುದು ಅಪರಾಧ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಹೀಗಿದ್ದರೂ ಗುತ್ತಿಗೆದಾರರು ಹೆಚ್ಚಿನ ಹಣದ ಆಮಿಷ ಒಡ್ಡಿ ಕಾರ್ಮಿಕರನ್ನು ಇಂತಹ ಅಪಾಯಕಾರಿ ಕೆಲಸಗಳಿಗೆ ಬಳಸಿಕೊಳ್ಳುತ್ತಾರೆ.

ಈ ಸಂದರ್ಭದಲ್ಲಿ ಮುಂಜಾಗ್ರತಾ ಕ್ರಮವಾಗಿ ಜೀವರಕ್ಷಕ ಸಲಕರಣೆಗಳನ್ನು ಸಹ ನೀಡದೆ ಕಾರ್ಮಿಕರ ಜೀವವನ್ನು ಪಣಕ್ಕೆ ಒಡ್ಡುತ್ತಾರೆ.

ಇದಕ್ಕೆ ಕಾರಣರಾಗುವ ಎಂಜಿನಿಯರ್‌ಗಳು ಮತ್ತು ಗುತ್ತಿಗೆದಾರರ ವಿರುದ್ಧ ಸರ್ಕಾರ  ಕಠಿಣ ಕ್ರಮ ಜರುಗಿಸಬೇಕು. ಇಲ್ಲವಾದರೆ ಮ್ಯಾನ್‌ಹೋಲ್‌ಗಳು ಮುಂದೆಯೂ ಕಾರ್ಮಿಕರ ಬಲಿ ಪಡೆಯುತ್ತಲೇ ಹೋಗುತ್ತವೆ.

-ಅನಿಲ್ ಕುಮಾರ್, ದಾವಣಗೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT